ನವೋದಯ ಕಾಲದಲ್ಲಿ ಕಾವ್ಯದ ದೀಪ ಬೆಳಗಿಸಿದ ಡಿವಿಜಿ, ಬೇಂದ್ರೆ
ಕನ್ನಡಪ್ರಭ ವಾರ್ತೆ, ಹಾಸನ, ನ. 13
ನವೋದಯ ಕಾಲದಲ್ಲಿ ಕಾವ್ಯದ ದೀಪ ಹೊತ್ತಿಸಿ ಬೆಳಗಿಸಿದವರು ಡಿವಿಜಿ, ಕುವೆಂಪು ಮತ್ತು ದ.ರಾ. ಬೇಂದ್ರೆ, ಮೊದಲಾದವರು. ಅವರು ಇಂದಿಗೂ ಕಾವ್ಯದ ಹರಿಕಾರರಾಗಿ ನಮ್ಮ ಮುಂದೆ ಮರೆಯದ ಸಾಹಿತ್ಯ ದಿಗ್ಗಜರಾಗಿ ನಿಂತಿದ್ದಾರೆ ಎಂದು ಕವಿ ಎಸ್.ಮಂಜುನಾಥ್ ಹೇಳಿದರು.
ಕನ್ನಡ ಸಾಹಿತ್ ಪರಿಷತ್ ವತಿಯಿಂದ ರಾಜ್ಯೋತ್ಸವ ಅಂಗವಾಗಿ ನಡೆದ ನವೋದಯ ಕವಿ-ಕಾವ್ಯ, ಗಾಯನ ಚಿಂತನ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಅನೇಕ ಕಾವ್ಯಗಳನ್ನು ಕವಿಗಳು ರಚಿಸಿದ್ದಾರೆ. ಅದನ್ನು ನಿರಂತರವಾಗಿ ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಲು ಯುವ ಕವಿಗಳು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಕವಿಯಿಂದ ರಚಿತವಾದ ಕಾವ್ಯವು ಗಾಯನವಾಗಿ ಎಲ್ಲಾರ ಮನ ತಲ್ಲಣಗೊಳಿಸುತ್ತದೆ. ಕನ್ನಡ ಭಾಷೆಯನ್ನು ಕಾವ್ಯಾತ್ಮಕವಾಗಿ ಶ್ರೀಮಂತಗೊಳಿಸಿದ ಮಹತ್ತರ ಕಾರ್ಯ ಈಗಾಗಲೇ ನಡೆಯುತ್ತಿದೆ. ನವೋದಯ ಚಳವಳಿಯಿಂದ ಉದಯಿಸಿದ ಕಾವ್ಯ ಎರಡು ಕವಲುಗಳಾಗಿ ಬೆಳೆಯಿತು ಎಂದು ವರ್ಣಿಸಿದರು.
ಮೊದಲನೆಯದಾಗಿ ಒಂದು ನಿರರ್ಗಳವಾದ ಭಾವಾವೇಶಗಳೊಂದಿಗೆ ಬರೆಯುತ್ತಿದ್ದ ಯುವ ಜನತೆಯ ನೇತಾತ್ಮಕ ಶಕ್ತಿಯ ಅಭಿವ್ಯಕ್ತಿಗೆ ಕಾರಣವಾಜ ಪ್ರವೃತ್ತಿ.
ಎರಡನೆಯದಾಗಿ ಭಾರತದ ಪ್ರಾಚೀನ ಸಂಪ್ರಾದಾಯಕ ಸಂಸ್ಕತಿಗಳ ಮೌಲಿಕತೆ ಎತ್ತಿಹಿಡಿಯುವ ಸಮ್ಯಕ್ ದೃಷ್ಟಿಯುಳ್ಳ ನೂತನ ಮಾರ್ಗದ ಸಂಪ್ರದಾಯ ಪ್ರವೃತ್ತಿ ಎಂದು ಅವರು ಹೇಳಿದರು.
ಇದೆ ವೇಳೆ ಕಾವ್ಯ ಗಾಯನವನ್ನು ಶ್ರೀನಿಧಿ ಸುಗಮ ಸಂಗೀತ ತಂಡ ನಡೆಸಿಕೊಟ್ಟಿತು. ಭಟ್ಕಳ ನಿವೃತ್ತ ಪ್ರಾಂಶುಪಾಲ ಡಾ. ಸಯ್ಯದ್ ಜಮೀರ್ ಉಲ್ಲಾ ಷರೀಫ್, ಕಸಾಪ ಜಿಲ್ಲಾಧ್ಯಕ್ಷ ಡಾ.ಜನಾರ್ದನ್ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್ ಸ್ವಾಗತಿಸಿದರು. ಸಿ.ಕೆ. ಹರೀಶ್ ನಿರೂಪಿಸಿದರು. ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

