ಅಂಚೆ ಇಲಾಖೆ ಅರ್ಜಿ ಆಹ್ವಾನ
ಹಾಸನ: ಭಾರತೀಯ ಅಂಚೆ ಇಲಾಖೆ, ಬೆಂಗಳೂರಿನ ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪೋಸ್ಟ್ ಮ್ಯಾನ್ -248 ಹುದ್ದೆ, ಮೇಲ್ ಗಾರ್ಡ್-10 ಹುದ್ದೆ, ಅರ್ಜಿ ಸಲ್ಲಿಸಲು ಜನವರಿ 3, 2014 ಕಡೆಯ ದಿನವಾಗಿದ್ದು ಅರ್ಜಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಸಂಬಂಧಿಸಿದ ವಿಭಾಗೀಯ ಅಂಚೆ ಅಧೀಕ್ಷಕರಿಗೆ ಮಾತ್ರ ಸಲ್ಲಿಸಬೇಕು. ವಿಭಾಗೀಯವಾರು ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವಯೋವುತಿ, ಅರ್ಜಿ ಪಡೆಯುವ ಮತ್ತು ಸಲ್ಲಿಸುವ ವಿಧಾನ ಇತ್ಯಾದಿ ಮಾಹಿತಿಯನ್ನು ಅಂಚೆ ಇಲಾಖೆಯ ಅಂತರ್ಜಾಲ ತಾಣ ಢಿಢಿಢಿ. ್ಞಛ್ಠಟಿಛಡಿಛ ್ಞಛಠ್ಟಡಡಿ.
್ಜ್ಟಢ.್ಝಟಿ ್ಟ್ಠ ಢಿಢಿಢಿ.್ಝಟಿಜ್ಝಛಠ್ಟಡಡಿ. ್ಜ್ಟಢ.್ಝಟಿ ಮೂಲಕ ಪಡೆಯಬಹುದಾಗಿದೆ ಹಾಗೂ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸುವಂತೆ ಹಾಸನ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಪೂರ್ವಭಾವಿ ಸಭೆ
ಹಾಸನ: ತಾಲೂಕಿನ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಪಠ್ಯಕ್ರಮ ಸಿ ಬಿ ಎಸ್ಸಿ, ಐಸಿಎಸ್ಸಿ ಪಠ್ಯಕ್ರಮ ಅನುಸರಿಸುವ ಶಾಲೆಗಳು ಸೇರಿದಂತೆ ಆಡಳಿತ ಮಂಡಳಿಯವರಿಗೆ 2014-15 ನೇ ಸಾಲಿಗೆ ಆರ್.ಟಿ.ಇ ಅಡಿ ಮಕ್ಕಳನ್ನು ದಾಖಲಿಸುವ ಕುರಿತು ಚರ್ಚಿಸಲು ಜ. 2ರಂದು ಬೆಳಗ್ಗೆ 10ಕ್ಕೆ ನಗರದ ಬಿ.ಅರ್.ಸಿ ಕೇಂದ್ರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಗೆ ಕಡ್ಡಾಯವಾಗಿ ಹಾಸನ ತಾಲ್ಲೂಕಿನ ಎಲ್ಲಾ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು ಮುಖ್ಯ ಶಿಕ್ಷಕರು ಹಾಜರಾಗಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ, ಶಿಕ್ಷಣ ಸಂಯೋಜಕ ರಾಜೇಗೌಡ ಅವರ ಮೊ. 9945330304 ಸಂಪರ್ಕಿಸಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿದ್ದಾರೆ.
ಅಪರಿಚಿತ ಶವ ಪತ್ತೆ
ಹಾಸನ: ಹೊಳೆನರಸೀಪುರದ ಕೆ.ಎಸ್.ಆರ್.ಟಿ.ಸಿ. ಬಸ್ನಿಲ್ದಾಣದಲ್ಲಿ ಇತ್ತೀಚೆಗೆ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಈತನಿಗೆ 50ರಿಂದ 55ವರ್ಷ ವಯಸ್ಸಾಗಿದ್ದು ಅನಾರೋಗ್ಯ ಅಥವಾ ಕಾಯಿಲೆ ನಿಮಿತ್ತ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರಿದ್ದಲ್ಲಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರನ್ನು ಸಂಪರ್ಕಿಸಲು ಕೋರಿದ್ದಾರೆ.
ಟಿವಿಎಸ್ ಜೂಪಿಟರ್ ಲೋಕಾರ್ಪಣೆ
ಹಾಸನ: ಟಿವಿಎಸ್ ಕಂಪನಿಯ ಅಧಿಕೃತ ಮಾರಾಟಗಾರ ಶ್ರೀ ಕೃಷ್ಣ ಮೋಟಾರ್ಸ್ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಸುಂದರ ಸಮಾರಂಭದಲ್ಲಿ ಟಿವಿಎಸ್ ಕಂಪನಿಯ ನೂತನ ವಾಹನ ಟಿವಿಎಸ್ ಜೂಪಿಟರ್ ಅನ್ನು ಶಾಸಕ ಹೆಚ್.ಎಸ್. ಪ್ರಕಾಶ್ ಇತ್ತೀಚೆಗೆ ಲೋಕಾರ್ಪಣೆ ಮಾಡಿದರು. ಟಿವಿಎಸ್ ಕಂಪನಿಯ ಟೆರಿಟರಿ ವ್ಯವಸ್ಥಾಪಕ ಜಿ. ಮನೋಹರ್ ಮಾತನಾಡಿ, ಜ್ಯೂಪಿಟರ್ಗೆ 2013ನೇ ಸಾಲಿನ ಸ್ಕೂಟರ್ ಆಫ್ದಿ ಇಯರ್ ಪ್ರಶಸ್ತಿ ಲಭಿಸಿದೆ ಎಂದರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್ ಪಾಷಾ, ಕೆಸಿಪಿ ಗ್ರೂಪ್ಸ್ ಮಾಲೀಕ ಕೆ.ಸಿ. ಪುಟ್ಟಸ್ವಾಮಿಗೌಡ, ಶ್ರೀ ಕೃಷ್ಣ ಮೋಟಾರ್ಸ್ ವ್ಯವಸ್ಥಾಪಕ ಪಾಲುದಾರ ಹೆಚ್.ಪಿ. ಕಿರಣ್, ಹಣಕಾಸು ಸಲಹೆಗಾರ ಸಿ.ಎಸ್. ನಾಗೇಶ್, ಟಿವಿಎಸ್ ಕಂಪನಿ ಏರಿಯಾ ವ್ಯವಸ್ಥಾಪಕ ಚಂದ್ರಶೇಖರ್ ಇದ್ದರು.
ಎಲೈಟ್ ಶಾಲೆ ಮಕ್ಕಳು ಪ್ರಾರ್ಥನಾ ಗೀತೆಗೆ ನೃತ್ಯ ಮಾಡಿದರು. ಕೊನೆಯಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಪಡೆದಿರುವ ಕಲಾವಿದೆ ಇಂದುಶ್ರೀ ಮತ್ತು ತಂಡದವರಿಂದ ಮಾತನಾಡುವ ಬೊಂಬೆ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

