ಶಾಂತರಾಜುಗೆ ನೆರವಿಗೆ ಮನವಿ
ಹಾಸನ: ಕಳೆದ 1 ವರ್ಷದಿಂದ ವಿಚಿತ್ರ ರೋಗದಿಂದ ಬಳಲುತ್ತಿರುವ ಶಾಂತರಾಜು ಅವರಿಗೆ ಸಹಾಯಹಸ್ತ ನೀಡುವಂತೆ ಪ್ರಕಾಶ್ ಮನವಿ ಮಾಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಗ್ಗೇಹಳ್ಳಿ ಹೋಬಳಿಯ ದಾಸಪುರ ಗ್ರಾಮದ ವಾಸಿ ಡಿ.ಸಿ. ಜೋಸೆಫ್ ಹಾಗೂ ಜಿವಾನಿ ಅವರು ಪುತ್ರನಾಗಿದ್ದು, ಅವರ ದೇಹದಲ್ಲಿ ಕಳೆದ ಒಂದು ವರ್ಷದಿಂದ ಬಿಳಿ ರಕ್ತ ಹಾಗೂ ಕೆಂಪು ರಕ್ತಕಣಗಳ ಉತ್ಪತ್ತಿಯು ಸಂಪೂರ್ಣವಾಗಿ ನಿಂತು ಹೋಗಿದೆ. ಇದರಿಂದ ಪ್ರತಿ 20 ದಿನಗಳಿಗೊಮ್ಮೆ ಹೊಸ ರಕ್ತವನ್ನು ಶಾಂತರಾಜು ಅವರಿಗೆ ನೀಡಬೇಕಾಗಿದೆ. ಆದರೆ, ಆರ್ಥಿಕವಾಗಿ ಈ ಕುಟುಂಬ ಕಡು ಬಡವರಾಗಿದ್ದು, ತಮ್ಮ ಪುತ್ರನಿಗೆ ರಕ್ತವನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ. ಒಂದು ಬಾರಿ ರಕ್ತವನ್ನು ಕೊಡಿಸಲು ಸುಮಾರು 10 ಸಾವಿರ ರು.ಗಳವರೆಗೆ ಆಗುವುದರಿಂದ ಇದು ಸಾಧ್ಯವಾಗುವುದಾಗಿದೆ. ಶಾಂತರಾಜು ಅವರ ದೇಹದಲ್ಲಿ ಉಂಟಾಗಿರುವ ಕೊರತೆಯ ಚಿಕಿತ್ಸೆಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸುಮಾರು ರು. 5 ಲಕ್ಷಗಳಾಗಲಿದೆ ಎಂದು ತಿಳಿಸಿದ್ದಾರೆ. ಇದು ಈ ಬಡ ಕುಟುಂಬದಿಂದ ಸಾಧ್ಯವಾಗದ ಕಾರಣ ಸಹಾಯ ಹಸ್ತವನ್ನು ಕೋರುತ್ತಿದ್ದಾರೆ ಎಂದರು. ಈತ ವೃತ್ತಿಯಲ್ಲಿ ಚಾಲಕನಾಗಿದ್ದು, ಕಳೆದ 1 ವರ್ಷದಿಂದ ಆ ವೃತ್ತಿಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕುಟುಂಬ ನಿರ್ವಹಣೆಯೂ ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಹಾಯಹಸ್ತ ನೀಡವವರು ಶಾಂತರಾಜು, ನಂ.4350108001441, ಕೆನರಾ ಬ್ಯಾಂಕ್ ಅಕ್ಕನಹಳ್ಳಿ ಬ್ರಾಂಚ್, ನುಗ್ಗೇಹಳ್ಳಿ ಹಾಗೂ ಮೊ ನಂ.8971483503 ನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

