ಸಕಲೇಶಪುರದಲ್ಲಿ ಅಭ್ಯರ್ಥಿಗಳ ಪರ ಮುಖಂಡರ ಪ್ರಚಾರ
ಸಕಲೇಶಪುರ: ಪುರಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಸೋಮವಾರ ಪಟ್ಟಣದಲ್ಲಿ ಬಹುತೇಕ ಎಲ್ಲಾ ಪಕ್ಷಗಳ ಮುಖಂಡರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತದಾರರ ಮನಗೆಲ್ಲಲು ಪ್ರಯತ್ನಿಸಿದರು.
ಪಟ್ಟಣದ ಗುಹೇಕಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಾಜಿ ಶಾಸಕರಾದ ಬಿ.ಆರ್. ಗುರುದೇವ್ ಹಾಗೂ ಎಚ್.ಎಂ. ವಿಶ್ವನಾಥ್ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಆರಂಬಿಸಿದರು ಪಟ್ಟಣದ ಹೇಮಾವತಿ ನಗರದಿಂದ ಪ್ರಚಾರ ಆರಂಭಿಸಿ ಬಹುತೇಕ ಎಲ್ಲಾ ರಸ್ತೆಗಳಲ್ಲೂ ಪದಾಯಾತ್ರೆ ನಡೆಸಿದ ಈ ಇಬ್ಬರು ನಾಯಕರಿಗೆ ಪಕ್ಷದ ಪ್ರಮುಖರಾದ ಬೆಳಗೋಡು ಉಮೇಶ್ ಹಾಗೂ ಎಂ.ವಿ ತಿಮ್ಮಯ್ಯ ಸಾಥ್ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಾಳ್ಳು ಜಗನ್ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ ಪ್ರಚಾರ ನಡೆಸಿದರು ಇವರಿಗೆ ಡಿ.ಸಿ ಸಣ್ಣಸ್ವಾಮಿ ಸಾಥ್ ನೀಡಿದರು. ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಶಾಸಕ ಎಚ್.ಕೆ ಕುಮಾರಸ್ವಾಮಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್. ಸೋಮಶೇಖರ್, ಎಚ್.ಪಿ ಯಜಮಾನ್ ಸೇರಿದಂತೆ ಬಹುತೇಕ ಮುಖಂಡರು ಪಟ್ಟಣದ ಆಜಾದ್ ರಸ್ತೆ, ಮಹೇಶ್ವರಿ ನಗರ,ಹಳೇಸಂತವೇರಿಯಲ್ಲಿ ಪ್ರಚಾರ ನಡೆಸಿ ಮತದಾರರ ಗಮನ ಸೇಳದರು.
ಬಿ.ಜೆ.ಪಿ ಅಭ್ಯರ್ಥಿಗಳ ಪರವಾಗಿ ವಿಧಾನಪರಿಷತ್ ಸದಸ್ಯ ಗೋಮಧುಸೂಧನ್ ನೇತೃತ್ವದಲ್ಲಿ ಮತಯಾಚಿಸಲಾಯಿತು. ಪಕ್ಷದ ಮುಖಂಡರಾದ ಹೆತ್ತೂರು ದೇವರಾಜ್, ಜೈಮಾರುತಿ ದೇವರಾಜ್, ಕ್ಯಾನಹಳ್ಳಿ ಕೃಷ್ಣೇಗೌಡ, ಕ್ಯಾನಹಳ್ಳಿ ರಾಜಕುಮಾರ್, ದಯಾನಂದ್ ಇವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡರು. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು.
ಪ್ರಚಾರದಲ್ಲೂ ಕಾಣಿಸಿಕೊಂಡ ಭಿನ್ನಮತ: ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಇಳಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ. ಜಗನ್ನಾಥ್ ಜತೆಯಲ್ಲಿ ಡಿ.ಸಿ ಸಣ್ಣಸ್ವಾಮಿ ತಂಡ ಕಾಣಿಸಿಕೊಂಡಿತ್ತಾದರೂ ಕಾಂಗ್ರೆಸ್ ತಾಲೂಕು ಅಧ್ಯಕ್ಷ ವಿದ್ಯಾಶಂಕರ್ ತಂಡ ಇವರೊಂದಿಗೆ ಕಾಣಿಸಿಕೊಳ್ಳಲಿಲ್ಲ.
ಜೆಡಿಎಸ್ ಟಿಕೆಟ್ ಹಂಚಿಕೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ವಾರ್ಡ್ನಂ 18 ಹಾಗೂ 12 ರಲ್ಲಿ ಜೆ.ಡಿ.ಎಸ್ ಮುಖಂಡರು ಕಾಣಿಸಿಕೊಳ್ಳಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

