ಕಾಫಿ, ಏಲಕ್ಕಿ ಮೆಣಸು ಬೆಳೆಗಾರರಿಗೆ ಪರಿಹಾರ ಸಂಬಂಧ ಸಿಎಂಗೆ ಮನವಿ
ಕನ್ನಡಪ್ರಭ ವಾರ್ತೆ ಹಾಸನ ಅ. 5
ಕಾಫಿ, ಏಲಕ್ಕಿ ಹಾಗೂ ಮೆಣಸು ಬೆಳೆಗಾರರು ಅತಿವೃಷ್ಟಿಯಿಂದ ಹೆಚ್ಚಿನ ನಷ್ಟ ಅನುಭವಿಸಿದ್ದು, ಸೂಕ್ತ ಪರಿಹಾರ ಹಾಗೂ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅ.8ರಂದು ಮನವಿ ಮಾಡಲಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಪ್ರಧಾನ ಕಾರ್ಯದರ್ಶಿ ಡಿ.ಸಿ.ಸಣ್ಣಸ್ವಾಮಿ ತಿಳಿಸಿದರು.
ಸಕಲೇಶಪುರ ಕ್ಷೇತ್ರದಲ್ಲಿ ಸುಮಾರು 200ರಿಂದ 300 ಸೆಂ ಮೀ ಮಳೆಯಾಗಿ ಸುಮಾರು 30 ವರ್ಷಗಳ ಹಿಂದೆ ಕಂಡಂತಹ ಮಳೆ ಈ ವರ್ಷ ಬಿದ್ದ, ರೈತರ ಬೆಳೆಯಾದ ಕಾಫಿ, ಮೆಣಸು, ಏಲಕ್ಕಿ ಶೇ.50ಕ್ಕೂ ಹೆಚ್ಚು ಭಾಗ ನಾಶವಾಗಿದೆ. ಈ ಬೆಳೆಗೆ ಕೊಳೆ ರೋಗ ಆವರಿಸಿದೆ. ಮೆಣಸು ಉದುರಿ ಹೋಗಿದ್ದು, ಏಲಕ್ಕಿ ಗೆ ರೋಗ ಆವರಿಸಿದೆ, ಜೊತೆಗೆ ಭತ್ತ, ಬಾಳೆ ಯು ಶೇ.50ಕ್ಕೂ ಹೆಚ್ಚು ನಾಶವಾಗಿದೆ ಎಂದು ತಿಳಿಸಿದರು. ಭಾರೀ ಮಳೆಯಿಂದಾಗಿ ರಸ್ತೆ, ಕೆರೆ ಕಟ್ಟೆಗಳು ಒಡೆದು ಹೋಗಿವೆ, ಕೆಲವು ಕಡೆ ರಸ್ತೆಗಳು ಗುಂಡಿ ಬಿದ್ದಿದ್ದು, ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೆರೆಕಟ್ಟೆ ಒಡೆದು ಹೋಗಿರುವುದರಿಂದ ಅತೀಯಾದ ಮಳೆಯಾದರೂ ಸಹ ನೀರು ಶೇಖರಣೆ ಸಾಧ್ಯವಾಗಿಲ್ಲ. ಇದರಿಂದ ರೈತರಿಗೆ ತೊಂದೆ ಉಂಟಾಗುತ್ತಿದೆ. ಇದರಿಂದ ಕ್ಷೇತ್ರದಕ್ಕೆ ಈಗಾಗಲೇ 1.75 ಕೋಟಿ ರು.ಹಣ ಬಿಡುಗಡೆಯಾಗಿದ್ದರು ಪರಿಹಾರ ಕಾಮಗಾರಿ ಪ್ರಾರಂಭವಾಗಿಲ್ಲ. ಜೊತೆಗೆ ಇನ್ನು ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು.
ಕಾಡಿನಲ್ಲಿ ಯೋಜನೆಗಳು ಹೆಚ್ಚಾಗಿರುವುದರಿಂದ ಆನೆಗಳು ಕಾಡನ್ನು ಬಿಟ್ಟು ನಾಡಿಗೆ ಬಂದು ಜನರ ಪ್ರಾಣಹಾನಿ ಮಾಡುತ್ತಿದೆ. ಬೆಳೆಗಳನ್ನು ನಾಶ ಮಾಡುತ್ತಿದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಕಾಡಿನನಲ್ಲಿ ನಡೆಯುತ್ತಿರುವ ಪವರ್ ಪ್ರಾಜೆಕ್ಟ್ ನಿಲ್ಲಿಸಬೇಕು ಹಾಗೂ ಹೇಮಾವತಿ ಜಲಾಶಯದ ಹಿನ್ನೀರಿನಿಂದ ಮುಳುಗಿರುವ ಪ್ರದೇಶಗಳಿಗೆ ಹಾಗೂ ಶೀತ ಪೀಡಿತ ಪ್ರದೇಶಗಳಾದ ಮಗ್ಗೆ, ಕುಂದೂರು, ಕೆಂಚಮ್ಮನ ಹೊಸಕೋಟೆಯ ಕೆಲವು ಪ್ರದೇಶಗಳಲ್ಲಿ ಹೇಮಾವಾತಿ ಹಿನ್ನೀರಿನಿಂದ ಮನೆ ಹಾಗೂ ಭೂಮಿ ಶೀತಪೀಡಿತವಾಗಿದೆ. ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವುದಾಗಿ ಹೇಳಿದರು. ಸಂಜಯ್, ಸೈಫುಲ್ಲಾ, ದೊಡ್ಡೀರಯ್ಯ, ಬಿ.ಬಿ.ಸುಂದ್ರಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

