ಹೊಳೆನರಸೀಪುರ: ಕರ್ನಾಟಕ ಜಾನಪದ ಪರಿಷತ್ ಹೊಳೆನರಸೀಪುರ ತಾಲೂಕು ಘಟಕ ಅಧ್ಯಕ್ಷರನ್ನಾಗಿ ಪುರಸಭೆ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಾ.ರಾ.ಸುಬ್ಬರಾಯ ಅವರನ್ನು ಆಯ್ಕೆ ಮಾಡಿರುವುದಾಗಿ ಪರಿಷತ್ತಿನ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ ತಿಳಿಸಿದ್ದಾರೆ.
ನೂತನ ಕಾರ್ಯದರ್ಶಿಯಾಗಿ ಎಚ್.ಎನ್.ಕೃಷ್ಣ, ಸಹ ಕಾರ್ಯದರ್ಶಿಯಾಗಿ ಎಲ್.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎನ್.ಚೇತನ್, ಖಜಾಂಚಿಯಾಗಿ ಎಚ್.ಪಿ.ಮಂಜುನಾಥಗುಪ್ತ, ನಿರ್ದೇಶಕರಾಗಿ ಕಾವ್ಯಶ್ರೀ ಕೃಷ್ಣ, ಗೀತಾಯೋಗೇಶ್, ಎಚ್.ಆರ್.ವೀರಬಸಪ್ಪ, ನಾಗಲಾಪುರ ಕುಮಾರ್, ಆರ್.ಎನ್.ನಾಗಣ್ಣ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಹಡವನಹಳ್ಳಿ ನಿಂಗೇಗೌಡ, ಗುಂಜೇವು ಅಣ್ಣಾಜಪ್ಪ, ಎ.ಜೆ.ದಿಲೀಪ್‌ಕುಮಾರ್ ಜೈನ್ ಹಾಗೂ ಆರ್.ವಾಸುದೇವಮೂರ್ತಿ, ವಿಶೇಷ ಆಹ್ವಾನಿತರಾಗಿ ತಾ ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ತಾ ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಂ.ಸಿ.ಕುಮಾರಸ್ವಾಮಿ, ತಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ತಾ. ರಂಗ ಸಂಗೀತ ಪರಿಷತ್ತಿನ ಅಧ್ಯಕ್ಷ ಕೆ.ಆರ್.ವಿಜಯಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಎಸ್.ರಾಧಾಕೃಷ್ಣ, ತಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಅವರನ್ನು ಆಯ್ಕೆ ಮಾಡಲಾಗಿದೆ.