ಉಸ್ತುವಾರಿ ಸಚಿವರ ಕಡೆಗಣನೆ: ಪ್ರತಿಭಟನೆ
ಹಾಸನ: ಹಾಸನ ಕ್ಷೇತ್ರದ ಶಾಸಕರು ಸಿಎಂಎಸ್ಎಂಟಿಡಿಪಿ ಯೋಜನೆಯ ರು. 30 ಕೋಟಿ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನು ಕಡೆಗಣಿಸಿ ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿ ನಗರಸಭೆಯ ಕಾಂಗ್ರೆಸ್ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ನಗರಸಭೆ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಕಡೆಗಣಿಸಿರುವುದನ್ನು ಖಂಡಿಸಿ ಘೋಷಣೆ ಕೂಗಿದರು.
ಆಕ್ರೋಶ: ನಗರದ ಹಿತದೃಷ್ಠಿಯಿಂದ ಮತ್ತು ನಗರದ ಅಭಿವೃದ್ಧಿಗೆ ಪೂರಕವಾಗಿ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳ ಸಿಎಂಎಸ್ಎಂಟಿಡಿಪಿ ಯೋಜನೆಯ ಅಡಿಯಲ್ಲಿ ರು. 30 ಕೋಟಿ ಹಾಸನ ನಗರಸಭೆಗೆ ಮಂಜೂರು ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ಕೊಡುಗೆಯಾಗಿದೆ. ಆದರೆ ಜೆಡಿಎಸ್ನವರು ಈ ಕಾಮಗಾರಿಯನ್ನು ಅಸಂಪ್ರದಾಯಕವಾಗಿ ಪ್ರಾರಂಭಿಸುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಸರ್ಕಾರದ ಪ್ರತಿನಿಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪನವರ ಗಮನಕ್ಕೆ ಬಾರದೆ ಹಾಗೂ ಸಚಿವರನ್ನು ಅಭಿವೃದ್ಧಿ ಕಾಮಗಾರಿಗೆ ಅಹ್ವಾನ ನೀಡದೇ ಜೆಡಿಎಸ್ ಶಾಸಕರು ಅಗೌರವ ತೋರಿದ್ದಾರೆ. ಏಕಪಕ್ಷೀಯ ತೀರ್ಮಾನ ಮಾಡಿ ಪಕ್ಷಪಂತದಿಂದ ಸಿಎಂಎಸ್ಎಂಟಿಡಿಪಿ ಯೋಜನೆಯ ಕಾಮಗಾರಿಗಳನ್ನು ಪ್ರಾಂಭಿಸಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಿಳಿಸಲು ಮರೆಮಾಚಲು ಜೆಡಿಎಸ್ ಮಂದಿ ಮುಂದಾಗಿದ್ದಾರೆ ಎಂದರು.
ಕಿಡಿ: ನಗರಸಭೆಯ ಸದಸ್ಯರಿಗೆ ಈ ಯೋಜನೆಯನ್ವಯ ಕೈಗೊಂಡಿರುವ ಆಯಾ ವಾರ್ಡಿನ ಕಾಮಗಾರಿಗಳ ಮಾಹಿತಿ ಒದಗಿಸದೇ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಕಿಡಿಕಾರಿದರು. ಆದ್ದರಿಂದ, ಸಂಪ್ರದಾಯವಾಗಿ ಮತ್ತು ನಿಯಮಾವಳಿ ಅನುಸಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನಗರಸಭೆ ಸದಸ್ಯರನ್ನು ಆಹ್ವಾನಿಸಿ 30ಕೋಟಿ ರು.ಗಳ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಯಶ್ವಂತ್, ಕುಮಾರ್, ಅಬ್ದುಲ್ ಖಯಂ, ಮಹಂತೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

