ಹಾಸನ

ಹೆಣ್ಣು, ಗಂಡು ಪರಸ್ಪರ ಪೂರಕವೇ ಹೊರತು ಸ್ಪರ್ಧಾಳುಗಳಲ್ಲ: ಪ್ರಭಾಕರ್

Published On :

ಕನ್ನಡಪ್ರಭವಾರ್ತೆ೤ ಹಾಸನ೤ ಮಾ. 15
ಪ್ರಕೃತಿಯಲ್ಲಿ ಹೆಣ್ಣು -ಗಂಡು  ಇಬ್ಬರೂ ಒಬ್ಬರಿಗೊಬ್ಬರು ಪೂರಕವೇ ಹೊರತು ಸ್ಪರ್ಧಾಳುಗಳಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ  ಟಿ.ಎನ್. ಪ್ರಭಾಕರ್ ಹೇಳಿದರು. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚೀನ ಇತಿಹಾಸವನ್ನು ಗಮನಿಸಿದರೆ ಹೆಣ್ಣು ಮತ್ತು ಗಂಡಿಗೆ ಭೇದ ತೋರಿಸಿಲ್ಲ. ಒಬ್ಬರಿಗೊಬ್ಬರು ಪೂರಕ ಎಂದು ಹೇಳಿದರು. ಪುರುಷರಿಂದ ಮಹಿಳೆಯರಿಗೆ ಹಾಗೂ ಮಹಿಳೆಯರಿಂದ ಪುರುಷರಿಗೆ ಆಗಿರುವ ಉಪಕಾರ ನೆನಪಿಸಿಕೊಂಡು ಸಹ ಬಾಳ್ವೆಯನ್ನು ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಹಿಂದಿನ ಮಹಾಪುರುಷರು ಹಾಗೂ ಮಹಾಸಂತರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮೂಲಕ ಒಬ್ಬರ ವ್ಯಕ್ತಿತ್ವ ಇನ್ನೊಬ್ಬರಿಗೆ ತಿಳಿಸುವಂತೆ ಕರೆ ನೀಡಿದರು. ಇದೇ ವೇಳೆ ವಿದ್ಯಾರ್ಥಿನಿಯರು ಚಲನಚಿತ್ರ ಗೀತೆಗಳಿಗೆ ಸಾಮೂಹಿಕ ನೃತ್ಯ ಮಾಡಿದರು. ಪ್ರಾಂಶುಪಾಲ  ವಿ. ಕೃಷ್ಣಪ್ಪ, ಉಪನ್ಯಾಸಕ ಲೋಕಪ್ಪಗೌಡ, ಸುಂದರ್, ಶ್ರೀನಿವಾಸ್, ದಿಲೀಪ್‌ಕುಮಾರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.