ಹಾಸನ

ಬರಕ್ಕೆ ಚನ್ನರಾಯಪಟ್ಟಣ, ಅರಸೀಕೆರೆ ಸೇರಿಸಿ

Published On :

ಕ.ಪ್ರ.ವಾರ್ತ್ಣೆ ಹಾಸನ್ಣ ನ.30
ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಹಾಸನ ತಾಲೂಕನ್ನು ಬರ ಪ್ರದೇಶವೆಂದು ಘೋಷಿಸಬೇಕು ಹಾಗೂ ಬೆಳಗಾವಿ ಆತ್ಮಹತ್ಯೆ ಮಾಡಿಕೊಂಡ ರೈತನ ಸಾವಿಗೆ ಕಾರಣರಾದರನ್ನು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ 25 ಲಕ್ಷ ಪರಿಹಾರ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವಾತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ತಾರತಮ್ಯ ನೀತಿ ಸರಿಯಲ್ಲ: ರಾಜ್ಯದಲ್ಲಿ ನಿಜವಾದ ಬರಗಾಲಕ್ಕೆ ತುತ್ತಾಗಿರುವ ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಹಾಸನ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುದನ್ನು ಬಿಟ್ಟು, ನೀರಾವರಿ ಪ್ರದೇಶವನ್ನು ಹೊಂದಿರುವಂತಹ ಅರಕಲಗೂಡು ಹಾಗೂ ಬೇಲೂರು ತಾಲೂಗಳನ್ನು ಬರಪೀಡಿತ ಪ್ರದೇಶವನ್ನು ಸರ್ಕಾರ ಘೋಷಣೆ ಮಾಡಿದೆ. ಈ ಎರಡು ತಾಲೂಕುಗಳಲ್ಲಿ ಕಾಂಗ್ರೆಸ್ನ ಶಾಸಕರು ಇದ್ದಾರೆ ಎಂಬ ಕಾರಣಕ್ಕೆ ಈ ರೀತಿ ಸರ್ಕಾರ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೀವ್ರ ಬರಗಾಲದಿಂದ ತತ್ತರಿಸಿರುವ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ತೇವಾಂಶ ಕಡಿಮೆಯಿಂದಾಗಿ ಸಾವಿರಾರು ತೆಂಗಿನ ಮರಗಳು ನಾಶವಾಗಿದೆ. ಜೊತೆಗೆ ಅಡಿಕೆ ಮರಗಳು ಸಂಪೂರ್ಣವಾಗಿ ನಾಶವಾಗಿದೆ. 600ರಿಂದ 700 ಅಡಿಗಳಷ್ಟು ತೋಡಿದರೂ ನೀರು ಲಭ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶವನ್ನು ಬಿಟ್ಟು ರಾಜ್ಯ ಸರ್ಕಾರ ತಮ್ಮ ಪಕ್ಷದ ಶಾಸಕರು ಇದ್ದಾರೆ ಎಂಬ ಕಾರಣಕ್ಕೆ ಈ ರೀತಿ ತಾರತಮ್ಯ ತಾಳಿರುವುದು ಈ ಭಾಗದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.
ರಾಜಕೀಯ ದ್ವೇಷ: ಜೊತೆಗೆ ಜಿಲ್ಲೆಯ ಪ್ರಮುಖ ಏತ ನೀರಾವರಿ ಯೋಜನೆಗಳಾದ ಹಿರೀಸಾವೆ, ಕಾಚೇನಹಳ್ಳಿ, ಆಲಗೋಡನಹಳ್ಳಿ, ನುಗ್ಗೇಹಳ್ಳಿ, ಹಳೇಬೀಡು ಮಾದಿಹಳ್ಳಿ, ಹಳ್ಳಿ ಮೈಸೂರು ಈ ಎಲ್ಲಾ ರೀತಿಯ ಏತ ನೀರಾವರಿಗಳು ಸಂಪೂರ್ಣವಾಗಿ ನೆನೆಗುದಿಗೆ ಬಿದ್ದು, ಇದರಿಂದ ಸಾಕಷ್ಟು ನೀರಿನ ಸಮಸ್ಯೆಯಿಂದ ಜಿಲ್ಲೆಯ ಜನತೆ ನರಳುವಂತಾಗಿದೆ. ಸಂಪರ್ಕವಾಗಿ ನೀರು ಲಭ್ಯವಾಗದ ಕಾರಣ ತೊಂದರೆ ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ರಾಜಕೀಯ ದ್ವೇಷವನ್ನು ಮಾಡುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರದ ವಿಧಾನ ಮಂಡಲದ ಅಧಿವೇಶನವು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದ್ದು, ಪ್ರಥಮ ದಿನವಾದ ಕಳೆದ ಸೋಮವಾರ ಕಾರ್ಯಕಲಾಪದಲ್ಲಿ ಎಂಇಎಸ್ ಶಾಸಕರಾದ ಸಂಭಾಜೀ ಪಾಟೀಲ್ ಹಾಗೂ ಅರವಿಂದ ಪಾಟೀಲರು ಹಿಂದಿಯಲ್ಲಿ ಕಲಾಪದ ಚರ್ಚೆ ಆರಂಭಿಸಿ, ಕನ್ನಡ ನಾಡಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳೆಗಾವಿ ಜಿಲ್ಲೆಯ ಶಾಕರಾಗಿರುವ ಇವರು ವಿಧಾನಸಭೆಯಲ್ಲೂ ಮರಾಠಿ ಭಾಷೆಯಲ್ಲಿಯೇ ಸುತ್ತೋಲೆಯನ್ನು ಹೊರಡಿಸುವಂತೆ ಕಿರಿಕಿರಿ ಉಂಟು ಮಾಡಿದ್ದು, ನಿಜವಾಗಿಯೂ ಇದು ಹೇಯಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಬಹುಮುಖ್ಯ ಬೇಡಿಕೆಗಳಲ್ಲಿ ಒಂದಾದ ಕಬ್ಬಿಗೆ ನಿಗದಿ ದರವನ್ನು ಏರಿಸುವಂತೆ ಆಗ್ರಹಿಸಿ ಸಾಕಷ್ಟು ಪ್ರತಿಭಟನೆಗಳನ್ನು ನಡೆಸಿದ್ದರು. ಸರ್ಕಾರ ಸೂಕ್ತವಾಗಿ ಕಬ್ಬು ಬೆಳೆಗಾರರ ಪರವಾಗಿ ಸ್ಪಂದಿಸುತ್ತಿಲ್ಲ. ಇದರಿಂದ ರೈತರು ಬೆಳೆದಂತಹ ಕಬ್ಬಿಗೆ ಸೂಕ್ತ ಬೆಲೆ ಲಭ್ಯವಾಗುತ್ತಿಲ್ಲ. ಜೊತೆಗೆ ಕಬ್ಬನ್ನು ಖರೀಸಿದ ನಂತರ ರೈತರಿಗೆ ಒಂದೇ ಕಂತಿನಲ್ಲಿ ಹಣವನ್ನು ಪಾವತಿಸುತ್ತಿಲ್ಲ. ಇದರಿಂದ ರೈತರು ವಂಚಿತರಾಗುತ್ತಿದ್ದಾರೆ ಎಂದು ಕಿಡಿಕಾರಿದರು. ಸರ್ಕಾರ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘ ಜಿಲ್ಲಾಧ್ಯಕ್ಷ ನಿಂಗೇಗೌಡ, ಕಾರ್ಯಾಧ್ಯಕ್ಷ ಸುರೇಶ್ ಎಂ. ಬಾಬು, ಕೆ.ಪಿ. ಕುಮಾರ್, ಜಿಲ್ಲಾ ವಕ್ತಾರ ಶ್ರೀಕಂಠ ದೊಡ್ಡೇರಿ ಹಾಗೂ ಇತರರು ಇದ್ದರು.


ಬೇಡಿಕೆಗಳು



ಟಿ   ಸರ್ವೇ ಶುಲ್ಕ ಗ್ರಾಮಾಂತರಕ್ಕೆ 1600 ಮತ್ತು ನಗರ ವ್ಯಾಪ್ತಿಗೆ 2500 ರದ್ದುಪಡಿಸಿ ಹಿಂದಿನಂತೆಯೇ ಶುಲ್ಕವನ್ನು ಪರಿಗಣಿಸಬೇಕು. ಚನ್ನರಾಯಪಟ್ಟಣ, ಅರಸೀಕೆರೆ ಮತ್ತು ಹಾಸನ ತಾಲೂಕುಗಳನ್ನು ಬರ ಪ್ರದೇಶ ಎಂದು ಘೋಷಿಸಬೇಕು.
ಟಿ   ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯ ಖಾಸಗೀಕರಣ ರದ್ದು ಮಾಡಿ ಪುನಶ್ಚೇತನಗೊಳಿಸಿ ಸಹಕಾರಿ ಕ್ಷೇತ್ರಕ್ಕೆ ತರುವುದು. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಏತ ನೀರವಾರಿ ಯೋಜನೆಗಳಾದ ಹಿರೀಸಾವೆ, ಕಾಚೇನಹಳ್ಳಿ, ಆಲಗೋಡನಹಳ್ಳಿ, ನುಗ್ಗೇಹಳ್ಳಿ, ಹಳೇಬೀಡು ಮಾದಿಹಳ್ಳಿ, ಹಳ್ಳಿ ಮೈಸೂರು, ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು
ಟಿ   ನಿಗದಿತ ಕಬ್ಬಿನ ಬೆಲೆಯನ್ನು ಅನುಷ್ಠಾನಗೊಳಿಸಲು ಸುಗ್ರೀವಾಜ್ಞೆ ತಂದು ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನುರಿಸುವಂತೆ ಮತ್ತು ಒಂದೇ ಕಂತಿನಲ್ಲಿ ರೈತರ ಬಿಲ್ಲು ವಾವತಿಸುವಂತೆ ಆದೇಶಿಸಬೇಕು.
ಟಿ   ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೂಂಡ ರೈತನ ಸಾವಿಗೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಮತ್ತು 25 ಲಕ್ಷ ಪರಿಹಾರ ನೀಡಬೇಕು. ಇನ್ನೂ ಮುಂದೆ ಈ ರೀತಿ ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಸರ್ಕಾರ ಎಚ್ಚರ ವಹಿಸಬೇಕು.
ಟಿ   ಕನ್ನಡ ವಿರೋಧಿ ಬೆಳಗಾವಿ ಶಾಸಕರಾದ ಸಂಭಾಜೀ ಪಾಟೀಲ್ ಹಾಗೂ ಅರವಿಂದ ಪಾಟೀಲರು ಕನ್ನಡ ವಿರೋಧಿಗಳಾಗಿದ್ದು, ಅವರ ಶಾಸಕತ್ವನ್ನು ರದ್ದು ಮಾಡಿ ಜೈಲಿಗೆ ಹಾಕಬೇಕು. ಕನ್ನಡ ನಾಡಿನಲ್ಲಿ ಇದ್ದುಕೊಂಡು ಕನ್ನಡಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು.
ಟಿ   ನಿರಂತರ ವಿದ್ಯುತ್ ಮತ್ತು ಗೊಬ್ಬರದ ಸಬ್ಸಿಡಿ ಜಾರಿಗೆ ತಂದು ಹಿಂದಿನ ಧಾರಣೆ ನಿಗದಿಪಡಿಸಬೇಕು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.