ಹಾಸನ

ದತ್ತಾಶ್ರಮಕ್ಕೆ ಶಂಕುಸ್ಥಾಪನೆ

Published On :

ಹೊಳೆನರಸೀಪುರ: ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿನ ಇಂಟರ್ ನ್ಯಾಷನಲ್ ಕನಕದಾಸ ಮಿಷನ್ನ ಅಧ್ಯಕ್ಷರಾದ ಕೋಡಿಹಳ್ಳಿ ನಂಜುಂಡೇಗೌಡ ಅವರು ತಮ್ಮ ಗ್ರಾಮದಲ್ಲಿ ಆರಂಭಿಸಲು ಉದ್ಧೇಶಿಸಲಾಗಿರುವ ಸದ್ಗುರು ಸದಾನಂದ ದತ್ತಮಹಾರಾಜರ ದತ್ತಾಶ್ರಮ ಕಟ್ಟಡದ ಶಂಕುಸ್ಥಾಪನಾ ಕಾರ್ಯ ಇತ್ತೀಚೆಗೆ ನಡೆಯಿತು.
ಶಂಕುಸ್ಥಾಪನೆ: ಸಂಸ್ಥೆಯ ಅಧ್ಯಕ್ಷರಾದ ಕೋಡಿಹಳ್ಳಿ ನಂಜುಂಡೇಗೌಡ ಅವರು, ತಮ್ಮ ಪೋಷಕರಾದ ದಿ.ಕಾಳೇಗೌಡ ಹಾಗೂ ಸಾವಿತ್ರಮ್ಮ ಅವರ ಜ್ಞಾಪಕಾರ್ಥವಾಗಿ ದತ್ತಾಶ್ರಮಕ್ಕೆ ಎರಡು ಎಕರೆ ಜಮೀನನ್ನು ಶ್ರವಣೂರು ಗ್ರಾಪಂ ವ್ಯಾಪ್ತಿಗೆ ಸೇರಿರುವ ಉದ್ದಿನ ಬೋರೆ ಕಾವಲು ಗ್ರಾಮದಲ್ಲಿ ದಾನವಾಗಿ ನೀಡಿ, ಸದ್ಗುರು ಸದಾನಂದ ದತ್ತಮಹಾರಾಜರ ದತ್ತಾಶ್ರಮ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಶ್ಲಾಘನೆ: ತಾಲೂಕು ಕಸಾಪ ಮಾಜಿ ಅಧ್ಯಕ್ಷ  ಕೆ.ಬಿ.ವೆಂಕಟಸ್ವಾಮಿ  ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದತ್ತಾಶ್ರಮ ಸ್ಥಾಪನೆಯ ಧ್ಯೇಯ ಮತ್ತು ಉದ್ಧೇಶಗಳನ್ನು ಕೋಡಿಹಳ್ಳಿ ನಂಜುಂಡೇಗೌಡ ಅವರು ವಿವರಿಸಿದರು. ದತ್ತಾಶ್ರಮದ ಸ್ಥಾಪನೆಯ ಸ್ಥಳದಲ್ಲಿ ಕುಡಿಯುವ ನೀರಿಗಾಗಿ ನಂಜುಂಡೇಗೌಡ ಅವರೇ ಖುದ್ದಾಗಿ ಕೊಳವೆ ಬಾವಿಯನ್ನು ತಮ್ಮ ಖರ್ಚಿನಲ್ಲಿಯೇ ತೆಗೆಸಿಕೊಟ್ಟು ಸಹಕರಿಸಿರುವುದನ್ನು ನೆರೆದಿದ್ದ ದತ್ತಾಶ್ರಮದ ಭಕ್ತರು ಶ್ಲಾಘಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.