ನಿಸ್ವಾರ್ಥ ಸೇವೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಮಂಜುನಾಥ್
ಹಾಸನ: ನಿಸ್ವಾರ್ಥ ಸೇವೆಯಿಂದ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ತಹಸೀಲ್ದಾರ್ ಹಾಗೂ ಭಾರತೀಯ ರೆಡ್ಕ್ರ್ ತಾಲೂಕು ಶಾಖೆ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ನಗರದ ಉತ್ತರ ಬಡಾವಣೆಯ ಸಂಸ್ಕೃತಂ ಭವನದಲ್ಲಿ ಇತ್ತೀಚೆಗೆ ನಡೆದ ಭಾರತೀಯ ರೆಡ್ಕ್ರಾಸ್ ತಾಲೂಕು ಶಾಖೆ ಕಾರ್ಯಕಾರಿ ಸಮಿತಿ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದು ಕೇವಲ ಪದಗ್ರಹಣ ಕಾರ್ಯಕ್ರಮವಲ್ಲ, ಬದಲಾಗಿ ನಮ್ಮಲ್ಲಿರುವ ಅಹಂಕಾರ, ಅಹಂಭಾವ, ದ್ವೇಷ, ವೈಮನಸ್ಸುಗಳನ್ನೆಲ್ಲಾ ದೂರಮಾಡಿ ಜನಸೇವೆಗಾಗಿ ಕೂಡಿ ದುಡಿಯುವ ಕರೆಯನ್ನು ನೀಡುವ ಕಾರ್ಯಕ್ರಮ ಎಂದು ಹೇಳಿದರು.
ಸಂಸ್ಥೆಯ ಜಿಲ್ಲಾ ಶಾಖೆ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಮಾತನಾಡಿ, ರೆಡ್ಕ್ರಾಸ್ ಪಿತಾಮಹ ಹೆನ್ರಿ ಡ್ಯೂನಾಂಟ್ರವರ ಆಲೋಚನೆಯ ಕೂಸಾಗಿ ಬೆಳೆದ ಹಿನ್ನ್ನೆಲೆಯನ್ನು ಚುಟುಕಾಗಿ ವಿವರಿಸಿ ಭಾರತೀಯ ರೆಡ್ ಕ್ರಾಸ್ ಕಿರು ಪರಿಚಯ ಮಾಡಿ ಕೊಟ್ಟರು. ಹಾಗೂ ಸಂಸ್ಥೆ ನಿರ್ವಹಿಸುತ್ತಿರುವ ವಿವಿಧ ಕಾರ್ಯಗಳನ್ನು ಕುರಿತು ಅರಿವು ಮೂಡಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ತಾಲೂಕು ಶಾಖೆ ಅಧ್ಯಕ್ಷ ಸುರೇಶ್ ಗುರೂಜಿ ಮಾತನಾಡಿ, ತಾಲೂಕು ರೆಡ್ ಕ್ರಾಸ್ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ, ಸಮಾಜಮುಖಿಯಾಗಿ ಸೇವಾ ಭಾವನೆಯಿಂದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ರಾಜ್ಯದಲ್ಲಿಯೇ ಉತ್ತಮ ತಾಲೂಕು ಶಾಖೆಯನ್ನಾಗಿ ಮಾರ್ಪಡಿಸುವ ವಾಗ್ದಾನ ಮಾಡಿದರು.
ಹಾಸನ ರೋಟರಿ ಸಂಸ್ಥೆಯ ಅಧ್ಯಕ್ಷ ನಟೇಶ್ ಹಾಗೂ ಲಯನ್ಸ್ ಅಧ್ಯಕ್ಷ ರವೀಂದ್ರಕುಮಾರ್ ಮಾತನಾಡಿ, ತಾಲೂಕು ರೆಡ್ಕ್ರಾಸ್ಗೆ ತಮ್ಮ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಎಚ್.ಪಿ.ಮೋಹನ್ ಮಾತನಾಡಿ, ರಾಜ್ಯ ರೆಡ್ಕ್ರಾಸ್ ನಿರ್ವಹಿಸುತ್ತಿರುವ ನಾನಾ ಕಾರ್ಯಕ್ರಮಗಳ ಬಗ್ಗೆ ಗಮನ ಸೆಳೆದರು ಹಾಗೂ ಅಗತ್ಯವಿರುವವರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು.
ಈ ನಿಟ್ಟಿನಲ್ಲಿ ಯುವ ಪೀಳಿಗೆಯಲ್ಲಿ ಸೇವಾ ಭಾವನೆಯನ್ನು ಭಿತ್ತಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಇದ್ದರು. ತಾಲೂಕು ಶಾಖೆ ಕಾರ್ಯಕಾರಿ ಸಮಿತಿಗೆ ಸುರೇಶ್ ಗುರೂಜಿ ಅಧ್ಯಕ್ಷ ಮಂಜಪ್ಪಗೌಡ, ಉಪಾಧ್ಯಕ್ಷ ಡಾ.ವಿವೇಕಾನಂದ ಕಾರ್ಯದರ್ಶಿ, ಚಿನ್ನೇನಹಳ್ಳಿ ಸ್ವಾಮಿ ಖಜಾಂಚಿ ಮತ್ತು ಸುಮಂಗಳ ಜಯಲಕ್ಷ್ಮಿ, ಗೌತಮ್, ಸಂಜೀವೇಗೌಡ, ರಫೀಕ್ ದರ್ಬಾರ್ ಮತ್ತು ಎಂ.ಜಿ.ಪ್ರೃಥ್ವಿ ಸದಸ್ಯರಾಗಿ ಪದಗ್ರಹಣ ಸ್ವೀಕರಿಸಿದರು.
ಸುಶ್ಮಿತ ಶೇಠ್ ಪ್ರಾರ್ಥಿಸಿದರು. ಎಚ್.ಆರ್. ಮಂಜಪ್ಪಗೌಡ ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ಡಾ. ವಿವೇಕಾನಂದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

