ಹಾಸನ

ಶಾಸಕ ಮಂಜುಗೆ ಸಚಿವ ಸ್ಥಾನ ತಪ್ಪಿದ್ದು ತಾಲೂಕಿಗೆ ಗ್ರಹಣ: ಮಲ್ಲೇಶ್

Published On :

ಕನ್ನಡಪ್ರಭ ವಾರ್ತೆ೤ ರಾಮನಾಥಪುರ೤ ನ.8
ಅರಕಲಗೂಡು ತಾಲೂಕಿನಲ್ಲಿ  25 ವರ್ಷಗಳಿಂದ ನಿಸ್ವಾರ್ಥ ರಾಜಕೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಶಾಸಕ ಎ.ಮಂಜು ಅವರಿಗೆ ಸಚಿವ ಸ್ಥಾನ ತಪ್ಪಿಹೋಗಿದ್ದು ನಿಜಕ್ಕೂ ಈ ತಾಲೂಕಿಗೆ ಗ್ರಹಣ ಬಡಿದಂತಾಗಿದೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲೇಶ್ ಹೇಳಿದ್ದಾರೆ.  
ನಿರ್ಮಾಲನಂದ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ನೇರ ನುಡಿ ದಿಟ್ಟ ರಾಜಕಾರಣ ನುಂಗಲಾರದ ತುತ್ತಾಗಿ ಕೆಲವು ಸ್ವಪಕ್ಷ ಹಾಗೂ ವಿರೋಧ ಪಕ್ಷದವರಿಗೆ ಸಿಂಹಸ್ವಪ್ನವಾಗಿ ಕಾಡಿರುವ ಹಿನ್ನೆಲೆಯೆ ಮಂಜುಗೆ ಸಚಿವ ಸ್ಥಾನ ಕೈತಪ್ಪಿ ಹೋಗಲು ಮುಳುವಾಯಿತು ಎಂದು ವ್ಯಾಖ್ಯಾನಿಸಿದರು.

ಚಿರತೆ ದಾಳಿ: ಹಸು ಸಾವು
ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿ ಕೆಸವತ್ತೂರು ಗ್ರಾಮದಲ್ಲಿ ಚಿರತೆಯೊಂದು ಗ್ರಾಮದ ಕೊಟ್ಟಿಗೆ ನುಗ್ಗಿ ಹಸುವೊಂದನ್ನು ಎಳೆದೊಯ್ದು ಸಾಯಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಸಾವನ್ನಪ್ಪಿದ ಹಸು ಕೆಸವತ್ತೂರು ಗ್ರಾಮದ ಸುರೇಶ ಎಂಬುವವರಿಗೆ ಸೇರಿದ್ದು ಹಸುವನ್ನು ಜೋಳದ ಹೊಲಕ್ಕೆ ಎಳೆದೊಯ್ದು ಚಿರತೆ ಕತ್ತಿನ ಭಾಗದಲ್ಲಿ ರಕ್ತ ಹೀರಿ ಸಾಯಿಸಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.