ಸ್ವಉದ್ಯೋಗಕ್ಕೆ ವೃತ್ತಿ ಶಿಕ್ಷಣ ಪೂರಕ: ಜಮಾಲ್ ಅಹ್ಮದ್
ಬೇಲೂರು: ಸ್ವಉದ್ಯೋಗಕ್ಕೆ ವೃತ್ತಿ ಶಿಕ್ಷಣ ತರಬೇತಿ ಸಹಕಾರಿಯಾಗಿದೆ ಎಂದು ಬೇಲೂರಿನ ಪುರಸಭೆ ಮಾಜಿ ಸದಸ್ಯ ಜಮಾಲ್ ಅಹ್ಮದ್ ಹೇಳಿದರು. ಅವರು ಜಿಲ್ಲಾ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ಬೇಲೂರಿನ ನೆಹರು ನಗರದಲ್ಲಿ ಆದರ್ಶ ಮಹಿಳಾ ಮಂಡಳಿ ವ್ಯವಸ್ಥೆಗೊಳಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಅನ್ವಯ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬನೆ ಬದುಕು ನಡೆಸಿದರೆ ಆರ್ಥಿಕಾಭಿವೃದ್ಧಿ ಸಾಧ್ಯವೆಂದರು. ಬೇಲೂರಿನ ಮಹಿಳಾ ಮುಖಂಡರಾದ ಚಂದ್ರಕಲಾ ಮಾತನಾಡಿ, ವ್ಯವಸ್ಥಿತವಾಗಿ ಸಂಘಟನೆಗೊಂಡು ಅನುಭವಸ್ಥರ ಮಾರ್ಗದರ್ಶನದಲ್ಲಿ ಜೀವನಕ್ಕೆ ಪೂರಕವಾದ ಕೈಕಸುಬುಗಳನ್ನು ಕಲಿಯಬೇಕು. ಆಗಲೇ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೆಂದರು. ನೆಹರು ಯುವ ಕೇಂದ್ರದ ಪರವಾಗಿ ಆಗಮಿಸಿದ್ದ ಲೆಕ್ಕಾಧಿಕಾರಿ ಎಂ.ಎನ್.ಮಂಜುನಾಥ್ರಾವ್ ಮಾತನಾಡಿ, ನೆಹರು ಯುವ ಕೇಂದ್ರದ ಪ್ರಮುಖ ಧ್ಯೇಯೋದ್ದೇಶಗಳಲ್ಲಿ ಮಹಿಳಾಭಿವೃದ್ಧಿ ಸಹ ಒಂದಾಗಿದೆ. ನೆಹರು ಯುವ ಕೇಂದ್ರ ನೀಡುತ್ತಿರುವ ಈ ತರಬೇತಿಯ ಪ್ರಯೋಜನ ಪಡೆದು ಗ್ರಾಮೀಣ ಭಾಗದ ಮಹಿಳೆಯರು ಮುಂದೆ ಸ್ವಯಂ ಉದ್ಯೋಗಿಗಳಾಗಬೇಕೆಂದರು. ಮಂಡಳಿಯ ಕಾರ್ಯದರ್ಶಿ ಹಮೀದಾ ಭಾನು ಆದರ್ಶ ಮಹಿಳಾ ಮಂಡಳಿ ಬೆಳೆದು ಬಂದ ರೀತಿ ವಿವರಿಸಿ, ವಂದಿಸಿದರು. ದಸ್ತಗೀರ್ ಹಾಗೂ ಮಮತಾ ಮಂಜುನಾಥ್ ವೇದಿಕೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

