ಶಾದಿ ಭಾಗ್ಯ ಯೋಜನೆ ಸಭೆ ಕರೆಯಲು ಆಗ್ರಹ
ಹಾಸನ: ಶಾದಿ ಭಾಗ್ಯದ ಕುರಿತು ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಸಭೆ ಕರೆದು ಸರಿಯಾದ ಮಾಹಿತಿಗಳನ್ನು ನೀಡಿ ಫಲಾನುಭವಿಗಳಿಗೆ ಯೋಜನೆ ದೊರಕಲು ಸಹಕರಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಲ್ಹಾಜ್ಜ್ಸೈಯದ್ಖಾಸಿಂ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಜಿಲ್ಲೆಯ ತಾಲೂಕುಗಳಲ್ಲಿ ಸುಮಾರು 24 ಕೊಳಚೆ ಪ್ರದೇಶಗಳಿದ್ದು, ಈ ಕೊಳಚೆ ಪ್ರದೇಶಗಳ ಆಸ್ತಿಗಳಿಗೆ ಸರ್ಕಾರದಿಂದ ಖಾತೆ ಬದಲಾವಣೆಯಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ತಾಲೂಕಿನ ಕೊಳಚೆ ಪ್ರದೇಶಗಳ ಖಾತೆಯನ್ನು ಬದಲಾಯಿಸಿಕೊಡಬೇಕೆಂದು ಕೋರಿದ್ದಾರೆ. ರಾಜೀವ್ ಆವಾಜ್ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರಿಗೆ 5 ಸಾವಿರ ಮನೆಗಳನ್ನು ಅತಿ ಬಡವರಿಗೆ ಹಂಚಬೇಕು ಹಾಗೂ ವಾಹನದ ಪರವಾನಗಿಯನ್ನು ಅಲ್ಪಸಂಖ್ಯಾತರಿಗೆ ತ್ವರಿತಗತಿಯಲ್ಲಿ ದೊರಕಿಸಿಕೊಡುವಂತೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಗೆಜೆಟ್ ನೋಟಿಫಿಷೇಕನ್ 1964 ರಲ್ಲಿ ಆಗಿದ್ದು, ನಂತರ ವಕ್ಫ್ ಆಸ್ತಿ ರಕ್ಷಣೆ ಹಾಗೂ ಒತ್ತುವರಿ ಬಗ್ಗೆ ಆಗಿಂದಾಗ್ಗೆ ಜಿಲ್ಲಾವಾರು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿಕೊಂಡು 2ನೇ ಹಂತದ ಸರ್ವೆ ಕಾರ್ಯವನ್ನು ನೆರವೇರಿಸಿಕೊಡಬೇಕು.
ವಕ್ಫ್ ಸ್ವತ್ತುಗಳ ಆರ್ಟಿಸಿಗಳನ್ನು ಆಯಾ ಮಸೀದಿ ಹೆಸರಿಗೆ ದಾಖಲೆ ಮಾಡಿಕೊಡುವಂತೆ ಕೋರಿದ್ದಾರೆ. ಜಿಲ್ಲೆಯಲ್ಲಿ 300 ಕೋಟಿ ರು.ನಷ್ಟು ವಕ್ಫ್ ಆಸ್ತಿ ಕಬಳಿಕೆಯಾಗಿದ್ದು, ಇದರ ದಾಖಲಾತಿಗಳು ಯಾರ್ಯಾರ ಹೆಸರಿನಲ್ಲಿ ನೋಂದಣಿಯಾಗಿದ್ದು, ಕಬಳಿಕೆಯಾಗಿರುವ ವಕ್ಫ್ ಆಸ್ತಿಗಳ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

