ಹಾಸನ

ಶಿರದನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ: ಗ್ರಾಮಸ್ಥರ ಪರದಾಟ

Published On :

ಕ.ಪ್ರ.ವಾರ್ತೆ೤ ರಾಮನಾಥಪುರ೤ ಮಾ. 15
ಇಲ್ಲಿಗೆ ಸಮೀಪದ ಶಿರದನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಸಮರ್ಪಕವಾಗಿ ನೀರು ಪೂರೈಕೆಯಾಗದೆ ಗ್ರಾಮಸ್ಥರು ಪರದಾಡುವಂತಾಗಿದೆ.
ಗ್ರಾಮದ ವಾಟರ್‌ಮನ್, ಗ್ರಾಮ ಪಂಚಾಯ್ತಿ ಗಮನಕ್ಕೆ ತಾರದೆ ಒಬ್ಬರಿಗೆ ಇರುವ ನಲ್ಲಿಯೊಂದಿಗೆ ಮತ್ತೊಂದು ನಲ್ಲಿಯ ಅಕ್ರಮ ಸಂಪರ್ಕ ನೀಡಲಾಗಿದೆ. ಈ ರೀತಿ ಸಂಪರ್ಕ ಪಡೆದವರು ಸುಮಾರು 10 ವರ್ಷಗಳಿಂದ ಬರೀ ಒಂದು ನಲ್ಲಿಯ ಕಂದಾಯ ಮಾತ್ರ ಕಟ್ಟುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬಾರಿ ನಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ವಿಚಾರವನ್ನು ಇಲ್ಲಿನ ಪಂಚಾಯ್ತಿ  ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ಗ್ರಾಮಸ್ಥರು ತಂದಿದ್ದರೂ  ಅಧಿಕಾರಿಗಳು ಮಾತ್ರ ಯಾವುದೋ ಅನುಬಂಧ ಅಥವಾ ಒತ್ತಡಕ್ಕೆ ಮನಸೋತು ಕ್ರಮ ಕೈಗೊಳ್ಳುತ್ತಿಲ್ಲ. ಈಗಿನ ವಿದ್ಯುತ್ ವ್ಯತ್ಯಯ ಅದರಲ್ಲೂ ಅಕ್ರಮ ಎರಡೆರಡು ನಲ್ಲಿ ಸಂಪರ್ಕದಿಂದಾಗಿ ಇರುವ ನಲ್ಲಿಗಳಲ್ಲಿ ಕುಡಿಯುವ ನೀರು ಪಡೆಯುವುದೇ ಗ್ರಾಮಸ್ಥರಿಗೆ ಕಷ್ಟಕರವಾಗಿದೆ.
ಆದ್ದರಿಂದ  ಸಂಬಂಧಪಟ್ಟ ಅಧಿಕಾರಿಗಳು ಈ ರೀತಿ ಅಕ್ರಮ ನಲ್ಲಿ ಸಂಪರ್ಕ ಹೊಂದಿರುವವರಿಗೂ ಹಾಗೂ ನೀಡಿರುವವರಿಗೂ ಕಾನೂನು ಕ್ರಮ ಕೈಗೊಂಡು  ಅವುಗಳನ್ನು ರದ್ದು ಮಾಡಿ ಸರಾಗವಾಗಿ ಕುಡಿಯುವ ನೀರಿನ ಪೂರೈಕೆಗೆ ಅನುವು ಮಾಡಿಕೊಡಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.