ಜಿಲ್ಲಾದ್ಯಂತ ಸಂಭ್ರಮದ ಶಿವರಾತ್ರಿ
ಕ.ಪ್ರ. ವಾರ್ತೆ ್ಣ ಹಾಸನ ್ಣ ಮಾ.10
ನಗರ ಹಾಗೂ ಜಿಲ್ಲಾದ್ಯಂತ ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಾನಾ ಶಿವನ ದೇವಾಲಯಗಳಲ್ಲಿ ವಿಶೇಷವಾಗಿ ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶಿವನ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಹವನ ನೆರವೇರಿಸಿ ಅಭಿಷೇಕಗಳನ್ನು ನೆರವೇರಿಸಲಾಯಿತು. ಭಕ್ತರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ಎಸ್ಡಿಎಂನಲ್ಲಿ ವಿಶೇಷ ಪೂಜೆ: ನಗರದ ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ಮಂಜುನಾಥಸ್ವಾಮಿಗೆ ವಿಶೇಷ ಹೂವುಗಳಿಂದ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ವೈದ್ಯರು ಸೇರಿದಂತೆ ಇತರರು ದೇವರಿಗೆ ಪೂಜೆ ಸಲ್ಲಿಸಿದರು. ವಿಶೇಷವೆಂದರೆ ಕೆರಳ ಮೂಲದ ವಿದ್ಯಾರ್ಥಿಗಳನ್ನು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ನಮನ ಸಲ್ಲಿಸಿ ರಂಗೋಲಿ ಸ್ಪರ್ಧೆಯನ್ನು ನಡೆಸಿದರು. ಕಾಲೇಜಿನ ಆವರಣದಲ್ಲಿ ತಳಿರು ತೋರಣ ಕಟ್ಟಿ ಸಿಂಗಾರಗೊಳಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಎನ್.ರಾವ್, ವಿದ್ಯಾರ್ಥಿಗಳು, ವೈದ್ಯರು ಇತರರು ಇದ್ದರು.
ವೀರಶೈವ ಸಂಘದಿಂದ: ವೀರಶೈವ ಸಂಘದಿಂದ ನಗರದ ಅರಳೇಪೇಟೆ ಬಸವೇಶ್ವರ ದೇವಸ್ಧಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವತಾ ಮೂರ್ತಿಗಳಿಗೆ ಪದ್ಧತಿಯಂತೆ ರುದ್ರಾಭಿಷೇಕ ಪೂಜಾ ಕಾರ್ಯ, ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಯೋಗಿಸಲಾಯಿತು.
ಮಲ್ಲೇಶ್ವರಸ್ವಾಮಿ: ನಗರದ ಶ್ರೀಮಲ್ಲೇಶ್ವರಸ್ವಾಮಿಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. ದೇವರಿಗೆ ವಿಷೇಶವಾಗಿ ಹೋಮಹವನಗಳನ್ನು ನೆರವೇರಿಸಲಾಯಿತು. ಹಬ್ಬದ ಪ್ರಯುಕ್ತ ದೇವಸ್ಥಾನದವತಿಯಿಂದ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಗಳನ್ನುಗಳನ್ನು ಹಮ್ಮಿಕೊಳ್ಳಲಾಯಿತು.
ಶಿವಪಾರ್ವತಿ, ಲಕ್ಷ್ಮೀವೆಂಕಟೇಶ್ವರ ದೇವಾಲಯ: ಶಿವಪಾರ್ವತಿ ಮತ್ತು ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಬೆಳಗ್ಗೆ ಸರ್ವದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನರೆವೇರಿಸಿ ಮಹಾಮಂಗಳಾರತಿ ಮಾಡಿ ಪ್ರಸಾದ ವಿತರಿಸಲಾಯಿತು. ಸಂಜೆ ವಿಜಯಕುಮಾರ್ ಅವರಿಂದ ದೇವರನಾಮ, ಪ್ರೀತಿ ನಾರಾಯಣರಿಂದ ಭಕ್ತಿಗೀತೆ, ಎನ್.ವಿ.ಸೂರ್ಯನಾರಾಯಣರಿಂದ ಪೌರಾಣಿಕ ಗೀತೆಗಳು, ಸಾಕ್ಷತರಿಂದ ಭರತನಾಟ್ಯ ಹಾಗೂ ದೇವಸ್ಥಾನದ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮಗಳು ನಡೆದವು.
ಬ್ರಹ್ಮಲಿಂಗೇಶ್ವರಸ್ವಾಮಿ: ನಗರ ಹೊರವಲಯದ ಬೂವನಹಳ್ಳಿ ಕ್ರಾಸ್ ಬಳಿ ಇರುವ ಶ್ರೀಬ್ರಹ್ಮಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗಿಸಲಾಯಿತು. ಬೂವನಹಳ್ಳಿ, ಬುಸ್ತೇನಹಳ್ಳಿ, ಹುಲ್ಲೇನಹಳ್ಳಿ, ಬೊಮ್ಮೇನಹಳ್ಳಿ, ದೇವಿಹಳ್ಳಿ, ಹಳೇಕೊಪ್ಪಲು, ಜಿನ್ನೇನಹಳ್ಳಿ, ಅಟ್ಟವಾರಹೊಸಳ್ಳಿ, ಮುದಿಗೆರೆ, ದುದ್ದ ಹಾಗೂ ಇತರೆ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
25 ಅಡಿ ಎತ್ತರದ ಶಿವಲಿಂಗ: ಶಿವರಾತ್ರಿಯ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ವಿಭಿನ್ನವಾಗಿ 25 ಅಡಿ ಎತ್ತರದ ಕೃತಕ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ನಗರದ ಕನ್ನಡ ಸಾಹಿತ್ಯ ಪರಿಷತ್ ಭವನ ಆವರಣದಲ್ಲಿ 25 ಅಡಿ ಎತ್ತರದ ಕೃತಕ ಶಿವಲಿಂಗ ಮತ್ತು ಶಿವನ ದರ್ಶನ ಭಾಗ್ಯವನ್ನು ಮಾ.3 ರಿಂದ 12ರ ವರೆಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಜಗತ್ತಿನಲ್ಲಿ ಸತ್ಕಾರದ ಅರಿವು ಅನೇಕರಿಗೆ ಇಲ್ಲ.
ಶಿವ ಎಂದರೇ ಏನು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೆ ಸಂಸ್ಥೆಯ ಗುರಿಯಾಗಿದೆ. ಭಾರತದ ಪ್ರಸಿದ್ಧ ಲಿಂಗವನ್ನು ಕಳೆದ ವರ್ಷ ಪ್ರತಿಷಾಪಿಸಲಾಗಿತ್ತು. ಈ ಬಾರಿ 25 ಅಡಿ ಎತ್ತರದ ಶಿವಲಿಂಗ ದರ್ಶನದ ಭಾಗ್ಯ ನೀಡಲಾಗಿದೆ. ಮಂಟಪದಒಳಗೆ ಕೆಲ ಸಮಯ ಕುಳಿತು ಭಕ್ತಿಯಿಂದ ಇರಲು ಅವಕಾಶ ಕಲ್ಪಿಸಲಾಗಿದೆ.
ಜೀವಂತ ನಾಗರಹಾವಿಗೆ ಪೂಜೆ: ಶಿವರಾತ್ರಿ ಹಬ್ಬದಂದು ನಗರದ ವಿದ್ಯಾನಗರದಲ್ಲಿ ನಾಗರಹಾವು ಪ್ರತ್ಯಕ್ಷ ಗೊಂಡು ಸಾರ್ವಜನಿಕರನ್ನು ಭಯ ಭೀತಗೊಳಿಸಿತ್ತು. ರವಿ ಎಂಬುವರ ಮನೆಯಲ್ಲಿ 5 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷಗೊಂಡಿದ್ದು, ಕೂಡಲೇ ಹಾವನ್ನು ಹಿಡಿಯಲು ಶೇಷಪ್ಪ ಕರೆಸಿ ಹಾವನ್ನು ಹಿಡಿಸಿ ನಂತರ ಅದಕ್ಕೆ ಪೂಜೆ ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

