ಹಾಸನ

25 ರಂದು ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಸಿದ್ಧತೆ ಕುರಿತು ಪೂರ್ವಭಾವಿ ಸಭೆ

Published On :

ಕ.ಪ್ರ.ವಾರ್ತೆ೤ ಹೊಳೆನರಸೀಪುರ೤ ಮಾ.14
ಪಟ್ಟಣದ ಪುರದೈವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಇದೇ ಮಾ.25ರಂದು ನಡೆಯಲಿದ್ದು, ರಥೋತ್ಸವ ಸಿದ್ದತೆಗಳ ಕುರಿತಂತೆ ದೇವಾಲಯ ಆವರಣದಲ್ಲಿ ಜನಪ್ರತಿನಿಧಿಗಳು ಹಾಗೂ ನಾಗರಿಕರ ಸಮ್ಮುಖದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿದರು.
ರಥೋತ್ಸವ ಆಚರಣೆಯ ಕುರಿತಂತೆ ಪ್ರಮುಖವಾಗಿ ಬ್ರಹ್ಮರಥವನ್ನು ಪಾರಂಪರಿಕವಾಗಿ ಸಿದ್ದಗೊಳಿಸುವ ಬಗ್ಗೆ, ರಥದ ಭದ್ರತೆಯ ದೃಷ್ಟಿಯಿಂದ ಹೊಸದಾಗಿ ಮರ,ಮುಟ್ಟುಗಳನ್ನು ರಥದ ಗೋಪುರದ ನಿರ್ಮಾಣಕ್ಕಾಗಿ ಸಿದ್ದಗೊಳಿಸಲು ತೀರ್ಮಾನಿಸಲಾಯಿತು. ರಥೋತ್ಸವ ಹಾಗೂ ಹಿಂದಿನ ದಿನಗಳಲ್ಲಿ ಆರಂಭಗೊಳ್ಳುವ ನಾನಾ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ಹಾಗೂ ನಿಷ್ಠೆಯಿಂದ ಕೈಗೊಳ್ಳಲು ತೀರ್ಮಾನಿಸಲಾಯಿತು.
ರಥೋತ್ಸವದಂದು ಹೊರಗಿನಿಂದ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ತೀರ್ಮಾನಿಸಿದ ಸಭೆ, ಇದಕ್ಕೆ ಸಂಬಂಧಿಸಿದಂತೆ ಪೂಜಾ ಕಾರ್ಯಗಳಲ್ಲಿ ಯಾವುದೇ ಲೋಪಗಳೂ ನುಸುಳದಂತೆ ಎಚ್ಚರಿಕೆ ವಹಿಸಲು ಹಾಗೂ  ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಸೂಕ್ತ ಪೊಲೀಸ್ ಬಂದೋಬಸ್ತ್
ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳಲ್ಲಿ ಕೋರಲಾಯಿತು.
ಜಾತ್ರಾ ಮಹೋತ್ಸವ ವಿಜೃಂಭಣೆ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಪುರಸಭೆಯ ಆಡಳಿತ ಹಾಗೂ ಸದಸ್ಯರ ಸಂಪೂರ್ಣ ಸಹಕಾರ ಕೋರಲಾಯಿತು. ಜಾತ್ರಾ ಮಹೋತ್ಸವ ಆಚರಣೆಯ ಕುರಿತಂತೆ ಹೆಚ್ಚಿನ ಪ್ರಚಾರ ನೀಡಿ ಪಟ್ಟಣವನ್ನು ಅಲಂಕರಿಸಲು ಸಭೆ ತೀರ್ಮಾನಿನಿಸಿತು.
 ಉಪತಹಸೀಲ್ದಾರ್ ವಸಂತಕುಮಾರ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಮಲ್ಲೇಶ್, ಆರಕ್ಷಕ ವೃತ್ತ ನಿರೀಕ್ಷಕ ಗೋಪಾಲನಾಯಕ್, ನಗರ ಠಾಣೆ ಎಸ್ಸೈ ಶಿವಕುಮಾರ್, ಪುರಸಭೆ ನೂತನ ಸದಸ್ಯ ಎಚ್.ವಿ.ಪುಟ್ಟರಾಜು, ಎಚ್.ವಿ.ಸುರೇಶ್, ಸುಮಿತ್ರಾದೇವಿ, ತುಳಸಿ, ಶೋಭ, ಜಯಕಾಂತಮ್ಮ, ಸರಸ್ವತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.