ರಾತ್ರೋರಾತ್ರಿ ಹರಿದ ಯಗಚಿ ನೀರು ಸಂಘಟನೆಗಳ ಪ್ರತಿಭಟನೆ
ಬೇಲೂರು: ಯಗಚಿ ಜಲಾಶಯದಿಂದ ರಾತ್ರೋರಾತ್ರಿ ನೀರು ಹರಿಸಿ, ಯಗಚಿ ಯೋಜನಾ ಅಧಿಕಾರಿಗಳು ಜನತೆಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಆರೋಪಿಸಿ ನಾನಾ ಸಂಘಟನೆಗಳು ಶನಿವಾರ ಭಾರೀ ಪ್ರತಿಭಟನೆ ನಡೆಸಿದವು.
ಶುಕ್ರವಾರ ರಾತ್ರಿ ಯಗಚಿ ಜಲಾಶಯದಿಂದ 3500 ಕ್ಯುಸೆಕ್ ನೀರು ಹೊರಬಿಟ್ಟಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ, ಡಾ.ರಾಜಕುಮಾರ್ ಸಂಘ ಸೇರಿದಂತೆ ನಾನಾ ಸಂಘಟನೆಗಳು ಅಹೋರಾತ್ರಿ ಪ್ರತಿಭಟನೆ, ಧರಣಿ ನಡೆಸಿದ್ದಲ್ಲದೆ ಚಿಕ್ಕಮಗಳೂರು ನಗರಸಭಾ ಆಡಳಿತ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರ ಅಧ್ಯಕ್ಷ ಪ್ರೇಮಕುಮಾರ್ ಆರೋಪಿಸಿದರು.
ಚಿಕ್ಕಮಗಳೂರು ನಗರಕ್ಕೆ ಸರಬರಾಜು ಆಗುವ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದನ್ನ ಮನ ಗಂಡು ಬೇಲೂರಿಗೆ ಆಗಮಿಸಿದ್ದ ಪ್ರೇಮಕುಮಾರ್ ಯಗಚಿ ಜಲಾಶಯದ ಮುಂದೆ ಪ್ರತಿಭಟನೆ ನಡೆಸಿ, ಸರ್ಕಾರ ನೀರು ಬಿಟ್ಟಿರುವುದು ಅಕ್ರಮ. ಸಚಿವ ಬೊಮ್ಮಾಯಿ ಸಹ ನೀರು ಬಿಡಲು ಸೂಚಿಸಿಲ್ಲ ಎಂದು ತಿಳಿಸಿದ್ದಾರೆ.
ಸಚಿವ ಸಿ.ಟಿ.ರವಿ ಅವರೂ ಮಾಹಿತಿ ಪಡೆದುಕೊಂಡಿದ್ದಾರೆ. ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರಲ್ಲದೆ ನೀರು ಬಿಡುವ ಕಾಯಕ ಮುಂದುವರಿಸಿದಲ್ಲಿ ಜೀವದ ಹಂಗುತೊರೆದು ಉಗ್ರ ಹೋರಾಟ ನಡೆಸಬೇಕಾದೀತೆ ಎಂದು ಎಚ್ಚರಿಸಿದರು. ಬೇಲೂರು ಪುರಸಭೆ ಮಾಜಿ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ಮುಂಚಿತವಾಗಿ ಸೂಚನೆ ನೀಡದೆ ನೀರು ಬಿಟ್ಟಿರುವುದು ತಪ್ಪು, ನೀರನ್ನು ಹೀಗೆ ಬಿಡುತ್ತಿದ್ದರೆ ಕೆಲವೆ ದಿನದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸಬೇಕಿದೆ ಎಂದು ನುಡಿದರು. ಪುರಸಭೆ ಮಾಜಿ ಸದಸ್ಯ ಬಿ.ಸಿ.ಮಂಜುನಾಥ್ ಮಾತನಾಡಿ, ನೀರು ಬಿಟ್ಟಿರುವುದು ಪಟ್ಟಣದ ಜನತೆಗೆ ಮಾಡಿರುವುದು ದ್ರೋಹ ಎಂದರು. ಚಿಕ್ಕಮಗಳೂರು ನಗರಸಭಾ ಮಾಜಿ ಅಧ್ಯಕ್ಷ ರಂಗನಾಥ್, ಜಿಪಂ ಸದಸ್ಯೆ ಹೇಮಾವತಿ, ಡಾ.ರಾಜಕುಮಾರ್ ಸಂಘದ ತೀರ್ಥಂಕರ, ಕರವೇ ಚಂದ್ರಶೇಖರ್ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

