ಹಾಸನ

ಹೊಯ್ಸಳ ಸಾಮ್ರಾಜ್ಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

Published On :

ಬೇಲೂರು: ವಿಶ್ವಕ್ಕೆ ಮಾದರಿ ಶಿಲ್ಪಕಲೆಗಳನ್ನು ನೀಡಿದ ಹೊಯ್ಸಳರ ಬದುಕಿನ ಬಗ್ಗೆ ಸಂಶೋಧನೆ ಮಾಡ ಬೇಕಾಗಿದೆ ಎಂದು ಮೈಸೂರು  ವಿಶ್ವವಿದ್ಯಾಯಲಯದ ನಿವೃತ್ತ ಇತಿಹಾಸ ಸಂಶೋಧಕ ಡಾ.ಎಂ.ವಿ.ಶ್ರೀನಿವಾಸ್ ತಿಳಿಸಿದರು.ಪಟ್ಟಣದ ವೈ.ಡಿ.ಡಿ. ಪ್ರಥಮ ದರ್ಜೆ ಕಾಲೇಜು ಯುಜಿಸಿ ಪ್ರಾಯೋಜಕತ್ವದಲ್ಲಿ ಇತಿಹಾಸ ವಿಭಾಗದಿಂದ  ಆಯೋಜಿಸಿದ್ದ  ಹೊಯ್ಸಳ ಸಾಮ್ರಾಜ್ಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಶಾಸನಗಳಿಂದ ಮಾತ್ರ ಸಾಮ್ರಾಜ್ಯದ ಬಗ್ಗೆ ತಿಳಿಯಲು ಸಾಧ್ಯವಿಲ್ಲ. ವಿದ್ವಾಂಸರು ಅಧ್ಯಯನ ನಡೆಸಿದಾಗ ಮಾತ್ರ  ಹೊಯ್ಸಳರ ಸಮಗ್ರ ಸ್ಥಿತಿ ಹೇಗಿತ್ತು ಎಂಬುದು ತಿಳಿಯಲು ಸಾಧ್ಯ.  ಹೊಯ್ಸಳರ ವಿಸ್ತಾರ ಮಲೆನಾಡಿನಿಂದ ತಮಿಳುನಾಡಿನ ತನಕ ಹಬ್ಬಿದ್ದು ತಮಿಳುನಾಡಿನಲ್ಲಿ ಹೊಯ್ಸಳರ ಬಗ್ಗೆ ವೆಂಕಟರಾಮಯ್ಯ ಅಧ್ಯಯನ ಮಾಡಿದ್ದಾರೆ. ಕನ್ನಡ ನಾಡಿನಲ್ಲಿ ಅವರ ಶಿಲ್ಪಕಲೆಗಳ ಬಗ್ಗೆ ಮಾತ್ರ ಅಧ್ಯಯನ ನಡೆದಿದ್ದು ಮುಂದಿನ ದಿನಗಳಲ್ಲಿ ಅವರ ಬದುಕು ಮತ್ತು  ಬರಹದ ಬಗ್ಗೆ ಸಮಗ್ರ ಮಾಹಿತಿ ಹೊರ ತರುವುದು ಅವಶ್ಯಕವಾಗಿದೆ ಎಂದರು.
ಬೇಲೂರು ಮತ್ತು ಹಳೇಬೀಡಿನಲ್ಲಿರುವ ವಾಸ್ತು ಶಿಲ್ಪಗಳ ಕೆತ್ತನೆ ನೈಪುಣ್ಯತೆಯಿಂದ ಕೂಡಿದೆ. ಆದರೆ ಅವರ ಸಮಗ್ರ ಇತಿಹಾಸ ನಮ್ಮಲ್ಲಿ ಲಭ್ಯವಿಲ್ಲ ಎಂದು ವಿಷಾದಿಸಿದರು.
ಡಾ. ಪಿ. ಚಂದ್ರಪ್ಪ ಮಾತನಾಡಿ, ಇತಿಹಾಸ ಅರಿವು ಸಾರ್ವಜನಿಕರಿಗೆ ಅಗತ್ಯವಾಗಿದೆ. ಹೊಯ್ಸಳ ಸಾಮ್ರಾಜ್ಯದ ಭವ್ಯತೆಯನ್ನು ನಾವು ಉಳಿಸಿಕೊಂಡು ಮುಂದಿನ ಪೀಳಿಗೆಗೆ ತೆಗೆದುಕೊಂಡು  ಹೋಗುವಲ್ಲಿ ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.