ಹಾಸನ

ಆಧಾರ್ ಕಾರ್ಡ್ ನೋಂದಣಿಗೆ ಮಾರ್ಚ್ವರೆಗೆ ಗಡುವು

Published On :

ಹೊಳೆನರಸೀಪುರ: ಆಧಾರ್ ಕಾರ್ಡ್ಗಳ ನೋಂದಣಿಗೆ ಮುಂದಿನ ವರ್ಷದ ಮಾ. 30 ಕೊನೆಯ ದಿನವಾಗಲಿದೆ ಎಂದು ತಾಲೂಕು ಕಚೇರಿಯ ಶಿರಸ್ತೇದಾರ್ ನಂಜೇಗೌಡ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಮೇಲ್ಭಾಗದಲ್ಲಿ ನೂತನವಾಗಿ ತೇರಾ ಸಾಫ್ಟ್ವೇರ್ ಕಂಪನಿ ಇತ್ತೀಚೆಗೆ ಆಯೋಜಿಸಿದ್ದ ಆಧಾರ್ ಕಾರ್ಡ್ ನೋಂದಣಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಲಹೆ: ಆಧಾರ್ ಕಾರ್ಡ್ ಮುಂದಿನ ದಿನಗಳಲ್ಲಿ ಪ್ಯಾನ್ ಕಾರ್ಡ್ಗೂ ಸಹ ಮಾಹಿತಿ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಅನುಮೋದನೆ ನೀಡುತ್ತಿದ್ದು, ಇನ್ನು ಮುಂದೆ ಆಧಾರ್ ಕಾರ್ಡ್ ಇಲ್ಲದೇ ಯಾವುದೇ ಸರ್ಕಾರಿ ಕಚೇರಿಗಳಲ್ಲೂ ದೈನಂದಿನ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಆದ್ದರಿಂದ ತಾಲೂಕಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಿಸದ ಕುಟುಂಬದ ಸದಸ್ಯರು ತಕ್ಷಣ ತಮ್ಮ ನೋಂದಣಿ ಮಾಡಿಸುವಂತೆ ಸಲಹೆ ನೀಡಿದರು.
ತೇರಾ ಸಾಫ್ಟ್ವೇರ್ ಕಂಪನಿಯ ವಿಭಾಗೀಯ ಅಧಿಕಾರಿ ವಾಸು ಮಾತನಾಡಿ,  ಪ್ರಸ್ತುತ ನಮ್ಮ ಕಂಪನಿಯಿಂದ ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದು ಮುಂದಿನ ವಾರದಲ್ಲಿ ತಾಲೂಕಿನ ನಾನಾ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ನಮ್ಮ ಸಂಸ್ಥೆ ನೋಂದಣಿ ಕಾರ್ಯ ಆರಂಭಿಸಲಿದೆ. ಮಾ. 30ರೊಳಗೆ ತಾಲೂಕಿನ ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲರ ನೋಂದಣಿ ಕಾರ್ಯ ಮುಗಿಸಲಾಗುವುದು.
ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾ. 30 ಕೊನೆಯ ದಿನವಾಗಲಿದೆ. ಆದ್ದರಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಜನರು ತುರ್ತಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಸುವಂತೆ ತಿಳಿಸಿದರು.
ಶಾಂತಚಿತ್ತದಿಂದ ವರ್ತಿಸಿ: ತೇರಾ ಸಾಫ್ಟ್ವೇರ್ ಕಂಪನಿಯ ಉಸ್ತುವಾರಿ ಅಧಿಕಾರಿ ಜಾಕೀರ್ ಹುಸೇನ್ ಮಾತನಾಡಿ, ಆಧಾರ್ ಕಾರ್ಡ್ ನೋಂದಣಿಗೆ ಗ್ರಾಮೀಣ ಪ್ರದೇಶಗಳಿಂದ ನೂರಾರು ಮಂದಿ ಆಗಮಿಸಿ ನೋಂದಣಿಗೆ ಬರುತ್ತಾರೆ. ಅಂತಹ ಜನರನ್ನು ಸಂಬಾಳಿಸಿ ನೋಂದಣಿ ಮಾಡಿ ಕಳುಹಿಸಿಕೊಡುವುದು ನಮ್ಮ ಉದ್ದೇಶವಾಗಿದೆ. ಆದ್ದರಿಂದ ನೋಂದಣಿ ಮಾಡಿಕೊಳ್ಳುವ ಸಿಬ್ಬಂದಿ ನೋಂದಣಿಗೆ ಬಂದರವರ ಜತೆಯಲ್ಲಿ ಶಾಂತಚಿತ್ತದಿಂದ ಕೆಲಸ ನಿರ್ವಹಿಸುವಂತೆ ತಮ್ಮ ಸಿಬ್ಬಂದಿಗೆ ಕಿವಿ ಮಾತು ಹೇಳಿದರು.
ತೇರಾ ಸಾಫ್ಟ್ವೇರ್ ಕಂಪನಿ ಸಿಬ್ಬಂದಿಗಳಾದ ಮುರುಳಿ, ರವಿ, ಶಶಿ , ವೇಣುಗೋಪಾಲ್, ಮಂಜುನಾಥ್, ಶಾಖಾ ಗ್ರಂಥಾಲಯದ ಜಯಲಿಂಗಪ್ಪ  ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.