ಚಲಿಸುತ್ತಿದ್ದ ಟ್ರ್ಯಾಕ್ಟರ್ನಿಂದ ಬಿದ್ದು ವ್ಯಕ್ತಿ ಸಾವು
ಕನ್ನಡಪ್ರಭವಾರ್ತೆ ಹಾಸನ ಮಾ 10
ಚಾಲಕನ ನಿರ್ಲಕ್ಷ್ಯತೆಯಿಂದ ಟ್ರ್ಯಾಕ್ಟರ್ನಿಂದ ಕೆಳಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೊಂಡಗುಳ-ಗೌರಿಪುರ ರಸ್ತೆಯಲ್ಲಿ ಶನಿವಾರ ನಡೆದಿದೆ. ತಾಲೂಕಿನ ಎ.ಕಾಟೀಹಳ್ಳಿ ಗ್ರಾಮದ ಚಂದ್ರೇಗೌಡ (50) ಸಾವನ್ನಪ್ಪಿದ ದುರ್ದೈವಿ. ಚಂದ್ರೇಗೌಡ ಟ್ರ್ಯಾಕ್ಟರ್ ಟ್ರೇಲರ್ನಲ್ಲಿ ಕೂಲಿ ಕೆಲಸಕ್ಕೆ ಮರದ ಲೋಡಿನ ಮೇಲೆ ಕುಳಿತುಕೊಂಡು ಕೊಂಡಗುಳ-ಗೌರಿಪುರ ರಸ್ತೆ ಮಧ್ಯೆ ಹೋಗುತ್ತಿದ್ದಾಗ ಚಾಲಕ ನಿರ್ಲಕ್ಷ್ಯತೆಯಿಂದ ಚಲಾಯಿಸಿದ ಪರಿಣಾಮ ಚಂದ್ರೇಗೌಡ ಟ್ರ್ಯಾಕ್ಟರ್ನಿಂದ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತರಾದರು. ಸಂಬಂಧಿ ಪರಮೇಶ ದುದ್ದ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜೂಜಾಟ: 8 ಜನರ ಬಂಧನ
ಚನ್ನರಾಯಪಟ್ಟಣ: ಜೂಜಾಡುತ್ತಿದ್ದ 8 ಮಂದಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ನಗರದ ಡಿ.ಕಾಳೇನಹಳ್ಳಿ ರಸ್ತೆಯ ಬಾಲಾಜಿ ಟಾಕೀಸ್ ಹಿಂಭಾಗ ತೋಟದ ಸಾಲಿನಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದರು. ಮಾಗಡಿಬೀದಿಯ ದೀಪು (28), ಆನೆಕೆರೆಯ ಸೋಮಶೇಖರ, ಕುಮಾರಗೌಡ, ಡಿ.ಕಾಳೇನಹಳ್ಳಿಯ ಪುಟ್ಟರಾಜು (48), ನಂಜೇಗೌಡ (45), ನವೀನ (25), ರೂಪೇಶ ಮತ್ತು ನಾಗ (30) ಎಂಬವರನ್ನು ಬಂಧಿಸಿ, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 10,300 ರು. ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿ ನಾಪತ್ತೆ
ಹಾಸನ: ತಾಲೂಕಿನ ಕಟ್ಟಾಯ ಹೋಬಳಿ, ಜಿನ್ನೇನಹಳ್ಳಿ ಗ್ರಾಮದ ಅಣ್ಣಯ್ಯ ಎಂಬುವರ ಪತ್ನಿ ಪ್ರೇಮ(45) ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ 4.5 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಕನ್ನಡ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ರವಿಕೆ ಮತ್ತು ಸೀರೆ ಧರಿಸಿದ್ದರು. ಪತಿ ಅಣ್ಣಯ್ಯ ಗೊರೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವಕ ನಾಪತ್ತೆ
ಅರಸೀಕೆರೆ: ಪಟ್ಟಣ ಸುಬ್ರಹ್ಮಣ್ಯ ನಗರದ ಶೇಖರನಾಯ್ಕ ಪುತ್ರ ಸಂತೋಷ್ಕುಮಾರ್(22) ಮನೆಯಿಂದ ಹೊರಗೆ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ, ಕೋಲುಮುಖ, ಮನೆಯಿಂದ ಹೋಗುವಾಗ ಆಕಾಶ ನೀಲಿ ಟೀ ಶರ್ಟ, ಕಾಫಿ ಕಲರ್ ಜೀನ್ಸ್ ಪ್ಯಾಂಟ್ ಧರಿಸಿದ್ದರು. ತಂದೆ ಶೇಖರ್ನಾಯಕ್ ಅರಸೀಕೆರೆ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಬೇಲೂರು: ತಾಲೂಕಿನ ಮಾದಿಹಳ್ಳಿ ಹೋಬಳಿ, ಬೈರಗೋಡನಕೊಪ್ಪಲು ಗ್ರಾಮದ ದೇವೇಗೌಡರ ಪುತ್ರಿ ದಿವ್ಯ (18) ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ 5.1 ಅಡಿ ಎತ್ತರ, ಕೆಂಪುಬಣ್ಣ, ದುಂಡುಮುಖ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ತಂದೆ ದೇವೇಗೌಡ ಹಳೇಬೀಡು ಠಾಣೆಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

