ಕ.ಪ್ರ. ವಾರ್ತೆ ಹಾರನಹಳ್ಳಿ ಮಾ. 30
ಕೆಲ್ಲೆಂಗೆರೆ ಗ್ರಾಮದ ಅಂತರಗಟ್ಟೆಮ್ಮ ಜಾತ್ರಾ ಮಹೋತ್ಸವ ಶುಕ್ರವಾರ ವೈಭವದಿಂದ ನಡೆಯಿತು.ಅಂತರಗಟ್ಟೆಮ್ಮ ದೇವಿಯ ಮೂಲ ಸನ್ನಿದಾನದಲ್ಲಿ ವಿಶೇಷ ಅಭಿಷೇಕ ಮಹಾಪೂಜೆ ನೆರವೇರಿಸಿದ ನಂತರ ಉಡಿಸಲಮ್ಮ, ಹಟ್ಟಿಯಮ್ಮ, ಅಂತರಗಟ್ಟೆಮ್ಮನ ರಥದಲ್ಲಿ ಕುಳ್ಳಿರಿಸಿ ಮಹಾಮಂಗಳಾರತಿ ನಂತರ ರಥೋತ್ಸವ ನಡೆಯಿತು. ಚಿಕ್ಕಯ್ಯ ಹಾಗೂ ಧೂತರಾಯ ಸ್ವಾಮಿ ಸೋಮನ ಕುಣಿತ, ಅರೆವಾದ್ಯ ಆಕರ್ಷಕವಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಎಪಿಎಂಸಿ ಅಧ್ಯಕ್ಷ ಮುರುಂಡಿ ಶಿವಯ್ಯ, ಪುರಸಭೆ ಮಾಜಿ ಅಧ್ಯಕ್ಷ ಸಿದ್ದರಾಮಶೆಟ್ಟಿ ಪಾಲ್ಗೊಂಡು ದೇವಿ ದರ್ಶನ ಪಡೆದರು.