ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್, ವೈದ್ಯರ ಕೊರತೆ
ಕ.ಪ್ರ.ವಾರ್ತೆ ಹಾಸನ ಅ.6
ಹಲವಾರು ಸಮಸ್ಯೆಗಳ ಅರಸೀಕೆರೆ ಜೆ.ಸಿ. ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ನರ್ಸ್ಗಳ ತೀವ್ರ ಕೊರತೆ ಜೊತೆಗೆ ಸ್ವಚ್ಛತೆ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಇತ್ತ ಗಮನಹರಿಸಬೇಕು, ಉದಾಸೀನತೆ ತೋರಿದರೆ ಇದನ್ನು ಆರೋಗ್ಯ ಸಚಿವರ ಗಮನಕ್ಕೆ ತರಲಾಗುವುದು ಎಂದು ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿಯ ಉಪಾಧ್ಯಕ್ಷೆ ಪದ್ಮಾಮೂರ್ತಿ ಹೇಳಿದರು.
ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿಯಿಂದ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಿ ಮಾತನಾಡಿದ ಪದ್ಮಾಮೂರ್ತಿ ವೈದ್ಯರ ಕೊರತೆ ಗಂಭೀರವಾಗಿದ್ದು ಇಲ್ಲಿ ಕಣ್ಣಿನ ವೈದ್ಯರು, ಪ್ರಸೂತಿ ತಜ್ಞರು ಸೇರಿ ಹಾಗೂ ಇನ್ನೆರಡು ತಿಂಗಳಿನಲ್ಲಿ ಮೂಳೆ ವೈದ್ಯರು ನಿವೃತ್ತಿ ಹೊಂದುತ್ತಿರುವುದರಿಂದ ತಕ್ಷಣವೇ ಈ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಿದೆ ಎಂದರು.
ಕಾರ್ಯದರ್ಶಿ ಓಂಕಾರಮ್ಮ ಮಾತನಾಡಿ, ಪಟ್ಟಣಕ್ಕೆ ಹೊಂದಿ ಕೊಂಡಂತೆ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಅಪಘಾತವಾದಾಗ ಚಿಕಿತ್ಸೆ ನೀಡಲು ಇಲ್ಲಿ ಹೆಚ್ಚಿನ ಅನುಕೂಲತೆಗಳಿಲ್ಲ. ಹೊರ ರೋಗಿಗಳು ಹೆಚ್ಚಿದ್ದು ಚಿಕಿತ್ಸೆಯ ಕೊರತೆಯಿಂದ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾಗಿರುತ್ತದೆ. ರಕ್ತ ಶೇಖರಣಾ ಕೇಂದ್ರವಿದ್ದರೂ ಉಪಯೋಗ ಕಡಿಮೆ, ನೀರಿನ ಸಮಸ್ಯೆಯಿಂದ ರೋಗಿಗಳು ಪ್ರತಿನಿತ್ಯ ಪರಿತಪಿಸುವಂತ್ತಾಗಿದೆ ಎಂದು ತಿಳಿಸಿದರು.ಸ್ತ್ರೀ ಮತ್ತು ಪ್ರಸೂತಿ ವೈದ್ಯರು ಇಲ್ಲದೇ ಹೆರಿಗೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರು. ಗಳನ್ನು ನೀಡಿ ಹೆರಿಗೆ ಮಾಡಿಸುವ ಪತಿಸ್ಥಿತಿ ತಾಲೂಕಿನ ಜನತೆಯದ್ದಾಗಿದೆ ಎಂದು ದೂರಿದರು. ಕಾರ್ಯಕರ್ತೆ ಇಂದುಮತಿ, ಕಮಲ ದಿಲೀಪ್ಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

