ಹಾಸನ

ರಾಷ್ಟ್ರಪಿತನ ಜನ್ಮದಿನದಂದು ಕೆರೆಗಳ ಪುನಶ್ಚೇತನ ಕಾರ್ಯ ಚಾಲನೆಗೆ ಪ್ರಶಂಸೆ

Published On :

ಕ.ಪ್ರ.ವಾರ್ತೆ    ಆಲೂರು    ಅ.2
ಹಳ್ಳಿಗಳು ಸರ್ವತೋಮುಖವಾಗಿ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಎಂಬ ಕನಸು ಕಂಡಿದ್ದ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ಜನ್ಮ ದಿನದಂದು ಹಳ್ಳಿಗಳಲ್ಲಿ ಕೆರೆಗಳ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಸಂತಸದ ವಿಚಾರವೆಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಕದಾಳು ಗ್ರಾಮದ ದೊಡ್ಡಕೆರೆಯ ಬಳಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಯಾಧಾರಿತ ಕೆರೆಗಳ ಪುನಶ್ಚೇತನ ಹಾಗೂ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗಾಂಧೀಜಿ ಯಾವುದೇ ಅಭಿವೃದ್ಧಿ ಕಾರ್ಯಗಳು ಹಳ್ಳಿಗಳಲ್ಲಿ ಪ್ರಾರಂಭವಾಗದಿದ್ದರೆ ಅದು ನಿರರ್ಥಕ ಹಾಗೂ ಅದು ಅಹಿಂಸಾತ್ಮಕವಾಗಿರಬೇಕೆಂದು ಆಶಿಸಿದ್ದರು.
 ಇದರ ಉದ್ದೇಶ ಗ್ರಾಮೀಣ ಜನತೆಯ ಬಾಳು ಹಸನಾಗಬೇಕೆಂಬುದಾಗಿತ್ತು.  ಪಟ್ಟಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡರೆ ಕೆಲವೇ ಕೆಲವು ಜನಗಳಿಗೆ ತಲುಪುತ್ತದೆ. ಹಳ್ಳಿಗಳ ದೇಶವಾದ ಇಲ್ಲಿ ಗ್ರಾಮಗಳಲ್ಲಿ ಇಂತಹ ಕಾರ್ಯಗಳಿಗೆ ಚಾಲನೆ ದೊರೆತಾಗ ಎಲ್ಲರಿಗೂ ಇದರಿಂದ ಉಪಯೋಗವಾಗುತ್ತದೆ ಎಂದುದಾಗಿತ್ತು ಎಂದು ಹೇಳಿದರು. ಪ್ರತಿ ಗ್ರಾಮದ ಕೆರೆಗಳಲ್ಲೂ ನೀರು ನಿಂತು ಜನ ಜಾನುವಾರುಗಳಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಈ ಗ್ರಾಮದಲ್ಲಿ 20 ಲಕ್ಷ ರು. ವೆಚ್ಚದಲ್ಲಿ ಗ್ರಾಮದ ದೊಡ್ಡ ಕೆರೆಯನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಸರ್ಕಾರದ ಯಾವುದೇ ಯೋಜನೆಗಳು ಸಾರ್ಥಕವಾಗ ಬೇಕಾದರೆ ಗ್ರಾಮಸ್ಥರ ಪಾತ್ರ ಪ್ರಮುಖವಾದುದು. ಆದ್ದರಿಂದ ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆಯುವಂತೆ ತಾವುಗಳು ಜವಾಬ್ದಾರಿ ವಹಿಸಬೇಕೆಂದರು. ತಾಪಂ ಅಧ್ಯಕ್ಷೆ ಯಶೋಧ  ಹರೀಶ್ ಮಾತನಾಡಿದರು.
ತಾಪಂ ಇ.ಓ.ಚಂದ್ರಶೇಖರ್, ಯೋಜನಾಧಿಕಾರಿ ಸಿದ್ದರಾಜು, ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಮ್ಮ, ಕೆ.ಎಸ್. ಮಂಜೇಗೌಡ, ಅಜ್ಜೇಗೌಡ, ಎಇಇ  ಶಿವಕುಮಾರಪ್ಪ, ಎ.ಡಿ.ಎ. ಎಚ್.ಎನ್.ಶರ್ಮಾ, ತಾಪಂ ಸದಸ್ಯ ಜೀವನ್, ಗ್ರಾಪಂ  ಮಾಜಿ ಅಧ್ಯಕ್ಷ ರಾಮಚಂದ್ರು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.