ಹಾಸನ

ದಾನಗಳಲ್ಲಿ ಶ್ರೇಷ್ಠ ವಿದ್ಯಾದಾನ: ಬಿಇಒ

Published On :

ಹೊಳೆನರಸೀಪುರ: ಹಣ ಉಳ್ಳವರೆಲ್ಲ ದಾನಿಗಳಾಗಿರುವುದಿಲ್ಲ. ಆದರೆ ಕೊಡುವ ಮನಸುಳ್ಳವರು ಬಹಳಷ್ಟಿರುವುದಿಲ್ಲ, ಅದರಲ್ಲೂ ವಿದ್ಯಾದಾನಕ್ಕೆ ನೀಡುವ ಸಹಕಾರ ಎಲ್ಲ ದಾನಕ್ಕಿಂತಲೂ ಶ್ರೇಷ್ಠವಾದುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಶಿವಮಾದಪ್ಪ ಇಲ್ಲಿ ಅಭಿಪ್ರಾಯಪಟ್ಟರು. ತಾಲೂಕಿನ ಎಲೆಚಾಗಹಳ್ಳಿಯಲ್ಲಿನ ದಾನಿಗಳೊಬ್ಬರು ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರವು ರಾಜ್ಯದಲ್ಲಿನ ಶಾಲೆಗಳಿಗೆ ಸಾಕಷ್ಟು ಅನುದಾನಗಳನ್ನು ನಾನಾ  ಯೋಜನೆಗಳ ಮೂಲಕ ನೀಡಿದ್ದರೂ, ದಾನಿಗಳು ತಮ್ಮ ಗ್ರಾಮದ, ತಾವು ಓದಿದ ಶಾಲೆಗೆ ಉದಾರವಾಗಿ ನೀಡುವ ದೇಣಿಗೆಯು ಮಕ್ಕಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾದಲ್ಲಿ ದಾನಿಗಳು ನೀಡಿದ ದೇಣಿಗೆಗೆ ಬೆಲೆ ಸಿಕ್ಕಿದಂತಾಗುತ್ತದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ ಮಾತನಾಡಿದರು. ಗ್ರಾಮದ ದಿ. ಪುಟ್ಟೇಗೌಡರ ಕುಟುಂಬದ ವೈ.ಎಂ. ಬಸಪ್ಪ ಮತ್ತು ಗೌರಮ್ಮನವರ ಪುತ್ರ ಬೆಂಗಳೂರಿನ ವೈ.ಬಿ. ಗಂಗಾಧರ್ ಅವರು ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ 500 ತಟ್ಟೆಗಳು ಹಾಗೂ 500 ಲೋಟಗಳನ್ನು ದೇಣಿಗೆಯಾಗಿ ನೀಡಿ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರಲೆಂದು ಹಾರೈಸಿದರು. ಈ ಸಂದರ್ಭದಲ್ಲಿ ದಾನಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ ಎನ್.ಬಿ. ನಂಜುಂಡಪ್ಪ, ಬಿಆರ್ಸಿ ಕುಮಾರ್, ಶಾಲೆಯ ಮುಖ್ಯ ಶಿಕ್ಷಕರಾದ ಸಿದ್ದೇಗೌಡ, ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.