ನೀರು ಪೂರೈಕೆಗೆ ಚಾಲನೆ
ಮೈಸೂರು: ಕೆ.ಆರ್. ಕ್ಷೇತ್ರದ ಸಿದ್ದಾರ್ಥ ಬಡಾವಣೆ ವ್ಯಾಪ್ತಿಯಲ್ಲಿ ಬರುವ ಟೆರಿಷಿಯನ್ ಹೈಸ್ಕೂಲ್ ಮುಂಭಾಗ ಜೆಎನ್ ನರ್ಮ್ ಯೋಜನೆಯಡಿ ನಿರ್ಮಿಸಿರುವ 15 ಲಕ್ಷ ಲೀಟರ್ ಸಾಮರ್ಥ್ಯದ ಎತ್ತರ ಜಲ ಸಂಗ್ರಹಾರದಿಂದ ಬಡಾವಣೆಗೆ ನೀರು ಹರಿಸಲು ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡಿದರು. ನರ್ಮ್ ಯೋಜನೆಯಡಿ ಸುಮಾರು ರು. 85 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಂಗ್ರಹಾಗರವು ಡಿಎಂಎಯ 6300 ಮನೆಗಳಲ್ಲಿ 1380 ಮನೆಗಳಿಗೆ ನೀರು ಪೂರೈಸಲಿದೆ. ಒಟ್ಟು 17055 ಮೀಟರ್ ಉದ್ದದ ವಿತರಣಾ ಕೊಳವೆ ಅಳವಡಿಸಲಾಗಿದೆ. ಇದೇ ವೇಳೆ ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಕೆ.ಪಿ. ಜಯರಾಮ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಬ್ದುಲ್ ಶುಬಾನ್ ಮತ್ತಿತರರು ಉಪಸ್ಥಿತರಿದ್ದರು.
ಎಫ್ಡಿಪಿ ಕಾರ್ಯಕ್ರಮ
ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್ಡಿಎಂ ಐಎಂಡಿಯಲ್ಲಿ ಹಣಕಾಸು ಕುರಿತ ಅಧ್ಯಾಪಕ ವರ್ಗ ಅಭಿವೃದ್ಧಿ ಕಾರ್ಯಕ್ರಮ (ಎಫ್ಡಿಪಿ) ಆಯೋಜಿಸಲಾಗಿತ್ತು. ರಾಜ್ಯದ ಬ್ಯುಸಿನೆಸ್ ಸಂಸ್ಥೆಗಳಿಂದ 24 ಮಂದಿ ಹಾಗೂ ದೇಶದ ಇತರೆ ಭಾಗಗಳಿಂದ ಹಲವು ಮಂದಿ ಭಾಗವಹಿಸಿದ್ದರು. ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಹಣಕಾಸಿಗೆ ಸಂಬಂಧಪಟ್ಟ ಕೋರ್ಸುಗಳ ಆಯ್ಕೆ, ಹಣಕಾಸು ವೈರುಧ್ಯಗಳು, ಭದ್ರತಾ ವಿಶ್ಲೇಷಣೆ, ನಿರ್ವಹಣೆಯ ಪ್ರಣಾಳಿಕೆಗಳು, ಅಂತಾರಾಷ್ಟ್ರೀಯ ಆರ್ಥಿಕ ಸ್ಥಿತಿಗತಿ ಕುರಿತು ಚರ್ಚಿಸಲಾಯಿತು. ಎಸ್ಡಿಎಂ ಐಎಂಡಿ ನಿರ್ದೇಶಕ ಡಾ.ಎನ್.ಆರ್. ಪರಶುರಾಮನ್ ಉದ್ಘಾಟಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಉಲ್ಲಾಸ್ರಾವ್ ಮತ್ತಿತರರು ಉಪಸ್ಥಿತರಿದ್ದರು.
ಜೆಎಸ್ಎಸ್ ಕಾಲೇಜು ಫಲಿತಾಂಶ
ಮೈಸೂರು: ನಗರದ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯ ಫಲಿತಾಂಶ ಪ್ರಕಟಿಸಲಾಗಿದೆ. ಫಲಿತಾಂಶವನ್ನು ಢಿಢಿಢಿ.ಞಡಡಡಟಛಢ್ಛ್ಟಿಟಟಜ್ಜಜ.್ಝಟಿ ವೆಬ್ಸೈಟ್ನಲ್ಲಿಯೂ ನೋಡಬಹುದು ಎಂದು ಪ್ರಾಂಶುಪಾಲ ಪ್ರೊ. ಕೆ.ಎಸ್. ಸುರೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಶಿವಾನಂದ ಭಾರತಿ ತಿಳಿಸಿದ್ದಾರೆ.
ವಾರಾಂತ್ಯ ರಂಗ ಪ್ರದರ್ಶನ ಮುಂದಕ್ಕೆ
ಮೈಸೂರು: ರಂಗಾಯಣದಲ್ಲಿ ನಡೆಯುತ್ತಿದ್ದ ವಾರಾಂತ್ಯ ರಂಗಪ್ರದರ್ಶನವನ್ನು ಮುಂದೂಡಲಾಗಿದೆ ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಹೇಳಿದ್ದಾರೆ. 2014ರ ಜ. 14 ರಿಂದ 20ರವರೆಗೆ ರಂಗಾಯಣದ ಮಹತ್ವದ ರಾಷ್ಟ್ರೀಯ ರಂಗೋತ್ವ ಇರುವುದರಿಂದ ವಾರಾಂತ್ಯದಲ್ಲಿ ನಡೆಸುತ್ತಿದ್ದ ಪ್ರದರ್ಶನಗಳನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ನಾಟಕೋತ್ಸವ ನಂತರ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ತಾಲೂಕು ಮಟ್ಟದ ಸ್ನೇಹಕೂಟ
ಸಾಲಿಗ್ರಾಮ: ಸಮೀಪದ ಹೆಬ್ಸೂರು ಗ್ರಾಮದ ಬಳಿಯ ಜಪ್ಪೇಶ್ವರ ಕ್ಷೇತ್ರದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ತಾಲೂಕು ಮಟ್ಟದ ಸ್ನೇಹ ಕೂಟ ಕಾರ್ಯಕ್ರಮ ನೆರವೇರಿತು. ತಾಲೂಕಿನ ಸಾಲಿಗ್ರಾಮ, ಕೆ.ಆರ್. ನಗರ, ಭೇರ್ಯ, ಹಂಪಾಪುರ, ಹೊಸೂರು, ಹೆಬ್ಬಾಳು, ಮಿರ್ಲೆ, ಚುಂಚನಕಟ್ಟೆ ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಲೆಕ್ಕಪರಿಶೋಧಕರು ಹಾಗೂ ಕಚೇರಿ ಸಿಬ್ಬಂದಿಗಳಿಗೆ ವಿವಿಧ ಪ್ರಕಾರದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಜಪ್ಪೇಶ್ವರ ಕ್ಷೇತ್ರದ ವ್ಯವಸ್ಥಾಪಕ ಪ್ರಕಾಶ್, ತಾ.ಯೋಜನಾಧಿಕಾರಿ ಅಶೋಕ್, ಹುಣಸೂರು ತಾ. ಯೋಜನಾಧಿಕಾರಿ ರಾಮು, ವಲಯ ಮೇಲ್ವಿಚಾರಕರಾದ ನಿರಂಜನ್, ಗಿರೀಶ್ ಇದ್ದರು.
ಇಂದು ಜಾಥಾ
ಮೈಸೂರು: ಅರ್ಹರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ದ್ರಾವಿಡ ಮಹಾಸಭಾ ವತಿಯಿಂದ ಡಿ. 31 ರಂದು ಮಧ್ಯಾಹ್ನ 12ಕ್ಕೆ ಜಾಥಾ ಏರ್ಪಡಿಸಿದೆ. ಪುರಭವನದ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಕ್ಕಾಜಿ ಚೌಕದಿಂದ ಚಿಕ್ಕ ಗಡಿಯಾರ ಮಾರ್ಗವಾಗಿ ತೆರಳಿ ದೇವರಾಜ ಅರಸು ರಸ್ತೆ ಮಾರ್ಗವಾಗಿ ಸಯ್ಯಾಜಿರಾವ್ ರಸ್ತೆ ಮುಖೇನ ಪಾಲಿಕೆ ತಲುಪಿ ಮನವಿ ಸಲ್ಲಿಸಲಾಗುವುದು ಎಂದು ಕಾರ್ಯದರ್ಶಿ ಶಾಂತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

