ಹಾಸನ

ಕರಡಿ ದಾಳಿ: ರೈತನಿಗೆ ಗಾಯ

Published On :

ಅರಸೀಕೆರೆ: ತೋಟಕ್ಕೆ ಹೋಗುತ್ತಿದ್ದ ರೈತನ ಮೇಲೆ ಕರಡಿಯೊಂದು ತನ್ನ ಮರಿಗಳೊಂದಿಗೆ ಏಕಾಏಕಿ ದಾಳಿ ಮಾಡಿದ ಪರಿಣಾಮ ರೈತ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ತಾಲ್ಲೂಕಿನ ಕಲ್ಲುಸಾದರಹಳ್ಳಿ ಬಳಿ ಸಂಭವಿಸಿದೆ.
ಕಲ್ಲುಸಾದರಹಳ್ಳಿ ಗ್ರಾಮದ ಕೆಂಚಪ್ಪ (65) ಎಂಬಾತ ಕರಡಿ ದಾಳಿಗೆ ತುತ್ತಾದ ರೈತನಾಗಿದ್ದು, ಈತ ಎಂದಿನಂತೆ ಬೆಳಿಗ್ಗೆ ತನ್ನ ತೋಟದಲ್ಲಿ ಕೆಲಸ ಮಾಡಲು ಹೋಗುತ್ತಿರುವ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿದ್ದ ಕರಡಿ ಮತ್ತು ಅದರ ಎರಡು ಮರಿಗಳು ಈತನ ಬೆನ್ನ ಹಿಂದೆ ಏಕಾಏಕಿ ದಾಳಿ ಮಾಡಿ ಪರಿಣಾಮ ಬೆನ್ನಿನ ಭಾಗದಲ್ಲಿ ತೀವ್ರ ತರನಾದ ಗಾಯವಾಗಿದೆ. ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಗಾಯಾಳುವಿನ ಚೀರಾಟ ಕೇಳಿಬಂದ ತಕ್ಷಣ ಸ್ಥಳಕ್ಕೆ ಆಗಮಿಸಿದಾಗ ಕರಡಿಗಳು ಅಲ್ಲಿಂದ ಓಡಿಹೋಗಿವೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ರೈತನ್ನು ಗ್ರಾಮಸ್ಥರು ಪಟ್ಟಣದ ಸರ್ಕಾರಿ ಜೆ.ಸಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ತಾಲ್ಲೂಕು ಅರಣ್ಯ ವಲಯಾಕಾರಿ ರವಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ತಾಲ್ಲೂಕಿನಲ್ಲಿ ಪದೇ ಪದೇ ರೈತರ ಮೇಲೆ ಕರಡಿ ದಾಳಿ ಸೇರಿದಂತೆ ಕಾಡು ಪ್ರಾಣಿಗಳಿಂದ ದಾಳಿ ನಡೆಯುತ್ತಲೇ ಇವೆ. ನಾವುಗಳು ನಮ್ಮ ಜಮೀನಿನಲ್ಲಿ ಏಕಾಂಗಿಯಾಗಿ ಕಾಯಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಅಕಾರಿಗಳು ಇತ್ತ ಗಮನ ಹರಿಸಿ ಕರಡಿಗಳನ್ನು ಸೆರೆಹಿಡಿದು ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂದು ಸ್ಥಳಿಯ ರೈತರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.