ಹಾಸನ

ಜಗತ್ತು ಕಂಡ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ: ಜಗದೀಶ್ ಬಣ್ಣನೆ

Published On :

ಹಾಸನ: ಇಪ್ಪತ್ತನೇ ಶತಮಾನದಲ್ಲಿ ಜಗತ್ತು ಕಂಡ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ ಅಹಿಂಸಾವಾದಿ, ಸರಳ ಜೀವಿ, ಸತ್ಯ ಸಂಧಾನಿ ಹಾಗೂ ಮೇರು ಮಾನವತಾವಾದಿ ಎಂದು ಬಿಈಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ  ಬಿ.ಈ.ಜಗದೀಶ್ ಬಣ್ಣಿಸಿದರು.
 ನಗರದ ಬಿಳಿಯಮ್ಮ ಈರೇಗೌಡ (ಬಿಈಜಿ) ಪ್ರಥಮ ದರ್ಜೆ ಕಾಲೇಜಿನಲ್ಲಿ  ಬುಧವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಂಧೀಜಿ ತತ್ವಗಶು ಸಾರ್ವಕಾಲೀಕ  ಮೌಲ್ಯವನ್ನು ಹೊಂದಿವೆ. ನಾವೆಲ್ಲರೂ ಅವರ ಆದರ್ಶ ಪಾಲಿಸಿದಾಗ ಇಂತಹ ಆಚರಣೆಗಳು ಅರ್ಥಪೂರ್ಣ ಎಂದು ಹೇಳಿದರು.
ಕಾಲೇಜಿನ ಉಪನ್ಯಾಸಕ ಎಚ್.ಬಿ.ಅಜಿತ್ ಪ್ರಸಾದ್ ಮಾತನಾಡಿ, ಗಾಂಧೀಜಿಯವರ ಜೀವನ ಅಧ್ಯಯನವನ್ನು  ಪ್ರಪಂಚದ ಅನೇಕ ವಿಶ್ವವಿದ್ಯಾನಿಲಯಗಳು ಕೈಗೊಂಡಿದ್ದು ಎಂದಿಗೂ ಅವು ಪ್ರಸ್ತುತ ಎಂದು ತಿಳಿಸಿದರು.ಇತಿಹಾಸ ಉಪನ್ಯಾಸಕ ಎನ್.ಜಿ. ಪ್ರಕಾಶ್ ಮಾತನಾಡಿ, ಗಾಂಧೀಜಿಯವರ ಜೀವನ ಅಧ್ಯಯನ ಒಂದು ಬೃಹತ್ ಗ್ರಂಥಾಲಯವಿದ್ದಂತೆ. ಅದನ್ನು ನಾವೆಲ್ಲರೂ ತಿಳಿಯಬೇಕು ಹಾಗೂ ಸ್ವಾತಂತ್ರ್ಯ ಹೋರಾಟದ ಅನೇಕ ಘಟನೆಗಳ ಬಗ್ಗೆ ಮಾತನಾಡಿದರು. ಗಾಂಧೀಜಿಯವರ ಬಹು ಇಷ್ಟವಾದ ರಘುಪತಿ ರಾಘವ  ರಾಜಾರಾಂ ಗೀತೆಯನ್ನು ಎನ್ಎಸ್ಎಸ್ ಅಧಿಕಾರಿ ಡಿ.ಆರ್. ವಾಸು  ಹಾಡಿದರು. ಕಾಲೇಜಿನ ಪ್ರಾಂಶುಪಾಲೆ ಎಚ್.ಎ. ರೇಖಾ ಹಾಗೂ ಉಪನ್ಯಾಸಕರು ಇದ್ದರು.ಕಾವ್ಯ  ಸ್ವಾಗತಿಸಿದರು. ರಂಜಿತ ಪ್ರಾರ್ಥಿಸಿದರು. ಜಿ.ಸಿ.ಮಂಜುನಾಥ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.