ಹಾಸನ

ಎಲ್ಲ ನೋವುಗಳಿಗೂ ಸಿದ್ಧೌಷದ ಸಂಗೀತ: ಪ್ರಿಯದರ್ಶಿನಿ

Published On :


ಹೊಳೆನರಸೀಪುರ: ತ್ಯಾಗರಾಜರು, ಪುರಂದರದಾಸರು ಹಾಗೂ ಕನಕದಾಸರ ಆರಾಧನಾ ಮಹೋತ್ಸವದ ಅಂಗವಾಗಿ ತಾಲೂಕು ವಚನ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಪಟ್ಟಣದ ಶ್ರೀ ಶಾರದಾಂಬ ಶಂಕರಾಚಾರ್ಯರ ಮಠದಲ್ಲಿ ಸಂಗೀತ ಸೇವೆ ಕಾರ್ಯಕ್ರಮ ಭಾನುವಾರ ಸರಳ ಹಾಗೂ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಎಲ್ಲ ಕಲಾವಿದರು ಹಾಗೂ ದೈವಭಕ್ತರೂ ಸೇರಿ ಕೋಟೆಯಲ್ಲಿನ ನಾಲ್ಕು ರಾಜಬೀದಿಗಳಲ್ಲಿ ಸೇವೆಯನ್ನು ಕೈಗೊಂಡರು.
ನಂತರ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತಿ ಹಿರಿಯ ಗಮಕ ವಿದೂಷಿ ಪ್ರಿಯದರ್ಶಿನಿ ಅಯ್ಯಂಗಾರ್ ಅವರು ಮಾತನಾಡಿ ಎಲ್ಲ ನೋವುಗಳಿಗೂ ಸಿದ್ಧೌಷದ ಸಂಗೀತವಾಗಿದ್ದು, ಸಂಗೀತ ಎಲ್ಲ ಕುಲ-ವರ್ಗವನ್ನೂ ಒಂದುಗುಡಿಸಲು ಇರುವ ಸುಲಭ ಮಾಧ್ಯಮವಾಗಿದೆ ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ಗೋಪಾಲನಾಯಕ್ ಅವರು ಜಾತಿ-ಭಾಷೆ-ಧರ್ಮವನ್ನು ಮೀರಿ ನಿಲ್ಲುವಂತಹ ಶಕ್ತಿ ಇರುವಂತಹುದು ಸಂಗೀತಕ್ಕೆ ಮಾತ್ರ ಎಂದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಸಿ.ಮಲ್ಲೇಶ್ ಅವರು ಮಾತನಾಡಿದರು.
ನಂತರ ಪಂಚರತ್ನಕೃತಿ ಗಾಯನ, ಚನ್ನರಾಯಪಟ್ಟಣದ ಸಿ.ಎಲ್.ನಾಗಶ್ರೀ ಅವರಿಂದ ಸಂಗೀತ ಸೇವೆ ನಡೆಯಿತು. ಈ ಸಮಾರಂಭದಲ್ಲಿ ಹಿರಿಯ ಪಕ್ಕವಾದ್ಯ ಕಲಾವಿದರುಗಳಾದ ಆರ್.ನಾಗರಾಜು- ವಯೋಲಿನ್, ಕೆ.ಆರ್.ವಿಜಯಕುಮಾರ್ ಹಾಗೂ ಧನಂಜಯ ಅವರುಗಳು-ಮೃದಂಗ, ಕೆ.ಶಿವಕುಮಾರಾಚಾರಿ-ಗಾಯನ,  ಕೆ.ಆರ್.ಜಗಧೀಶ್, ಪುನೀತ್ ಹಾಗೂ ರಾಮಸ್ವಾಮಿ ಅವರುಗಳು ತಬಲ ನುಡಿಸಿದರು. ತಾಲೂಕು ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಂ.ಸಿ.ಕುಮಾರಸ್ವಾಮಿ ಈ ಸಂದರ್ಭದಲ್ಲಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.