ಹಾಸನ

ಹಿಂದುತ್ವವಾದಿ ಸಂಘಟನೆಗಳ ಪ್ರತಿಭಟನೆ

Published On :

ಹಾಸನ: ಶ್ರೀಕಾಶಿ ಸುಮೇರು ಪೀಠದ ಶಂಕರಾಚಾರ್ಯ ನರೇಂದ್ರಾನಂದ ಸರಸ್ವತಿ ಅಪಹರಣ ಮತ್ತು ಹಿಂದು ಧರ್ಮಗುರುಗಳ ಘೋರ ಅಪಮಾನ ಖಂಡಿಸಿ ಹಿಂದುತ್ವವಾದಿ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದರು.
ಮಧ್ಯಪ್ರದೇಶದ ಧಾರಾನಲ್ಲಿನ ಭೋಜನಶಾಲೆಯಲ್ಲಿ ವಸಂತಪಂಚಮಿ ದಿನದಂದು ಹಿಂದುಗಳ ಪ್ರಾಚೀನ ಸರಸ್ವತಿ ದೇವಿ ಪೂಜೆ ಮಾಡಲು ಅಧಿಕಾರವಿದೆ. ಈ ಬಾರಿ ವಸಂತಪಂಚಮಿ ಶುಕ್ರವಾರ ಬಂದಿರುವುದರಿಂದ ಅಲ್ಲಿ ಶುಕ್ರವಾರದ ಪೂಜೆಯನ್ನು ನಿಲ್ಲಿಸಿ ಮಧ್ಯಾಹ್ನ ಮುಸಲ್ಮಾನರಿಗೆ ನಮಾಜು ಪಠಿಸಲು ಸರಕಾರವು ಅನುಮತಿ ನೀಡಿತ್ತು. ಶ್ರೀ ಸರಸ್ವತಿ ಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ವರ್ಷದಲ್ಲಿ ಒಂದೇ ಬಾರಿ ಅಂದರೆ ವಸಂತಪಂಚಮಿ ದಿನ ಅನುಮತಿಯಿರುತ್ತದೆ. ಹೀಗಿದ್ದೂ ಸರ್ಕಾರ ಹಿಂದೂಗಳ ಕುತ್ತಿಗೆ ಹಿಚುಕುತ್ತಿದೆ.
ಹಾಗಾಗಿ ಇದನ್ನು ವಿರೋಧಿಸಲು ಮತ್ತು ಹಿಂದೂಗಳಿಗೆ ನ್ಯಾಯಯುತ ಪೂಜೆಯ ಅಧಿಕಾರ ಸಿಗಲು ಶ್ರೀಕಾಶಿ ಸುಮೇರು ಪೀಠದ ಶಂಕರಾಚಾರ್ಯ ನರೇಂದ್ರಾನಂದ ಸರಸ್ವತಿ ಸ್ವಾಮೀಜಿ ಮಧ್ಯಪ್ರದೇಶದ ಸರಸ್ವತಿ ಮಂದಿರಕ್ಕೆ ಹೋಗಿ ಅಲ್ಲಿ ಪೂಜೆ ಮಾಡುವ ನಿರ್ಣಯ ತೆಗೆದುಕೊಂಡಿದ್ದರು. ಅದಕ್ಕಾಗಿ ಅವರು ಫೆ.14ರಂದು ಇಂದೂರಿಗೆ ತಲುಪುವವರಿದ್ದರು. ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಶಂಕರಾಚಾರ್ಯರು ಇಂದೂರು ತಲುಪಬಾರದು ಎಂದು ಅವರ ವಿಮಾನ ಟಿಕೇಟನ್ನೇ ರದ್ದುಗೊಳಿಸಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು.
  ಫೆ.15 ರಂದು ಬೆಳಗ್ಗೆ ಪೊಲೀಸರು ಧಾರಾಗೆ ಹೋಗಲು ಪ್ರಯತ್ನಿಸುತ್ತಿದ್ದ ಶಂಕರಾಚಾರ್ಯರನ್ನು ಸುರಕ್ಷೆಯ ನೆಪ ಹೇಳಿ ಪೊಲೀಸ್ ವಾಹನದಲ್ಲಿ ಪ್ರವಾಸ ಮಾಡಲು ತಿಳಿಸಿದರು.
ಆದರೆ ಶಂಕರಾಚಾರ್ಯರು ತಮ್ಮದೇ ವಾಹನದಲ್ಲಿ ಪ್ರವಾಸ ಮಾಡುವುದಾಗಿ ಹಠ ಹಿಡಿದಾಗ ಪೊಲೀಸರ ವಾಹನಗಳ ಬೆಂಬೆತ್ತುವಿಕೆಯಲ್ಲಿ ಶಂಕರಾಚಾರ್ಯರ ವಾಹನವು ಧಾರಾನತ್ತ ಹೊರಟಿತು.
 ಸ್ವಲ್ಪ ದೂರ ಹೋದ ನಂತರ ಇಂದೂರಿನಿಂದ ಧಾರಾ ರಸ್ತೆಯಲ್ಲಿ ಸುರಕ್ಷಾದಳದವರು ಶಂಕರಾಚಾರ್ಯರ ವಾಹನ ನಿಲ್ಲಿಸಿದರು. ವಾಹನದಲ್ಲಿದ್ದ ಶಂಕರಾಚಾರ್ಯರ ಎಲ್ಲ ಸೇವಕರು, ಚಾಲಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಭಾರತ ಸಮನ್ವಯಕಾರ ಶ್ರೀ ವಿನಯ ಪಾನವಳಕರನ್ನು ಕೆಳಗಿಳಿಸಿದರು.
 ಅನಂತರ ಪೊಲೀಸರು ಸ್ವತ ವಾಹನವನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ದೂರಿದರು.ಹಿಂದೂ ಸಂಘಟನೆಗಳ ಪ್ರದೀಪ್ ಭಂಡಾರ್ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.