ಸಮಾನಂತರ ಕಾನೂನು ವ್ಯವಸ್ಥೆ ಮುಖ್ಯ ಗುರಿಯಾಗಲಿ: ಲಿಂಗೇಶ್
ಹಳೇಬೀಡು: ಪ್ರಜಾಪ್ರಭುತ್ವ ರಾಷ್ಟ್ರಭಾರತದಲ್ಲಿ ಎಲ್ಲ ನಾಗರಿಕರಿಗೆ ಸಮಾನ ರಕ್ಷಣೆಯಲ್ಲಿ ಸಮಾನಂತರ ಕಾನೂನು ವ್ಯವಸ್ಥೆ ನಮ್ಮ ಮುಖ್ಯ ಗುರಿಯಾಗಿರಬೇಕು ಎಂದು ಬೇಲೂರು ತಾ. ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಲಿಂಗೇಶ್ ತಿಳಿಸಿದರು.
ಬೇಲೂರು ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಗ್ರಾಮ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಉಚಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡ, ಗ್ರಾಮೀಣ ಜನತೆ, ಹಿಂದುಳಿದ ವರ್ಗಗಳಲ್ಲಿ ನ್ಯಾಯ ದೊರಕಿಸಿ ಕೊಡಲು ಸಂಚಾರಿ ಜನತಾ ನ್ಯಾಯಾಲಯ ಮೂಲಕ ತಿಳಿವಳಿಕೆ ನೀಡಲಾಗುತ್ತದೆ. ಹಾಗೂ ಸ್ಥಳದಲ್ಲಿಯೆ ಹಲವಾರು ಕೇಸುಗಳನ್ನು ತೀರ್ಮಾನಿಸುವ ಕಾರ್ಯ ಸಾಧನೆಯಲ್ಲಿದೆ ಎಂದು ಹೇಳಿದರು.
ವಕೀಲ ಎ.ಬಿ. ಶಂಕರಾನಂದ ಮೋಟಾರು ವಾಹನ ನೋಂದಣಿಸ ವಿಮೆ ಬಗ್ಗೆ ಮಾತನಾಡುತ್ತಾ ವಾಹನ ಮಾಲೀಕರು ಚಾಲನೆ ಅನುಮತಿ ಪಡೆಯದೆ ವಾಹನಗಳನ್ನು ಚಾಲನೆ ಮಾಡುವಂತಿಲ್ಲ. ಯಾವುದೇ ವಾಹನ ಮಾಲೀಕರು ಲೈಸೆನ್ಸ್ ವಿಮೆ ಕಡ್ಡಾಯ ಹೊಂದಿರಬೇಕು. ವಾಹನ ಚಾಲನೆಗೆ ವಯೋ ನಿರ್ಬಂಧವಿದೆ ಎಂದು ತಿಳಿಸಿದರು. ವಕೀಲ ಜೆ.ಸಿ. ಪುಟ್ಟಸ್ವಾಮಿಗೌಡ ಮಾತನಾಡಿ, ಪ್ರತಿ ಪ್ರಜೆ ಸಾಮಾನ್ಯ ಕಾನೂನು ಜ್ಞಾನ ಪಡೆದಿರಬೇಕು. ಇದರಿಂದ ಎಲ್ಲ ವರ್ಗಕ್ಕೆ ನ್ಯಾಯ ದೊರಕುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಾರಾಯಣ್, ಪ್ರಜಾಪ್ರಭುತ್ವದ ರಕ್ಷಣೆಗೆ ಯುವ ಪೀಳಿಗೆಗೆ ಆಗ್ಗಾಗ್ಗೆ ದೇಶದ ಕಾನೂನು ಅರಿವು ಪರಿಚಯಿಸುವಂತ ಕಾರ್ಯಕ್ರಮ ನಡೆಸಿದರೆ ದೇಶದಲ್ಲಿ ಸಹಬಾಳ್ವೆ ,ಶಾಂತಿ ದೊರಕುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಎಸ್.ಡಿ. ರಾಜೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರೇವತಿ ಇದ್ದರು. ಶಾಲಿನಿ ಸ್ವಾಗತಿಸಿದರು. ಪವಿತ್ರ ನಿರೂಪಿಸಿದರು. ಧರ್ಮೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

