ಹಾಸನ

ಅರಕಲಗೂಡು: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ದಸಂಸ ಪ್ರತಿಭಟನೆ

Published On :

ಅರಕಲಗೂಡು: ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಅಂಬೇಡ್ಕರ್ ಭಾವಚಿತ್ರವನ್ನು ಹರಿದು ಹಾಕಿ ಅಪಮಾನ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
  ಇಲ್ಲಿನ ಹಾಸನ ರಸ್ತೆಯಲ್ಲಿರುವ ಬಂಗಿ ತಿಮ್ಮನಕೊಪ್ಪಲು ಗ್ರಾಮದ ತಿರುವು ರಸ್ತೆ ಬದಿಯಲ್ಲಿ ಕಂಬಮೊಂದಕ್ಕೆ ಅಂಟಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಬ್ಲೇಡಿನಿಂದ ಕತ್ತರಿಸಿದ್ದು, ಅವರನ್ನು ಕೂಡಲೇ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇಲ್ಲಿನ ತಾಲೂಕು ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿದರು. ಪ್ರತಿಭಟನೆ ನೇತೃತ್ವವನ್ನು ದಸಂಸದ ತಾಲೂಕು ಸಂಘಟನಾ ಸಂಚಾಲಕ ವೆಂಕಟಾಚಲ,ಪ್ರದೀಪ್ ಕುಮಾರ್,ಜಯಶಂಕರ್ ರಾಮು,ಅಜ್ಜೂರು,ಬಿ.ಟಿ.ಶಂಕರ,ರಮೇಶ್ ಇತರರು ವಹಿಸಿದ್ದರು.
ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳವು
ಅರಕಲಗೂಡು: ಪಟ್ಟಣದಲ್ಲಿ ಒಂದೇ ರಾತ್ರಿ ಎರಡು ಕಳವು ಪ್ರಕರಣ ನಡೆದಿದ್ದು, ಕಳ್ಳರು ಎರಡೂ ಮನೆಗಳ ಬಾಗಿಲು ಮುರಿದು ಮನೆಗೆ ನುಗ್ಗಿ ಕಳವು ಮಾಡಿದ್ದಾರೆ.ಮಂಗಳವಾರ ರಾತ್ರಿ ಕೋಟೆ ಪ್ರದೇಶದ ವಿನಾಯಕ ನಗರದ ನಟೇಶ್ ಎಂಬುವವರ ಮನೆಯ ಬಾಗಿಲು ಮುರಿದಿರುವ ಕಳ್ಳರು 12 ಗ್ರಾಂ ತೂಕದ ಚಿನ್ನ ಸರ, 250 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು ಮತ್ತು ಐದು ಸಾವಿರ ರೂಗಳನ್ನು ಬೀರುವಿನ ಬಾಗಿಲು ಮುರಿದು ಕಳವು ಮಾಡಿದ್ದಾರೆ.
   ಇದೇ ರಾತ್ರಿ ಇಲ್ಲಿನ ಹೆಂಟೆಕೆರೆ ರಸ್ತೆಯಲ್ಲಿರುವ ಕಾಶೀಪುರ ಚಂದ್ರು ಎಂಬುವವರ ಮನೆಗೆ ತೆರಳಿದ ಕಳ್ಳರು ಬಾಗಿಲು ಮುರಿದು ಒಳ ನುಗ್ಗಿದ್ದು,ಬೀರುವಿನ ಪಕ್ಕದಲ್ಲೇ ಇದ್ದ ಕೀಲಿಯನ್ನು ಬಳಸಿ ಬೀರುವಿನಲ್ಲಿದ್ದ ಒಂದು ಜೊತೆ ಓಲೆ ಮತ್ತು ಐದು ಸಾವಿರ ರೂಗಳನ್ನು ಕಳವು ಮಾಡಿದ್ದಾರೆ.ಈ ಕುರಿತು ಅರಕಲಗೂಡು ಪಿಎಸ್ಐ ಸಿ.ಜೆ.ರೇವಣ್ಣ ಪ್ರಕರಣ ದಾಖಲಿಸಿದ್ದು,ಸಿಪಿಐ ರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಘಟನೆ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಕರೆಸಲಾಗಿತ್ತು.
ಹಳ್ಳಕ್ಕೆ ಉರುಳಿದ ಟಿಪ್ಪರ್ ಲಾರಿ: 3 ಗಾಯ
ಬೇಲೂರು: ಟಿಪ್ಪರ್ ಲಾರಿಯೊಂದು ಕೆರೆ ಬದಿಯ ಹಳ್ಳಕ್ಕೆ ಬಿದ್ದು ಮೂವರು ಅಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ಘಟನೆ ಪಟ್ಟಣದ ಹೊರ ವಲಯದ ಚಿಕ್ಕಬ್ಯಾಡಿಗೆರೆ ಕೆರೆ ಏರಿಯ ಮೇಲೆ ಗುರುವಾರ ನಡೆದಿದೆ. ಬೇಲೂರು ಕಡೆಯಿಂದ ಚಿಕ್ಕಮಗಳೂರು ಕಡೆ ತೆರಳುತ್ತಿದ್ದ ಟಿಪ್ಪರ್ ಚಿಕ್ಕಮಗಳೂರು ಕಡೆಯಿಂದ ಬೇಲೂರು ಕಡೆ ಬರುತ್ತಿದ್ದ ಲಾರಿಗೆ ದಾರಿ ಬಿಡಲು ಹೋದ ಪರಿಣಾಮ ಕೆರೆ ಬದಿಯ ಸುಮಾರು 30 ಅಡಿ ಆಳಕ್ಕೆ ಬಿದ್ದಿದೆ.
 ಇಟ್ಟಿಗೆ ತುಂಬಲು ತೆರಳುತ್ತಿದ ಟಿಪ್ಪರ್ನಲ್ಲಿ ಚಾಲಕ ರಾಮೇಗೌಡ ಹಾಗೂ ಶಾಂತೇಗೌಡ, ರವಿ ಎಂಬುವರು ತೆರಳುತ್ತಿದ್ದರು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.