ಹಾಸನ

ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯರೂಪಕ

Published On :

ಬೇಲೂರು: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಬೇಲೂರು ಘಟಕ ಉದ್ಘಾಟನಾ ಸಮಾರಂಭದಲ್ಲಿ     ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಅಮೋಘ ನೃತ್ಯರೂಪಕ ಕಾರ್ಯಕ್ರಮ ಜನತೆಯ ಮನಸೂರೆಗೊಂಡಿತು.
 ಇಲ್ಲಿನ ವಿಶ್ವವಿಖ್ಯಾತ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗ  ಬೃಹತ್ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಕೇರಳದ ಮೋಹಿನಿ ಅಟ್ಟಂ, ಆಂದ್ರದ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಪ್ರಯೋಗ - ದಶಾವತಾರ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಹರಾಷ್ಟ್ರದ ಲಾವಣಿ ನೃತ್ಯ, ಸಪ್ತ ದೇವತೆಯ ನವದುರ್ಗೆಯರು, ಹನುಮನ ಒಡ್ಡೊಲಗ, ಕೇರಳದ ಒಪ್ಪಣಂ, ಪಶ್ಚಿಮ ಬಂಗಾಲದ ಪುರುಲಿಯಾ ಸಿಂಹದ ಬೇಟೆ ನೃತ್ಯ, ಕಥಕ್ ಸಮ್ಮೋಹನಂ ಇನ್ನೂ ಅನೇಕ ರಾಜ್ಯದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು.       
ಕಾರ್ಯಕ್ರಮ  ಉದ್ಘಾಟಿಸಿದ ಸಂಸ್ಥೆ ಅಧ್ಯಕ್ಷ  ಡಾ. ಎಂ. ಮೋಹನ್ ಆಳ್ವ  ಮಾತನಾಡಿ, ಜಾಗತಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ನಸಂದರ್ಭದಲ್ಲಿ  ದೇಶದ ಪರಂಪರೆ ಕಲೆ ಸಾಹಿತ್ಯ ಸಾಂಸ್ಕಸೃತಿಕ ಭಾಷೆಗಳನ್ನು ಉಳಿಸಿ ಬೆಳೆಸುವುದು ಈಗ ಅಗತ್ಯವಾಗಿದೆ ಎಂದರು. ಡಿಸೆಂಬರ್ 19 ರಿಂದ  22 ರವರೆಗೆ ಮೂಡುಬಿದರೆಯಲ್ಲಿ ವಿಶ್ವ ನುಡಿಸಿರಿ ಹಾಗೂ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುವುದು ಈ ಕಾರ್ಯಕ್ರಮಕ್ಕೆ ಯಾವುದೇ ಸರ್ಕಾರದ ಅನುದಾನವಿಲ್ಲದೆ ಸಾರ್ವಜನಿಕರ ಸಹಕಾರದಿಂದ ಹಾಗೂ ನಮ್ಮ ಶಿಕ್ಷಣ ಸಂಸ್ಥೆಯಿಂದ ನಡೆಸಲಾಗುವುದೆಂದು ತಿಳಿಸಿದರು.ಶಾಸಕ ವೈ.ಎನ್. ರುದ್ರೇಶ್ಗೌಡ  ಮಾತನಾಡಿ, ಸಾಂಸ್ಕೃತಿಕ ವೈಭವವನ್ನು ಬೇಲೂರಿನಲ್ಲಿ ಆಯೋಜಿಸಿದರೆ  ಕಾರ್ಯಕ್ರಮಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ವಿರಾಸತ್ ತಾ. ಅಧ್ಯಕ್ಷ  ಕೆ. ಸುದರ್ಶನ್, ಉಪಾಧ್ಯಕ್ಷ ಆನಂದ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿ. ಮಂಜುನಾಥ್, ಡಾ. ಚಂದ್ರಮೌಳಿ, ಪುರಸಭೆ ಸದಸ್ಯ ಬಿ. ಗಿರೀಶ್, ಪೂರ್ಣೇಶ್, ಗೌರವ ಅಧ್ಯಕ್ಷ ಜಿ.ಕೆ. ಕುಮಾರ್ ಸದಸ್ಯರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.