ಅಭ್ಯರ್ಥಿಗಳ ಆಯ್ಕೆಗೆ ಆಹ್ವಾನ
ಹಾಸನ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಡೆಸುತ್ತಿರುವ ಕ್ರೀಡಾ ಶಾಲೆ, ಕ್ರೀಡಾ ನಿಲಯಗಳಿಗೆ ಹಾಗೂ ಹಾಸನ ಕ್ರೀಡಾ ವಸತಿ ಶಾಲೆಗೆ 2014-15ನೇ ಸಾಲಿಗೆ ಅರ್ಹ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಡಿ. 30ರಿಂದ ಜ. 4ರವರೆಗೆ ನಡೆಯಲಿದ್ದು ಅರ್ಹ ಕ್ರೀಡಾಪಟುಗಳು ಭಾಗವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ತಿಳಿಸಿದ್ದಾರೆ.
ಡಿ.31ರಂದು ಬೇಲೂರು ಮತ್ತು ಅರಕಲಗೂಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಜನವರಿ 1ರಂದು ಚನ್ನರಾಯಪಟ್ಟಣ ತಾಲ್ಲೂಕಿನ ದಿಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ, ಜ. 2ರಂದು ಹೊಳೆನರಸೀಪುರ ತಾಲ್ಲುಕು ಕ್ರೀಡಾಂಗಣ ಮತ್ತು ಅರಸೀಕೆರೆಯ ರೇಲ್ವೆ ಕ್ರೀಡಾ ಮೈದಾನದಲ್ಲಿ, 3ರಂದು ಶಾಂತಿಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, 4ರಂದು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಲಿದೆ. ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಪ್ರಾರಂಭವಾಗಲಿದೆ. ಕಿರಿಯರ ವಿಭಾಗದಲ್ಲಿ ಬಾಲಕ ಬಾಲಕಿಯರು ಮುಂದಿನ ಜೂ. 1ಕ್ಕೆ 14 ವರ್ಷ ಮೀರಿರಬಾರದು ಹಾಗೂ 8ನೇ ತರಗತಿ ಸೇರಲು ಅರ್ಹತೆ ಪಡೆದಿರಬೇಕು.
ಹಿರಿಯರ ವಿಭಾಗದಲ್ಲಿ ಬಾಲಕ ಬಾಲಕಿಯರು ಮುಂದಿನ ಜೂ. 1ಕ್ಕೆ 18 ವರ್ಷ ಮೀರಿರಬಾರದು ಹಾಗೂ ಪ್ರಥಮ ಪಿ.ಯು.ಸಿ.ಗೆ ಸೇರಲು ಅರ್ಹತೆ ಹೊಂದಿರಬೇಕು. ಹಾಸನ ಕ್ರೀಡಾ ವಸತಿ ಶಾಲೆಗೆ ಹಾಕಿ ಮತ್ತು ವಾಲಿಬಾಲ್ ಕ್ರೀಡೆಗೆ ಮಾತ್ರ ಆಯ್ಕೆ ಮಾಡಲಾಗುವುದು. ಬಾಲಕ ಬಾಲಕಿಯರು ಮುಂದಿನ ಜೂ. 1ಕ್ಕೆ 11 ವರ್ಷ ಮೀರಿರಬಾರದು ಹಾಗೂ ಮುಂದಿನ ಶೈಕ್ಷಣಿಕ ವರ್ಷಕ್ಕೆ 5ನೇ ತರಗತಿ ಸೇರಲು ಅರ್ಹತೆ ಪಡೆದಿರಬೇಕು ಎಂದು ತಿಳಿಸಿದ್ದಾರೆ.
ಅನಧಿಕೃತ ಫ್ಲೆಕ್ಸ್: ಶಿಸ್ತು ಕ್ರಮ
ಹಾಸನ: ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ಫ್ಲೆಕ್ಸ್ಗಳನ್ನು ಅಳವಡಿಸಿರುವುದು ಕಂಡು ಬಂದಿದೆ. ಆದ್ದರಿಂದ ಅನುಮತಿಯಿಲ್ಲದೇ ಅಳವಡಿಸಿರುವ ಫ್ಲೆಕ್ಸ್ಗಳನ್ನು ಕೂಡಲೇ ತೆರವುಗೊಳಿಸುವುದು ತಪ್ಪಿದಲ್ಲಿ ಪುರಸಭೆ ಕಾಯ್ದೆಯನ್ವಯ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

