ಚುನಾವಣಾ ಸಮೀಕ್ಷೆ ನಿರ್ಬಂಧ ತುರ್ತು ಪರಿಸ್ಥಿತಿ ಹೇರಿದಂತೆ: ಎಚ್ಡಿ ದೇವೇಗೌಡ
ಕ.ಪ್ರ.ವಾರ್ತೆ ಹಾಸನ ನ. 7
ಕಾಂಗ್ರೆಸ್ ಚುನಾವಣಾ ಪೂರ್ವ ಸಮೀಕ್ಷೆಗೆ ನಿಬಂರ್ಧ ಹೇರುವುದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರವಾಗಿ ಖಂಡಿಸಿದ್ದಾರೆ.
ಸಮೀಕ್ಷೆ ಮಾಡುವುದು ಸರಿಯಲ್ಲ ಎಂಬ ಹಿಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡ ಅರಿವಿಗೆ ಬರಲಿಲ್ಲ ಏಕೆ ... ಪಂಚ ರಾಜ್ಯಗಳಲ್ಲಿ ಇರಲಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸುತ್ತದೆ ಎಂಬುದನ್ನು ಅರಿತೇ ಚುನಾವಣಾ ಪೂರ್ವ ಸಮೀಕ್ಷೆ ರದ್ದು ಮಾಡಲು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಸಲಹೆ ಮಾಡಿದೆ. ಇದು ಸರಿಯಲ್ಲ. ಕಾಂಗ್ರೆಸ್ ಖಾಸಗಿ ಏಜೆನ್ಸಿಗಳ ಮೂಲಕ ಮುಂದೆ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಿದೆ ಎಂಬ ಬಗ್ಗೆ ಸಮೀಕ್ಷೆ ಮಾಡಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೋದಿ ಕಾರ್ಯಕ್ರಮ ಸರ್ಕಸ್ಸೇ: ಮೋದಿ ಕಾರ್ಯಕ್ರಮಕ್ಕೆ 10 ರು. ನೀಡಿ ಬರಲು ಸರ್ಕಸ್ಸೇ ಎಂದು ಪ್ರಶ್ನಿಸಿದ ಗೌಡರು, ಪಾಟ್ನಾದಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ 12 ಕೋಟಿ ರು. ವೆಚ್ಚವಾಗಿತ್ತು. ಅದನ್ನು ತಿಳಿದ ಕಾಂಗ್ರೆಸ್, ಅಷ್ಟು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿತು. ಇದಕ್ಕೆ ತಿರುಗೇಟು ನೀಡಲು ಬಿಜೆಪಿ 10 ರು. ಸಂಗ್ರಹದ ನಾಟಕವಾಡುತ್ತಿದೆ. ಕಾಂಗ್ರೆಸ್ಗೆ ಮೋದಿ ಪರ್ಯಾಯ ಎಂದು ಬಿಂಬಿಸುತ್ತಿರುವುದು ಮಾಧ್ಯಮಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳೇ ಹೊರತು ಜನರಲ್ಲ ಎಂದು ವಿಶ್ಲೇಷಿಸಿದರು.
ಮೋದಿಗೇಕೆ ಪಿಎಂ ಭದ್ರತೆ: ಮೋದಿ ಅವರಿಗೆ ಪಿಎಂಗೆ ನೀಡುವ ಭದ್ರತೆ ನೀಡಬೇಕೆಂದು ಕೇಳುತ್ತಿರುವುದು ಸರಿಯಲ್ಲ. ಎಸ್ಪಿಜಿ ಕಾನೂನಿನಲ್ಲಿ ಪ್ರಧಾನಿ ಮಟ್ಟದ ಬೇರೆಯವರಿಗೆ ಭದ್ರತೆ ನೀಡಲು ಅವಕಾಶವಿಲ್ಲ. ಮಾಜಿ ಪ್ರಧಾನಿಗೆ 10 ವರ್ಷಗಳವರೆಗೆ ಎಸ್ಪಿಜಿ ಭದ್ರತೆ ನೀಡಬೇಕೆಂದು ನಿಯಮ ಇತ್ತು. ಆದರೆ ಎನ್ಡಿಎ ಸರ್ಕಾರ ಇದ್ದಾಗ ಇದೇ ಆಡ್ವಾಣಿ ಅವರನ್ನು ತಮಗೆ ನೀಡಿದ ಭದ್ರತೆಯನ್ನು ಹಿಂತೆಗೆಯಲೆಂದೇ ಕಾನೂನಿಗೆ ತಿದ್ದುಪಡಿ ತಂದರು. ಇದರ ಹಿಂದೆ ಕಾಂಗ್ರೆಸ್ ಕೈವಾಡವೂ ಇತ್ತು ಎಂದು ಗೌಡರು ಟೀಕಾ ಪ್ರಹಾರ ನಡೆಸಿದರು.
ಸರ್ಕಾರದ ತಪ್ಪುನೆಪ್ಪುಗಳನ್ನು ಹೇಳಲಿ. ಆದರೆ ಮೋದಿ ಅವರು ಪ್ರಧಾನಿ ಅವರನ್ನು ಕೀಳು ಮಟ್ಟದ ಭಾಷೆಯನ್ನು ಬಳಸಿ ಟೀಕಿಸುವುದು ಸರಿಯಲ್ಲ. ಇದೇ ರಾಹುಲ್ ಗಾಂಧಿ ಅವರು ಛತೀಸ್ಘಡಲ್ಲಿ ಬಡವರಿಗೆ 35 ಕೆಜಿ ಅಕ್ಕಿ ಉಚಿತ, ಬಡ್ಡಿ ರಹಿತ ಸಾಲ ಮತ್ತು ವಿದ್ಯುತತ್ನೀಡುವುದಾಗಿ ಘೋಷಣೆ ಮಾಡುತ್ತಾರೆ. ಕರ್ನಾಟಕದಲ್ಲಿ ಏಕೆ ಘೋಷಣೆ ಮಾಡುವುದಿಲ್ಲ.
ಕಾಂಗ್ರೆಸ್, ಬಿಜೆಪಿ ಎರಡರ ಬಗ್ಗೆ ಬೇಸತ್ತಿದ್ದಾರೆ: ರಾಷ್ಟ್ರದ ಜನರು ಕಾಂಗ್ರೆಸ್ ಮತ್ತು ಬಿಜೆಪಿ ಗಳೆರಡರ ಬಗ್ಗೆಯೂ ತೀವ್ರವಾಗಿ ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠಗೊಳ್ಳಲಿವೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಹೋರಾಟ ಮಾಡಲು ದೆಹಲಿಯಲ್ಲಿ ತೃತೀಯ ರಂಗಕ್ಕೆ ಸೇರಿದ ಪಕ್ಷಗಳು ಸೇರಿದ್ದವು. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ಹಿಮ್ಮೆಟ್ಟಿಸಿ ನಿಂತು, ಅಧಿಕಾರ ಹಿಡಿಯುತ್ತವೆ. ಕಾಂಗ್ರೆಸ್ ಯುಪಿಎ ಸರ್ಕಾರದಲ್ಲಿ ಇರುವ ಎಸ್ಪಿಪಿಯ ಶರದ್ ಪವಾರ್ ಅವರನ್ನು ಮುಗಿಸಲು ಯತ್ನಿಸುತ್ತಿದೆ. ಇವೆಲ್ಲಾ ಸಾಧ್ಯವಾಗುವುದಿಲ್ಲ ಎಂದು ಗೌಡರು ಗುಡುಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

