ಅಂತ್ಯಕ್ರಿಯೆಗೆ ಪರದಾಟ ಸ್ಮಶಾನಕ್ಕೆ ಜಾಗ ಕಲ್ಪಿಸದಿದ್ದರೆ ಪ್ರತಿಭಟನೆ
ಕನ್ನಡಪ್ರಭವಾರ್ತೆ ರಾಮನಾಥಪುರ ಮಾ. 15
ಇಲ್ಲಿನ ಅಲ್ಪಸಂಖ್ಯಾತ ಜನಾಂಗಕ್ಕೆ ಸ್ಮಶಾನವಿಲ್ಲದ ಕಾರಣ ಈಚೆಗೆ ನಿಧನರಾದ ರಾಮನಾಥಪುರ ಸನಿಹದ ಮಲ್ಲಿರಾಜಪಟ್ಟಣದ ಸಮಾಜ ಸೇವಕ ಸಾದಿಕ್ (38) ಅವರ ಶವವನ್ನು 5 ಕಿ.ಮೀ. ದೂರದ ಕಾವೇರಿ ನದಿ ಕೃಷ್ಣರಾಜ ಅಣೆಕಟ್ಟೆಯ ಸಮೀಪವಿರುವ ಕಟ್ಟೇಪುರ ಗ್ರಾಮದ ಖಬರುಸ್ತಾನ್ಗೆ ತೆಗೆದುಕೊಂಡು ಹೋಗಿ ಗುರುವಾರ ಅಂತ್ಯ ಸಂಸ್ಕಾರ ಮಾಡಲಾಯಿತು.
ಈ ಬಗ್ಗೆ ಮುಸ್ಲಿಂ ಕಮಿಟಿ ಅಧ್ಯಕ್ಷ ಅರ್.ಎಂ. ಸಾದಿಕ್ಸಾಬ್ ಮಾತನಾಡಿ, ರಾಮನಾಥಪುರ ಹಾಗೂ ಪಕ್ಕ ಮಲ್ಲಿರಾಜಪಟ್ಟಣದಲ್ಲಿ ಸುಮಾರು 100 ವಕ್ಕಲುಗಳು ಮುಸಲ್ಮಾನ ಜನಾಂಗದವರು ವಾಸವಾಗದ್ದು ಇವರಿಗೆ ಶವ ಸಂಸ್ಕಾರ ಮಾಡಲು ಜಾಗವಿಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದರು. ಎರಡು ದಿನಗಳಿಂದ ಅರೋಗ್ಯ ಸರಿಯಿಲ್ಲದೇ ಬುಧವಾರ ಸಂಜೆ ನಿಧನರಾದ ಸಾದಿಕ್ ಅವರನ್ನು ಗುರುವಾರ ಶವ ಸಂಸ್ಕಾರ ಮಾಡಲು ಪರದಾಡಬೇಕಾಯಿತು.
ಮುಸಲ್ಮಾನ ಜನಾಂಗದವರು ಸಾದಿಕ್ ಶವವನ್ನು ರಾಮನಾಥಪುರ ನಾಡಕಚೇರಿ ಮುಂದೆ ಇಟ್ಟು ಮತ್ತೊಂದು ಭಾರಿ ಪ್ರತಿಭಟನೆ ಮಾಡಲು ಸಜ್ಜಾಗಿದ್ದವು. ಆದರೆ ಸಂಬಂಧಪಟ್ಟ ಕೆಲವು ಹಿರಿಯರು ಹಾಗೂ ಮುಖಂಡರು ಮಧ್ಯ ಪ್ರವೇಶಿಸಿ ಪ್ರತಿಭಟನೆ ಬೇಡ, ಹತ್ತಿರದ ಕಟ್ಟೇಪುರ ಜಮಾ ಮಸೀದಿಯವರಿಗೆ ಶವಸಂಸ್ಕಾರ ಮಾಡಲು ತಿಳಿಸಿದ್ದೇವೆ ಎಂಬ ಆಶ್ವಾಸನೆ ನೀಡಿದ ನಂತರ ನಾವು ಕಟ್ಟೇಪುರದಲ್ಲಿ ಶವ ಸಂಸ್ಕಾರ ಮಾಡಿದೆವು ಎಂದರು. ರಾಮನಾಥಪುರ ವ್ಯಾಪ್ತಿಯಲ್ಲಿ ಸ್ಮಶಾನ ಜಾಗ ಕಲ್ಪಿಸದಿದ್ದರೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳಲಾಗುವುದು ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

