ಮೋದಿ ಪ್ರಧಾನಿಯಾಗಲಿದ್ದಾರೆ: ಗೋ.ಮ
ಅರಸೀಕೆರೆ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯ ನರೇಂದ್ರ ಮೋದಿ ಪ್ರಧಾನಿ ಪಟ್ಟಕೇರುವುದು ಕಚಿತ ಎಂದು ಬಿಜೆಪಿ ಮುಖಂಡ ವಿಧಾನ ಪರಿಷತ್ತು ಸದಸ್ಯ ಗೋ. ಮಧುಸೂಧನ್ ಅಭಿಪ್ರಾಯಪಟ್ಟರು.
ಕರೆ: ಪಟ್ಟಣದ ಸಿದ್ದರಾಮೇಶ್ವರ ಸಮುಧಾಯ ಭವನದಲ್ಲಿ ಜಿಲ್ಲಾಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಣದ ವಸ್ತು ಪ್ರದರ್ಶನವನ್ನು ಸೋಮವಾರ ಉದ್ಘಾಟನಾ ಸಮಾರಂಭಕ್ಕೇ ಆಗಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿಯ ಅಲೆ ರಾಷ್ಟ್ರದಾದ್ಯಂತ ಹರಡಿ ಬಿರುಗಾಳಿಯಾಗಿ ಈಗ ಸುನಾಮಿಯಾಗಿ ಕಂಡುಬರುತ್ತಿದ್ದು, ಇದನ್ನು ಮತವನ್ನಾಗಿ ಪರಿವರ್ತಿಸಲು ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಕರೆ ನೀಡಿದರು.
ಭಾರೀ ಅಲೆ: ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗುವುದಕ್ಕೆ ಮುನ್ನ ಮೋದಿ ಬಂದರೆ 180 ಸ್ಥಾನಗಳನ್ನು ಪಡೆಯಬಹುದೆಂದು ಸಮೀಕ್ಷೆಗಳು ಹೇಳುತ್ತಿದ್ದವು. ಈಗ ಅದು 240ರ ಗಡಿ ದಾಟಿದ್ದು ನಾವು 272 ಸಾಧನೆ ಮಾಡಲು ಬಿಜೆಪಿ ದಾಪುಗಾಲು ಹಾಕಿದೆ. ಉತ್ತರಪ್ರದೇಶ, ಬಿಹಾರ್ನಲ್ಲಿ ಯಾರು ಬಹುಮತ ಪಡೆಯುತ್ತಾರೋ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಾರೆ. ಎರಡು ರಾಜ್ಯದ 142 ಸ್ಥಾನಗಳಲ್ಲಿ ಬಿಜೆಪಿ 100 ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ. ಅಲ್ಲದೆ ಮದ್ಯಪ್ರದೇಶ, ರಾಜ್ಯಸ್ಥಾನ್, ಚತ್ತಿಸ್ಗಢದಲ್ಲಿ ಬಿಜೆಪಿಯ ಭಾರೀ ಅಲೆ ಕಂಡುಬರುತ್ತಿದೆ ಎಂದರು.
ಹೋರಾಟ: ಕಳೆದ ಬಾರಿ ರಾಜ್ಯ ವಿಧಾನಸಬಾ ಚುನಾವಣೆಯ ಸೋಲಿನ ನಂತರ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕಂಡು ಬರುತ್ತಿದ್ದು, ಕಳೆದ ಬಾರಿ ನಾವು ಮಾಡಿದ ತಪ್ಪಿನಿಂದಾಗಿ ಅಧಿಕಾರದಿಂದ ವಂಚಿತರಾಗಬೇಕಾಯಿತು. ಅದಕ್ಕೆ ಬಿಜೆಪಿಯ ಮತ ವಿಭಜನೆ ಕಾರಣವಾಗಿದ್ದು, ಪಕ್ಷ ತೊರೆದು ಕೆಜೆಪಿ ಪಕ್ಷ ಕಟ್ಟಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಎಸ್ಆರ್ ಕಾಂಗ್ರೆಸ್ನ ಶ್ರೀರಾಮುಲು ಬಿಜೆಪಿಗೆ ವಾಪಸ್ಸು ಬರಲಿದ್ದಾರೆ. ಕಳೆದ ಬಾರಿ 18 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, ಈ ಬಾರಿ 22 ಸ್ಥಾನಗಳನ್ನು ಗಳಿಸಲು ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ಜನಪ್ರಿಯತೆ ಕ್ಷೀಣ: ಹಾಸನ ಕ್ಷೇತ್ರದಲ್ಲೂ ಎಚ್.ಡಿ. ದೇವೇಗೌಡ ಅವರ ಜನಪ್ರಿಯತೆ ಕ್ಷೀಣಿಸುತ್ತಿದ್ದು ಕಾಂಗ್ರೆಸ್ ಕೂಡ ಹಿನ್ನೆಡೆ ಅನುಭವಿಸುತ್ತಿದ್ದು ಬಿಜೆಪಿ ಪ್ರಭಾವಶಾಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪ್ರಭಲ ಸ್ಪರ್ಧೆ ನೀಡಲಿದೆ ಎಂದು ಹೇಳಿದರು.
ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದರೆ ದೇಶದ ಆರ್ಧಿಕ ಪರಿಸ್ಥಿತಿ ಉತ್ತಮವಾಗಲಿದೆ. ರಕ್ಷಣಾ ವ್ಯವಸ್ಥೆ ಬಲಗೊಳ್ಳಲಿದೆ, ಉಗ್ರಗಾಮಿಗಳ ಸದ್ದು ಅಡಗಲಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎನ್.ಡಿ. ಪ್ರಸಾದ್, ಹಿರಣ್ಣಯ್ಯ, ಮನೋಜ್ ಕುಮಾರ್, ಚೇತನ್ ಕುಮಾರ್, ಪ್ರಭಾಕರ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

