ಜಂಬೂರು; ಶನೈಶ್ಚರ ಸ್ವಾಮಿ ವಿಜೃಂಭಣೆಯ ಬ್ರಹ್ಮ ರಥೋತ್ಸವ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಸಮೀಪದ ಜಂಬೂರು ಗ್ರಾಮದಲ್ಲಿ ಶನೈಶ್ಚರ ಸ್ವಾಮಿಯವರ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ಬುಧವಾರ ನಡೆಯಿತು.
ರಂಭಾಪುರಿ ಶಾಖಾಪುರವರ್ಗ ಹಿರೇಮಠ ನುಗ್ಗೇಹಳ್ಳಿಯ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಆಲ್ಬೂರು ಶನಿದೇವರ ಮಠದ ನರಸಿಂಹ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಎಂ.ಎ. ರಂಗಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಜಂಬೂರು ಗ್ರಾಮದ ಶನೈಶ್ಚರಸ್ವಾಮಿ, ಕೋಟೆಮಾರಮ್ಮದೇವಿ, ಹಾರೋಸೋಮನಹಳ್ಳಿ ಗ್ರಾಮದ ಸಂಪಿಗೆ ಮಾರಮ್ಮದೇವಿ, ಹುಲಿಕೆರೆ ಗ್ರಾಮದ ಆಲದಮರದಮ್ಮದೇವಿ. ಅತ್ತಿಹಳ್ಳಿ ಗ್ರಾಮದ ಚಿಕ್ಕಮ್ಮದೇವಿ, ಸಿದ್ದರಹಟ್ಟಿ ಗ್ರಾಮದ ದೊಡ್ಡಮ್ಮದೇವಿ, ಹೊನ್ನಮಾರನಹಳ್ಳಿ ಗ್ರಾಮದ ಕ್ಯಾಲಮ್ಮದೇವಿ(ಲಕ್ಷ್ಮೀದೇವಿ), ಬೂವನಹಳ್ಳಿ ವಡ್ಡರಹಟ್ಟಿ ಗ್ರಾಮದ ಚೌಡೇಶ್ವರಿದೇವಿ, ಕಾರೇಕೆರೆ ಗ್ರಾಮದ ದ್ಯಾವಮ್ಮದೇವಿ, ಹೆಬ್ಬಳಲು ಗ್ರಾಮದ ಹೆಬ್ಬಾಳಮ್ಮದೇವಿ, ತಾವರೆಕೆರೆ ಗ್ರಾಮದ ದೊಡ್ಡಮ್ಮದೇವಿ, ನುಗ್ಗೇಹಳ್ಳಿ ಗ್ರಾಮದ ನುಗ್ಗೇಹಳ್ಳಿ ಅಮ್ಮದೇವಿ ದೇವರ ಉತ್ಸವ ವೈಭವದಿಂದ ಜರುಗಿತು. ಊರಿನ ರಾಜಬೀದಿಗಳಲ್ಲಿ ಕಳಸ ಉತ್ಸವ, ಸೋಮನ ಕುಣಿತ ಮತ್ತು ದನಕರುಗಳೊಂದಿಗೆ ಆರತಿ ಮೆರವಣಿಗೆ ನಡೆಯಿತು.
ತುಮಕೂರು ರವೀಶ್ ಅವರಿಂದ ವೀರಭದ್ರನ ಕುಣಿತ, ನುಗ್ಗೇಹಳ್ಳಿ ವೀರಶೈವ ಸೇವಾ ಸಂಘದವರಿಂದ ನಂದೀಧ್ವಜ ಕುಣಿತ, ಹೊಸದುರ್ಗದ ಎನ್.ಜಿ. ಲೋಕೇಶ್, ಮಲ್ಲೇಶ್ವರ ಯುವಕ ಸಂಘದವರಿಂದ ವೀರಗಾಸೆ, ಡೊಳ್ಳು ಕುಣಿತ ಮತ್ತು ಪೂಜಾ ಕುಣಿತ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

