ಹಾಸನ

ಸುದ್ದಿ ಸಂಕ್ಷೇಪ

Published On :

ಅಯ್ಯಪ್ಪಸ್ವಾಮಿ ಐದನೇ ವರ್ಷದ ಮಂಡಲ ಪೂಜೆ
ಹಾಸನ: ನಗರದ ದೇವಿಗೆರೆ ವೃತ್ತದಲ್ಲಿ ಕಲಿಯುಗ ದೈವ ಅಯ್ಯಪ್ಪ ಸ್ವಾಮಿಯ 5ನೇ ವರ್ಷದ ಮಂಡಲ ಪೂಜೆ ಮಹೋತ್ಸವ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆಯಿಂದ ಸಂಜೆವರೆಗೂ ಭಕ್ತಾಧಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಈ ವೇಳೆ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಮಾಜಿ ಅಧ್ಯಕ್ಷ ಚನ್ನವೀರಪ್ಪ, ನಗರಸಭೆ ಸದಸ್ಯ ಕುಮಾರ್, ರವಿನಾಕಲಗೂಡು ಇತರರು ಇದ್ದರು.
ಇಂದು ಜಿಲ್ಲೆಯಲ್ಲಿ ಲೋಕಾಯುಕ್ತರ ಪ್ರವಾಸ ಕಾರ್ಯಕ್ರಮ    
ಹಾಸನ: ಲೋಕಾಯುಕ್ತ ಪೊಲೀಸ್ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಹಾಗೂ ಲೋಕಾಯುಕ್ತ ಡಿವೈಎಸ್ಪಿ ಮತ್ತು ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ  ಡಿ.28 ರಂದು ಬೇಲೂರು ತಾಲೂಕು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಮಧ್ಯಾಹ್ನ 1.30 ರವರೆಗೆ ನಂತರ ಹಾಸನ ತಾಲೂಕು ಪ್ರವಾಸಿ ಮಂದಿರದಲ್ಲಿ ಮಧ್ಯಾಹ 2ರಿಂದ ಸಂಜೆ 5.30 ರವರೆಗೆ ಭೇಟಿ ನೀಡುವರು. ಈ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು,  ತಮ್ಮ ಅಹವಾಲು ಸಲ್ಲಿಸಬಹುದು.
ರಾಹುಲ್‌ಗಾಂಧೀ ಪ್ರಧಾನಿ ಅಭ್ಯರ್ಥಿ: ಘೋಷಣೆಗೆ ಆಗ್ರಹ
ಹಾಸನ: ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾ ಸಮಿತಿ ಪುನರ್‌ರಚಿಸಲಾಗಿದ್ದು, ರಾಹುಲ್‌ಗಾಂಧಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಗೆ ಮನವಿ ಮಾಡಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.
ಸಂಘಟನೆಯ ಜಿಲ್ಲಾಧ್ಯಕ್ಷ ಸಿ.ವಿ .ರಾಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯನ್ನು ಪುನರ್‌ರಚಿಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕೂರು ಬಸವರಾಜ್, ಹಾಸನ ನಗರ ಬ್ಲಾಕ್ ಅಧ್ಯಕ್ಷ ರಮೇಶ್ ಜವರೇಗೌಡ, ಹಾಸನ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ  ಬೂದೇಶ ಯರೇಹಳ್ಳಿ,  ಹೊಳೆನರಸೀಪುರ ಬ್ಲಾಕ್ ಅಧ್ಯಕ್ಷ ಬಸವರಾಜು, ಹೊಳೆನರಸೀಪುರ ಪಟ್ಟಣ ಬ್ಲಾಕ್ ಅಧ್ಯಕ್ಷೆ ವನಜಾಕ್ಷಿ ರಂಗೇಗೌಡ, ದುದ್ದ ಬ್ಲಾಕ್ ಅಧ್ಯಕ್ಷ ಶಂಕರಣ್ಣ, ಅರಸೀಕೆರೆ ಬ್ಲಾಕ್ ಮಲ್ಲಿಕಾರ್ಜುನ, ಗಂಡಸಿ ಬ್ಲಾಕ್ ಜಕ್ಕಯ್ಯ, ಜಾವಗಲ್ ಬ್ಲಾಕ್ ವಿರೂಪಾಕ್ಷಪ್ಪ.
 ಸಕಲೇಶಪುರ ಗ್ರಾಮಾಂತರ ಬ್ಲಾಕ್ ಭಾಸ್ಕರ್, ಸಕಲೇಶಪುರ ಪಟ್ಟಣ  ಬ್ಲಾಕ್ ತುಳಸಿಪ್ರಸಾದ್, ಆಲೂರು ಬ್ಲಾಕ್ ಕೃಷ್ಣ, ಅರಕಲಗೂಡು ಬ್ಲಾಕ್  ಡಿ.ಸಿ.ಜವರೇಗೌಡ, ಹಳ್ಳಿಮೈಸೂರು ಬ್ಲಾಕ್ ಎಂ.ಎಚ್.ವಿಶ್ವನಾಥ್,  ಚನ್ನರಾಯಪಟ್ಟಣ ಬ್ಲಾಕ್ ಎಂ.ಎ.ರವಿ, ಬೇಲೂರು ಬ್ಲಾಕ್ ಪೂರ್ಣೇಶ್ ಅವರನ್ನು  ನೇಮಕ ಮಾಡಲಾಗಿದೆ ಎಂದು ಸಿ.ವಿ. ರಾಜಪ್ಪ ತಿಳಿಸಿದ್ದಾರೆ.
'ಕರುನಾಡಿಗರ ಹೆಮ್ಮೆಕವಿ ಡಾ.ಜಿಎಸ್‌ಎಸ್‌'
ಸಕಲೇಶಪುರ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಕರುನಾಡಿಗರ ಹೆಮ್ಮೆಯಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ. ಮಂಜುನಾಥ್ ಹೇಳಿದರು.
   ಪಟ್ಟಣದ ಮೀರಸಾಗರ್ ಸಭಾಂಗಣದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಶಿವರುದ್ರಪ್ಪ ಅವರು ಸಾಹಿತ್ಯಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇಂಥ ಸಾಹಿತಿಯನ್ನು ಕಳೆದುಕೊಂಡಿರುವ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದರು.
 ಪ್ರಾಂಶುಪಾಲ ವೇಣುಗೋಪಾಲ್ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್, ಶಾರದ ಗುರುಮೂರ್ತಿ ಮಾತನಾಡಿದರು. ಡಿ.ಎಂ ಶಿವಪ್ರಸಾದ್,ಮಲ್ನಾಡ್ ಮಹಬೂಬ್, ಆಟೋ ರಮೇಶ್, ಚೇತನ್ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.