ಶುಂಠಿ ಬೆಳೆಯಲ್ಲಿ ಕಾಂಡ ಕೊರಕ ಹುಳುವಿನ ನಿರ್ವಹಣೆ ಕ್ಷೇತ್ರೋತ್ಸವ
ಬೇಲೂರು: ಹಾಸನದ ಕಂದಲಿ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ತಾಲೂಕಿನ ಕನ್ನಾಯಕನಹಳ್ಳಿಯಲ್ಲಿ ಶುಂಠಿ ಬೆಳೆಯಲ್ಲಿ ಶುಂಠಿ ಬೆಳೆಯಲ್ಲಿ ಕಾಂಡ ಕೊರಕ ಹುಳುವಿನ ನಿರ್ವಹಣೆ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ತೋಟಗಾರಿಕೆ ಸಹಾಯಕ ಅಧಿಕಾರಿ ವಸಂತ್ ಕಾರ್ಯಕ್ರಮ ಉದ್ಘಾಟಿಸಿ, ಇಲಾಖೆಯ ನಾನಾ ಯೋಜನೆಗಳ ಬಗ್ಗೆ ವಿವರಿಸಿ ಅವುಗಳ ಸೌಲಭ್ಯ ಪಡೆಯಲು ರೈತರಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಮರಿಶೆಟ್ಟರು ಮಾತನಾಡಿ, ರೈತರು ಕೇಂದ್ರದ ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ ಪಡೆದು ಪ್ರಾತ್ಯಕ್ಷಿಕೆ ಕೈಗೊಂಡಿದ್ದ ತಾಕಿನಲ್ಲಿ ಕಾಂಡಕೊರೆಯುವ ಹುಳದ ಬಾಧೆ ಕಡಿಮೆಯಾಗಿರುವುದು ಕಂಡುಬಂದಿದೆ. ಇದೇ ರೀತಿ ರೈತರು ಅನುಸರಿಸಿದ್ದಲ್ಲಿ ಶುಂಠಿಯಲ್ಲಿ ಸುಮಾರು ಇತರೆ ರೈತರಿಗಿಂತ 20 ರಿಂದ 25 ರಷ್ಟು ಅಧಿಕ ಇಳುವರಿ ಪಡೆಯಬಹುದೆಂದು ಹೇಳಿದರು.
ಕೇಂದ್ರದ ಮುಖ್ಯಸ್ಥ ಡಾ. ಬಿ.ಎಸ್. ಬಸವರಾಜು ಮಾತನಾಡಿ, ಶುಂಠಿಯನ್ನು ಕೋನೋಗೇಥಸ್ಪ್ಂಕ್ಟಿಫೆರಾಲಿಸ್ ಎಂಬ ಪತಂಗದ ಮರಿಗಳು ಹಾನಿ ಮಾಡುತ್ತವೆ. ಮರಿಹುಳುಗಳು ಕಾಂಡವನ್ನು ಕೊರೆದು ಒಳಭಾಗದ ಮೃದುವಾದ ಅಂಗಾಂಶವನ್ನು ತಿಂದು ಹಾನಿ ಮಾಡುತ್ತವೆ. ಅಲ್ಲದೆ ಮರಿಹುಳುಗಳು ಒಂದು ತೆಂಡೆಯಿಂದ ಮತ್ತೊಂದು ತೆಂಡೆಗೆ ಹರಡಿಕೊಂಡು ತೆಂಡೆಯ ಒಳಗೇ ಕೋಶಾವಸ್ಥೆಯನ್ನು ಹೊಂದುತ್ತದೆ.
ಕಾಂಡದ ಮೇಲೆ ದುಂಡನೆಯ ರಂದ್ರ ಮತ್ತು ಹೊರ ಸೂಸಿರುವ ಹಿಕ್ಕೆ ಈ ಹುಳುವಿನ ಚಟುವಟಿಕೆಯನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.
ಡಾ. ಚನ್ನಕೇಶವ ಮಾತನಾಡಿ, ರೈತರು ಮಣ್ಣು ಪರೀಕ್ಷೆ ಆಧಾರಿತ ಶಿಫಾರಸ್ಸು ಮಾಡಿದ ಪ್ರಮಾಣದಂತೆ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕು ಹಾಗೂ ಸಾವಯವ ಗೊಬ್ಬರಗಳನ್ನು ಬಳಸಿ ಮಣ್ಣಿನ ಆರೋಗ್ಯ ಕಾಪಾಡಲು ಸಲಹೆ ನೀಡಿದರು.
ಗ್ರಾಮದ ಹಿರಿಯ ರಂಗಶೆಟ್ಟಿ, ಭದ್ರೇಗೌಡ, ಪ್ರದೀಪ, ಗ್ರಾಮಪಂಚಾಯ್ತಿ ಸದಸ್ಯರು ಇದ್ದರು. ಗ್ರಾಮದ ರೈತ ಯೋಗೇಶ್ ವಂದಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವವನ್ನೂ ಆಚರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

