ಹಾಸನ

ಅರಸೀಕೆರೆ: ಜೆಡಿಎಸ್, ಕಾಂಗ್ರೆಸ್ ಸಮಬಲ, ಅಧಿಕಾರಕ್ಕೆ ಕಿರಿಕಿರಿ

Published On :

ಕ.ಪ್ರ.ವಾರ್ತೆ೤ ಅರಸೀಕೆರೆ ೤ ಮಾ.11
ಪಟ್ಟಣದ ಪುರಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಭದ್ರಕೋಟೆಯಲ್ಲಿ ಬಿರುಕು ಕಾಣಿಸಿಕೊಂಡು ಸೊರಗಿದರೆ, ಕಾಂಗ್ರೆಸ್ ಚಿಗುರಿದ್ದು ತಾವರೆ ಮುಳುಗಿದೆ, ಕೆಜೆಪಿ ಖಾತೆ ತೆರೆಯುವಲ್ಲಿ ಸಫಲವಾಗಿದೆ.
ಕಳೆದ ಬಾರಿ 27 ಸ್ಥಾನಗಳ ಪೈಕಿ 22ರಲ್ಲಿ ಜಯಗಳಿಸಿ ಆಡಳಿತಸೂತ್ರ ಹಿಡಿದ ಜೆಡಿಎಸ್ ಈ ಬಾರಿ ಕೇವಲ 11 ಸ್ಥಾನ ಪಡೆದಿದ್ದು 2 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ 11 ಸ್ಥಾನ ಪಡೆಯುವ ಮೂಲಕ ಸುಧಾರಣೆ ಕಂಡಿದ್ದರೆ 2 ಸ್ಥಾನ ಪಡೆದಿದ್ದ ಬಿಜೆಪಿ ಶೂನ್ಯ ಸಂಪಾದನೆಯ ಮೂಲಕ ನಿರಶಾದಾಯಕ ಪ್ರದರ್ಶನ ನೀಡಿದ್ದರೆ ಕೆಜೆಪಿ 1 ಸ್ಥಾನ ಪಡೆಯುವ ಮೂಲಕ ಖಾತೆ ತೆರೆದಿದೆ.
ಮಾಜಿ ಉಪಾಧ್ಯಕ್ಷ ಜೆಡಿಎಸ್‌ನ ಖುಷಿಬಾಬು 11ನೇ ವಾರ್ಡ್‌ನಿಂದ 2ನೇ ಬಾರಿಗೆ ಗೆಲುವು ಕಂಡಿದ್ದರೆ 21ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಹಣ ಮತ್ತು ಅಧಿಕಾರದ ವಿರುದ್ಧ ಜೆಡಿಎಸ್‌ಗೆ ಸೆಡ್ಡು ಹೊಡೆದು ಬಿ.ಎನ್.ವಿದ್ಯಾಧರ 4ನೇಯ ಬಾರಿಗೆ ಜಯಸಾಧಿಸಿ ಇತಿಹಾಸ ಸೃಷ್ಟಿಸಿದ್ದಾರೆ.
1ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಎಚ್.ಎನ್.ಹರೀಶ್ 246 ಮತ ಪಡೆದಿದ್ದು ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿ ಪಂಚಾಕ್ಷರಿ 549 ಮತ ಪಡೆಯುವ ಮೂಲಕ 303 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
2ನೇ ವಾರ್ಡ್ - ಜೆಡಿಎಸ್  ಅಭ್ಯರ್ಥಿ ಮುರುಗನ್  472 ಮತ ಪಡೆದಿದ್ದು ಅವರ  ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ  ಪಿ ಬಾಲಮುರುಗನ್  475 ಮತ ಪಡೆಯುವ ಮೂಲಕ 3 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
3ನೇ ವಾರ್ಡ್ -  ಕಾಂಗ್ರೆಸ್ ಅಭ್ಯರ್ಥಿ  ಜಿ.ವಿ.ಶಿವಶಂಕರಪ್ಪ 448 ಮತ ಪಡೆದಿದ್ದು ಅವರ ವಿರುದ್ಧ  ಜೆಡಿಎಸ್ ಅಭ್ಯರ್ಥಿ ಸಯದ್‌ಗಯಾಸುದ್ದೀನ್ 709 ಮತ ಪಡೆದು 261 ಮತಗಳ ಅಂತರದ ಜಯಗಳಿಸಿದ್ದಾರೆ.
4ನೇ ವಾರ್ಡ್ - ಕಾಂಗ್ರೆಸ್ ಅಭ್ಯರ್ಥಿ  ಪಾಪಣ್ಣ 179 ಮತ ಪಡೆದಿದ್ದು ಅವರ ವಿರುದ್ಧ  ಜೆಡಿಎಸ್ ಅಭ್ಯರ್ಥಿ  ಮಂಜುನಾಥ್ 507 ಮತ ಪಡೆಯುವ ಮೂಲಕ 328 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
5ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ  ಶಿವನ್ರಾಜ್ 336 ಮತ ಪಡೆದಿದ್ದು ಅವರ ವಿರುದ್ಧ  ಜೆಡಿಎಸ್ ಅಭ್ಯರ್ಥಿ  ಸುರೇಶ್ ಆರ್ 524 ಮತ ಪಡೆಯುವ ಮೂಲಕ 188 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
6ನೇ ವಾರ್ಡ್  - ಕಾಂಗ್ರೆಸ್ ಅಭ್ಯರ್ಥಿ ಪದ್ಮಾ ಕೆ ರಾಮು 246 ಮತ ಪಡೆದಿದ್ದು  ಅವರ ವಿರುದ್ಧ  ಜೆಡಿಎಸ್ ಅಭ್ಯರ್ಥಿ ಅನ್ನಪೂರ್ಣ  300 ಮತ ಪಡೆಯುವ ಮೂಲಕ 54 ಮತಗಳ  ಅಂತರದಿಂದ ಜಯಗಳಿಸಿದ್ದಾರೆ.
7ನೇ ವಾರ್ಡ್  ಜೆಡಿಎಸ್ ಅಭ್ಯರ್ಥಿ  ಶಾಂತರಾಜ್ 147 ಮತ ಪಡೆದಿದ್ದು ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ  ವೈ.ಜಿ.ಹಾಜಿವಲಿ 254 ಮತ ಪಡೆಯುವ ಮೂಲಕ 112 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
8ನೇ ವಾರ್ಡ್  ಕಾಂಗ್ರೆಸ್ ಅಭ್ಯರ್ಥಿ ಜಯಮ್ಮ ಕಾಳೇಗೌಡ 327 ಮತ ಪಡೆದಿದ್ದು  ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿ ಭಾಗ್ಯಲತಾ ಮಂಜು 1079 ಮತ ಪಡೆಯುವ ಮೂಲಕ  742 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
9ನೇ ವಾರ್ಡ ಜೆಡಿಎಸ್ ಅಭ್ಯರ್ಥಿ ಕೆ.ಎಸ್.ರೇಖಾ  224 ಮತ ಪಡೆದಿದ್ದು ಅವರ  ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ  ಮಂಜುಳ  ಮಂಜುನಾಥ್ 297 ಮತ ಪಡೆಯುವ ಮೂಲಕ  73 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
10ನೇ ವಾರ್ಡ್ - ಜೆಡಿಎಸ್  ಅಭ್ಯರ್ಥಿ  ಬಿ.ಆರ್.ರುಕ್ಮಿಣಿ 287 ಮತ ಪಡೆದಿದ್ದು ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಜಿ ಗೌರಮ್ಮ 440 ಮತ ಪಡೆಯುವ ಮೂಲಕ 153 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
11ನೇ ವಾರ್ಡ್  ಕೆಜೆಪಿ ಅಭ್ಯರ್ಥಿ  ಎನ್.ಜಿ.ಮಧು 242 ಮತ ಪಡೆದಿದ್ದು ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿ  ಖುಷಿಬಾಬು 258 ಮತ ಪಡೆಯುವ ಮೂಲಕ 11 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
12ನೇ ವಾರ್ಡ್ -  ಜೆಡಿಎಸ್  ಅಭ್ಯರ್ಥಿ  ಪ್ರೇಮಾ  ಮಲ್ಲಿಕಾರ್ಜುನ 356 ಮತ ಪಡೆದಿದ್ದು  ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ   ಗೀತಾ ಓ.ಜಿ. 365 ಮತ ಪಡೆದು 9 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
13ನೇ ವಾರ್ಡ್-  ಜೆಡಿಎಸ್  ಅಭ್ಯರ್ಥಿ  ಲಕ್ಷ್ಮಿಬಾಯಿ  313 ಮತ ಪಡೆದಿದ್ದು ಅವರ  ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ  ಮಾಲಾಬಾಯಿ  364 ಮತ ಪಡೆಯುವ ಮೂಲಕ 51 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
14ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ  ಕೆ.ಸಿ.ಲೋಕೇಶ್ 223 ಮತ ಪಡೆದಿದ್ದು ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ  ಜೆ.ವಿ.ರಂಗನಾಥ್ 283 ಮತ ಪಡೆಯುವ ಮೂಲಕ 60 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
15ನೇ ವಾರ್ಡ್  - ಕೆಜೆಪಿ ಅಭ್ಯರ್ಥಿ ರೇವಣ್ಣ 206 ಮತ ಪಡೆದಿದ್ದು ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ  ಎಂ.ಎಂ.ಶ್ರೀನಿವಾಸ್ ಪಾಪಣ್ಣ 414 ಮತ ಪಡೆಯುವ ಮೂಲಕ 206 ಮತಗಳ ಅಂತರದ ಜಯಗಳಿಸಿದ್ದಾರೆ.
16ನೇ ವಾರ್ಡ್ - ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬುದ್ಧಿವಂತ 260 ಮತ ಪಡೆದಿದ್ದು ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿ  ಫೈರೋಜ್ 321 ಮತ ಪಡೆಯುವ ಮೂಲಕ 61 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
17ನೇ ವಾರ್ಡ್ - ಜೆಡಿಎಸ್ ಅಭ್ಯರ್ಥಿ  ಜಿ.ಟಿ.ಗಣೇಶ್ 357 ಮತ ಪಡೆದಿದ್ದು ಅವರ  ವಿರುದ್ಧ ಕೆ.ಜೆ.ಪಿ. ಅಭ್ಯರ್ಥಿ  ಎಸ್.ಎಸ್.ಶೈಲೇಂದ್ರ ಕುಮಾರ್ 434 ಮತ ಪಡೆದು77 ಮತದ ಅಂತರದ ಜಯಗಳಿಸಿದ್ದಾರೆ.
18ನೇ ವಾರ್ಡ್ -  ಕೆಜೆಪಿ ಅಭ್ಯರ್ಥಿ  ಬಿ ರಾಜೇಂದ್ರಕುಮಾರ್ 254 ಮತ ಪಡೆದಿದ್ದು ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ  ಕಾಂತೇಶ್ ಆರ್ 482 ಮತ ಪಡೆದು 232 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
20ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ  ದರ್ಶನ್ ಎ.ವಿ. 199 ಮತ ಪಡೆದಿದ್ದು ಅವರ  ವಿರುದ್ಧ ಪಕ್ಷೇತರ ಅಭ್ಯರ್ಥಿ  ಕೆ.ಪಿ.ಬಬ್ರುವಾಹನರಾವ್  306 ಮತ ಪಡೆದು107 ಮತಗಳ  ಅಂತರದಿಂದ ಜಯಗಳಿಸಿದ್ದಾರೆ.
21ನೇ ವಾರ್ಡ್ - ಜೆಡಿಎಸ್  ಅಭ್ಯರ್ಥಿ  ಕಿರಣ್‌ಣ್ಕುಮಾರ್ ಎ.ಜಿ 306 ಮತ ಪಡೆದಿದ್ದು,   ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿ   ವಿದ್ಯಾಧರ ಬಿ.ಎನ್. 574 ಮತ ಪಡೆಯುವ ಮೂಲಕ 268 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
22ನೇ ವಾರ್ಡ್ -  ಬಿ.ಜೆ.ಪಿ. ಅಭ್ಯರ್ಥಿ  ಎನ್.ಡಿ.ಪ್ರಸಾದ್ 288 ಮತ ಪಡೆದಿದ್ದು ಅವರ ವಿರುದ್ಧ ಜೆ.ಡಿ.ಎಸ್. ಅಭ್ಯಥರ್ ಪಾರ್ಥಸಾರಥಿ 346 ಮತ ಪಡೆಯುವ ಮೂಲಕ 58 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
23ನೇ ವಾರ್ಡ್ - ಕಾಂಗ್ರೆಸ್ ಅಭ್ಯರ್ಥಿ  ಶಫಿ ಅಹಮದ್ 263 ಮತ ಪಡೆದಿದ್ದು  ಅವರ ವಿರುದ್ಧ ಜೆ.ಡಿ.ಎಸ್. ಅಭ್ಯರ್ಥಿ  ಎಂ.ಸಮೀವುಲ್ಲಾ  126 ಮತ ಪಡೆದು 137 ಮತಗಳ  ಅಂತರದಿಂದ ಜಯಗಳಿಸಿದ್ದಾರೆ.
24ನೇ ವಾರ್ಡ್ - ಜೆ.ಡಿಎಸ್ ಅಭ್ಯರ್ಥಿ ಅಬ್ದುಲಲ್ಜಮೀಲ್ 301 ಮತ ಪಡೆದಿದ್ದು ಅವರ ವಿರುದ್ಧ ಪಕ್ಷೇತರ ಅಭ್ಯಥರ್ ಯೂನಸ್ 323 ಮತ ಪಡೆಯುವ ಮೂಲಕ 22 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
25ನೇ ವಾರ್ಡ್  ಕಾಂಗ್ರೆಸ್ ಅಭ್ಯರ್ಥಿ  ಗುಲ್ನಾಜಜ್ಬೇಗಂ 381 ಮತ ಪಡೆದಿದ್ದು ಅವರ ವಿರುದ್ಧ ಜೆ.ಡಿ.ಎಸ್. ಅಭ್ಯರ್ಥಿ ಎ.ಎಸ್.ಕೆ.ನಜೀಮಾಬಾನು 867 ಮತ ಪಡೆಯುವ ಮೂಲಕ 486 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
26ನೇ ವಾರ್ಡ್  - ಕೆ.ಜೆ.ಪಿ. ಅಭ್ಯರ್ಥಿ  ಪ್ರೇಮಾ  ಎಂ.ಇ. 201 ಮತ ಪಡೆದಿದ್ದು ಅವರ  ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ  ಬಿ.ಗೀತಾ ವಿಶ್ವನಾಥ್ 343 ಮತ ಪಡೆಯುವ ಮೂಲಕ 142 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.