ಹಾಸನ

ಅರಸೀಕೆರೆ ಪುರಸಭೆ: ಪ್ರತಿಷ್ಠಿತ, ಬುದ್ದಿವಂತರಿರುವ ವಾರ್ಡ್‌ನಲ್ಲೇ ಅತಿ ಕಡಿಮೆ ಮತದಾನ!

Published On :

ಕ.ಪ್ರ. ವಾರ್ತೆ ್ಣ ಅರಸೀಕೆರೆ ್ಣ ಮಾ 9
ವಿದ್ಯಾವಂತರು ಮತ್ತು ಬುದ್ಧಿವಂತರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಹೊರತು, ಅದನ್ನು ಗೌರವಿಸುವುದಿಲ್ಲ ಎಂಬುದಕ್ಕೆ ಇಲ್ಲಿನ ಪುರಸಭೆಯ 27 ನೇ ವಾರ್ಡ್‌ನಲ್ಲಿ ಅತಿ ಕಡಿಮೆ ಮತದಾನ ನಡೆದಿರುವುದು ಜೀವಂತ ಸಾಕ್ಷಿ ಎನ್ನಲು ಅಡ್ಡಿಯಿಲ್ಲ.
ಪ್ರತಿಷ್ಠಿತರು, ಬುದ್ಧಿವಂತರು, ಸರ್ಕಾರಿ ಅಧಿಕಾರಿಗಳೇ ಹೆಚ್ಚಾಗಿರುವ ಮಾರುತಿ ನಗರದ 27ನೇ ವಾರ್ಡಿನಲ್ಲಿ ಅತೀ ಕಡಿಮೆ ಅಂದರೆ, ಶೇ.61.20 ಮತದಾನ ಆಗಿರುವುದು ದುರದೃಷ್ಟಕರ ಸಂಗತಿ. ಪ್ರಜಾಪ್ರಭುತ್ವದ ಉಳಿವಿನ ಪ್ರಮುಖ ಘಟ್ಟವಾದ ಮತದಾನದ ಪ್ರಕ್ರಿಯೆಯಲ್ಲಿ ಶಿಕ್ಷಿತರೇ ನ್ಯಾಯವಾಗಿ ಭಾಗವಹಿಸದೆ ಇರುವುದು ಸರಿಯಲ್ಲ. ಸರ್ಕಾರಗಳು ಮತದಾನ ಕಡ್ಡಾಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅತಿ ಹೆಚ್ಚು ಮತದಾನ 19ನೇ ವಾರ್ಡಿನಲ್ಲಿ ಶೇ 84.52 ನಡೆದಿದ್ದು, ಪಟ್ಟಣದ 27 ವಾರ್ಡ್‌ಗಳಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಒಟ್ಟು 31897 ಮತದಾರರ ಪೈಕಿ 11810 ಪುರುಷರು ಮತ್ತು 11571 ಮಹಿಳೆಯರು ಸೇರಿದಂತೆ ಒಟ್ಟು 23381 ಮಂದಿ ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಶೇ 73.30ರಷ್ಟು ಮತದಾನವಾಗಿದೆ.
ವಾರ್ಡ್‌ವಾರು ಮತದಾನ ವಿವರ: 1ನೇ ವಾರ್ಡ್‌ನಲ್ಲಿ 1147 ಮತದಾರರ ಪೈಕಿ 946 ಶೇ82.47, 2ನೇ ವಾಡರ್‌ನಲ್ಲಿ 1313 ಮತದಾರರ ಪೈಕಿ 971 ಶೇ.73.95, 3ನೇ ವಾರ್ಡ್‌ನಲ್ಲಿ 1846 ಮತದಾರರ ಪೈಕಿ 1310 ಶೇ.70.96, 4ನೇ ವಾರ್ಡ್‌ನಲ್ಲಿ 1029 ಮತದಾರರ ಪೈಕಿ 715 ಶೇ.69.48, 5ನೇ ವಾರ್ಡ್‌ನಲ್ಲಿ 1553 ಮತದಾರರ ಪೈಕಿ 1163 ಶೇ.74.85, 6ನೇ ವಾರ್ಡ್‌ನಲ್ಲಿ 988 ಮತದಾರರ ಪೈಕಿ 696 ಶೇ.70.44, 7ನೇ ವಾರ್ಡ್‌ನಲ್ಲಿ 593 ಮತದಾರರ ಪೈಕಿ 414 ಶೇ.69.81, 8ನೇ ವಾರ್ಡ್‌ನಲ್ಲಿ 1860 ಮತದಾರರ ಪೈಕಿ 1406 ಶೇ.75.59, 9ನೇ ವಾರ್ಡ್‌ನಲ್ಲಿ 2064 ಮತದಾರರ ಪೈಕಿ 1322 ಶೇ.65.96, 10ನೇ ವಾರ್ಡ್‌ನಲ್ಲಿ 988 ಮತದಾರರ ಪೈಕಿ 696 ಶೇ.79.45.
11ನೇ ವಾರ್ಡಿನಲ್ಲಿ 1145 ಮತದಾರರ ಪೈಕಿ 834 ಶೇ.72.14, 12ನೇ ವಾರ್ಡಿನಲ್ಲಿ 1164 ಮತದಾರರ ಪೈಕಿ 830 ಶೇ.71.30, 13ನೇ ವಾರ್ಡಿನಲ್ಲಿ 1235 ಮತದಾರರ ಪೈಕಿ 830 ಶೇ.67.20, 14ನೇ ವಾರ್ಡಿನಲ್ಲಿ 1228 ಮತದಾರರ ಪೈಕಿ 842 ಶೇ.68.56, 15ನೇ ವಾರ್ಡಿನಲ್ಲಿ 1164 ಮತದಾರರ ಪೈಕಿ 801 ಶೇ.68.81, 16ನೇ ವಾರ್ಡಿನಲ್ಲಿ 809 ಮತದಾರರ ಪೈಕಿ 609 ಶೇ.75.27, 17ನೇ ವಾರ್ಡಿನಲ್ಲಿ 1245 ಮತದಾರರ ಪೈಕಿ 979 ಶೇ.78.63, 18ನೇ ವಾರ್ಡಿನಲ್ಲಿ 606 ಮತದಾರರ ಪೈಕಿ 458 ಶೇ.75.57, 19ನೇ ವಾರ್ಡಿನಲ್ಲಿ 1130 ಮತದಾರರ ಪೈಕಿ 947 ಶೇ.83.80, 20ನೇ ರ್ವಾನಲ್ಲಿ 1031 ಮತದಾರರ ಪೈಕಿ 812 ಶೇ.78.75.
21ನೇ ವಾರ್ಡಿನಲ್ಲಿ 1320 ಮತದಾರರ ಪೈಕಿ 917 ಶೇ.69.46, 22ನೇ ವಾರ್ಡಿನಲ್ಲಿ 1154 ಮತದಾರರ ಪೈಕಿ 891 ಶೇ.77.20, 23ನೇ ವಾರ್ಡಿನಲ್ಲಿ 839 ಮತದಾರರ ಪೈಕಿ 671 ಶೇ.79.97, 24ನೇ ವಾರ್ಡಿನಲ್ಲಿ 932 ಮತದಾರರ ಪೈಕಿ 770 ಶೇ.82.61, 25ನೇ ವಾರ್ಡಿನಲ್ಲಿ 1755 ಮತದಾರರ ಪೈಕಿ 1331 ಶೇ.75.84, 26ನೇ ವಾರ್ಡಿನಲ್ಲಿ 1202 ಮತದಾರರ ಪೈಕಿ 772 ಶೇ.64.22, 27ನೇ ವಾರ್ಡಿಲ್ಲಿ 1194 ಮತದಾರರ ಪೈಕಿ 687 ಶೇ.57.53 ಚಲಾವಣೆಯಾಗಿದೆ.
ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಲ್ಲಿ ಫಲಿತಾಂಶದ ಬಗ್ಗೆ ಲೆಕ್ಕಚಾರ ಹಾಗೂ ಹೆಚ್ಚಿನ ಕುತೂಹಲ. ಪಟ್ಟಣದ ಬಸವೇಶ್ವರ ವೃತ್ತ ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಈ ವೃತ್ತದಲ್ಲಿ ಸೋಲು ಗೆಲುವಿನ  ಲೆಕ್ಕಚಾರ ಹಾಗೂ ಯಾವ ಯಾವ ಪಕ್ಷಗಳು ಎಷ್ಟು ಸ್ಥಾನ ಹಾಗೂಯಾವ ಪಕ್ಷ ಅಧಿಕಾರ ಹಿಡಿಯಬಹುದು ಎಂಬುದರ ಬಗ್ಗೆಯೇ ಚರ್ಚೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.