ಹಾಸನ

ಹೊಸ ವರ್ಷಕ್ಕೆ ಗಣ್ಯರಿಂದ ಶುಭಾಶಯ

Published On :

ಹಾಸನ: ಹೊಸ ವರ್ಷವು ಎಲ್ಲರ ಬಾಳಲ್ಲೂ ಬೆಳಕಾಗಲಿ, ಜೀವನದ ಪ್ರತಿ ಕ್ಷಣ ನೆಮ್ಮದಿ, ಸುಖ,  ಶಾಂತಿಯಿಂದ ಇರಲಿ ಎಂದು ಶಾಸಕರಾದ ಎಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ,  ನಗರಸಭೆ ಅಧ್ಯಕ್ಷೆ ಶ್ರೀ ವಿದ್ಯಾ, ನಗರಸಭೆ ಸದಸ್ಯ ಎಚ್.ಎಂ. ಸುರೇಶ್ ಕುಮಾರ್, ಕಾಂಗ್ರೆಸ್ ವಕ್ತಾರ ಬಿ.ಎ. ಜಗನ್ನಾಥ್ ಶುಭ ಕೋರಿದ್ದಾರೆ.
'ವಿಶ್ವಮಾನವ ತತ್ವ ಅಳವಡಿಸಿಕೊಳ್ಳಿ'
ಹಾಸನ: ಸಮಾಜದಲ್ಲಿ ಕಂಟಕವಾಗಿರುವ ಜಾತಿ, ಮತ, ವರ್ಣ ಭೇದವನ್ನು ಯುವಜನತೆ ಕಿತ್ತೊಗೆದು ಕುವೆಂಪು ಅವರ ವಿಶ್ವ ಮಾನವ ತತ್ವವನ್ನು ಅಳವಡಿಸಿಕೊಳ್ಳುವಂತೆ ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ ಮೂರ್ತಿ ಕಿವಿಮಾತು ಹೇಳಿದರು. ನಗರದ ಹೊಯ್ಸಳ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಲೇಖಕಿಯರ ಬಳಗ ಹಾಗೂ ಸ್ಪಂದನ ವೇದಿಕೆಯಿಂದ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಗೀತಗಾಯನ ಹಾಗೂ ಕವಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡು ಕಂಡ ಶ್ರೇಷ್ಠ ಕವಿ ಹಾಗೂ ನಾಡಿನ ಮೂರನೇ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕವನಗಳು ಮನುಷ್ಯನ ಹೃದಯ ತಟ್ಟುತ್ತವೆ ಎಂದರು.
ಹುಟ್ಟಿದಾಗ ವಿಶ್ವಮಾನವ: ಸಾವಿನ ಸಂದರ್ಭದಲ್ಲೂ ಜಾತಿಯಿಂದ ಗುರುತಿಸಿಕೊಳ್ಳದೇ, ಮಾನವನಾಗಿ ಗುರುತಿಸಿಕೊಳ್ಳುತ್ತೇನೆ ಎಂದು ಹೇಳಿ ವಿಶ್ವಮಾನವ ಸಂದೇಶ ತತ್ವವನ್ನು ಪಾಲನೆ ಮಾಡಿದ ಧೀಮಂತ ಕವಿ ಎಂದು ಬಣ್ಣಿಸಿದರು. ಮನುಷ್ಯ ಹುಟ್ಟಿದಾಗ ವಿಶ್ವಮಾನವನಾಗಿರುತ್ತಾನೆ. ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ ಎಂದು ಅವರು ವಿಷಾದಿಸಿದರು. ಶಿಕ್ಷಕಿ ಸುಕನ್ನಾ ಮುಕುಂದ ಹೊಯ್ಸಳ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ರಮೇಶ್ ಭಾಗವಹಿಸಿದ್ದರು. ಸ್ಪಂದನಾ ವೇದಿಕೆಯ ಅಧ್ಯಕ್ಷೆ ಕಲಾ  ಮಧುಸೂದನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಗಾಯಕರಾದ ಸುರಭಿ, ಸುನಂದಕೃಷ್ಣ, ಎಸ್.ಸಿ. ಶರಧಿ, ರಾಣಿ, ಲಲಿತ, ರಮೇಶ್, ಪದ್ಮಾವತಿ ಸುಶ್ರಾವ್ಯವಾಗಿ ಜಿ.ಎಸ್.ಎಸ್. ಅವರ ಕವನಗಳನ್ನು ಗಾಯನ ಮಾಡಿ ಕವಿಗೆ ನಮನ ಸಲ್ಲಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.