ಮೂಢನಂಬಿಕೆ ಕಾನೂನು ನಾಸ್ತಿಕರಿಗೆ ಹೊರತು ಆಸ್ತಿಕರಿಗಲ್ಲ: ದೇವೇಗೌಡ
ಅರಕಲಗೂಡು: ವಿಶ್ವಶಾಂತಿ, ಮಾನವೀಯ ಧರ್ಮಗಳ ಉಳಿವಿಗೆ, ಸಾಮಾಜಿಕ ನೆಮ್ಮದಿಗೆ ಧಾರ್ಮಿಕತೆ ಬಹುಮುಖ್ಯ ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ. ದೇವೇಗೌಡ ತಿಳಿಸಿದರು.
ರಾಮನಾಥಪುರ ಹೋಬಳಿ ಹಂಪಾಪುರ ಗ್ರಾಮದಲ್ಲಿ ಈಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ನಮ್ಮ ಮನೆದೇವರು ಈಶ್ವರ. ಅದ್ದರಿಂದ ನಾವು ಮೂರು ತಲೆಮಾರಿನಿಂದ ಈಶ್ವರನನ್ನು ಪೂಜಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಪಕ್ಷದ ಕೆಲಸ ಮಾಡಬೇಕು. ಇತರೆ ದಿವಸಗಳಲ್ಲಿ ಸಾರ್ವಜನಿಕರ ಕೆಲಸ ಮಾಡಿ ಎಂದು ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.
ಸೃಷ್ಟಿ - ಲಯ ಯಾವ ವಿಜ್ಞಾನಿಯೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ ದೇವೇಗೌಡರು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗುತ್ತಿರುವ ಮೂಢನಂಬಿಕೆ ನಿಷೇಧ ಕಾನೂನು ನಾಸ್ತಿಕರಿಗೆ ಹೊರತು ಆಸ್ತಿಕರಿಗಲ್ಲ ಎಂದರು.
ರಾಜ್ಯದಲ್ಲಿ ಅನೇಕ ಸಮಸ್ಯೆಗಳು ಇವೆ. ಅವುಗಳನ್ನು ಬಗೆಹರಿಸುವ ಬದಲು ಮೂಢನಂಬಿಕೆ ಹತ್ತಿಕ್ಕುತ್ತೇನೆ ಎಂದು ಸರ್ಕಾರ ಹೊರಟಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಪ್ರಚಾರಕ್ಕಾಗಿ ಇಲ್ಲದ ಯೋಜನೆಗಳನ್ನು ಘೋಷಣೆ ಮಾಡುವುದರ ಬದಲಾಗಿ ರಾಜ್ಯದ ಗ್ರಾಮೀಣ ಪ್ರದೇಶಗಳ ಜನರಲ್ಲಿ ಸ್ವಂದಿಸಿ, ದೇಶದಲ್ಲಿ ಅನಾಥರು, ನಿರ್ಗತಿಕರು, ಕಡು ಬಡವರಿದ್ದು ಹಾಗೂ ದನಕರುಗಳು ರೋಗದಿಂದ ನರಳುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲಿ ಎಂದರು. ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ಜನರಲ್ಲಿ ಒಲವು ಕಡಿಮೆಯಾಗುತ್ತಿದೆ. ಪ್ರಾದೇಶಿಕ ಪಕ್ಷಗಳಿಗೆ ಜನರು ಮನ್ನಣೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ, ತಮಿಳುನಾಡು, ಪಶ್ವಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ತಿರಸ್ಕರಿಸಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಮುಂದೆ ಎಲ್ಲರೂ ಸೇರಿ ಅಯ್ಕೆ ಮಾಡಲಾಗುವುದು. ನಮ್ಮಲ್ಲಿ ಹಣ ಹಾಗೂ ತೋಳುಬಲ ಇಲ್ಲ. ಆದರೆ ಜನರ ಆಶೀರ್ವಾದ ನಮ್ಮ ಪಕ್ಷದ ಮೇಲಿದೆ. ಹಣ ಮತ್ತು ತೋಳು ಬಲದವರ ವಿರುದ್ಧ ಹೋರಾಟ ನಡೆಸಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ತಾಲೂಕು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾರವುಶ್, ಹೋಳೆನರಸಿಪುರ ಎಪಿಎಂಸಿ ಮಾಜಿ ಅಧ್ಯಕ್ಷ ರಾಮನಾಥಪುರ ಎಚ್.ಎಸ್. ಶಂಕರ್, ತಾಲೂಕು ಮುಖಂಡ ಮುದ್ದನಹಳ್ಳಿ ಎಂ.ಎಸ್. ರಮೇಶ್, ಹಿರಿಯ ವಕೀಲ ಜನಾರ್ದನಗುಪ್ತ, ಹಾಸನ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಹೊನ್ನಹಳ್ಳಿ ಸತೀಶ್, ತಾಪಂ ಮಾಜಿ ಅಧ್ಯಕ್ಷ ಯೋಗೇಶ್, ಜಿಪಂ ಸದಸ್ಯೆ ಸರೋಜಮ್ಮರಾಮೇಗೌಡ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

