ಹಾಸನ

ಶಾಂತಿ, ನೆಮ್ಮದಿಯ ಬಾಳ್ವೆಗೆ ಆಧ್ಯಾತ್ಮದ ಅರಿವು ಮುಖ್ಯ: ಶಂಕರ ಭಾರತಿ ಸ್ವಾಮೀಜಿ

Published On :

ಕ.ಪ್ರ. ವಾರ್ತೆ೤ ಅರಸೀಕೆರೆ೤ ನ.10
ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಪ್ರತಿಯೊಬ್ಬರಿಗೂ ಅಧ್ಯಾತ್ಮದ ಅರಿವು ಅಗತ್ಯ ಎಂದು  ಕೆ.ಆರ್.ನಗರದ ಯಡುತೊರೆ ಯೋಗಾನಂದೇಶ್ವರ ಮಠದ ಶ್ರೀ ಶಂಕರ ಭಾರತಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾಲೇಕಲ್ ತಿರುಪತಿಯ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ವೇದಾಂತ ಭಾರತಿ ಕಾರ್ಯಕ್ರಮದ ಸಕ್ರಿಯ ಕಾರ್ಯಕರ್ತರ ಚಿಂತನಾಗೋಷ್ಠಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಭಾರತೀಯ ಸನಾತನ ಸಂಸ್ಕೃತಿಯಲ್ಲಿ  ಆಧ್ಯಾತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದ ಅವರು, ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾನವತೆಯ ಮಹಾಸಂದೇಶವನ್ನು ನೀಡಿರುವಂಥದ್ದು. ಆದ್ದರಿಂದಲೇ ವಿದೇಶಿಯರು ಕೂಡಾ ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದು ಆಧ್ಯಾತ್ಮದಿಂದಲೇ ಜೀವನಮುಕ್ತಿ ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ. ಮೂರು ದಿನಗಳ ಆತ್ಮವಿಕಾಸ, ಜ್ಞಾನ ಹಾಗೂ ವಿಕಾಸದ ಬಗ್ಗೆ ಚಿಂತನೆಗಳು ನಡೆಯಲಿದ್ದು, ನುರಿತ ವಿದ್ವಾಂಸರು ಮಾರ್ಗದರ್ಶನ ನೀಡಲಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.  ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ರಮೇಶ್, ಎಚ್.ಎಂ ರಾಮಚಂದ್ರ ರಾವ್, ಬಿ.ಎಸ್. ಸೇತುರಾಮ್,  ಎಚ್.ವಿ. ಗೋಪಾಲ್, ಮುರಳಿದರ್, ಅನಂತಪದ್ಮನಾಭ, ಪದ್ದಣ್ಣ,  ಅನಂತರಾಮ ಶಾಸ್ತ್ರಿ ಹಾಗೂ  ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.