ಹಾಲು ಉತ್ಪಾದಕರ ಸಂಘದ ಅವ್ಯವಹಾರ ಖಂಡಿಸಿ ಪ್ರತಿಭಟನೆ
ಬೇಲೂರು: ಬಿಕ್ಕೋಡು ಹಾಲು ಉತ್ಪಾದಕ ಸಂಘದಲ್ಲಿ ಅವ್ಯವಹಾರ ನಡೆಯುತ್ತಿದ್ದು ಕೂಡಲೇ ತನಿಖೆ ನಡೆಸಿ ಸೂಪರ್ ಸೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ಹಾಲಿನ ಡೈರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಹಾಲಿನ ಡೈರಿ ಮುಂದೆ ಜಮಾಯಿಸಿದ ರೈತರು ಹಾಗೂ ಸಂಘದ ಸದಸ್ಯರು ಸಂಘದ ಕಾರ್ಯದರ್ಶಿ ಶೇಷೇಗೌಡ ವಿರುದ್ಧ ಧಿಕ್ಕಾರ ಕೂಗಿದರು.
ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬೆಳಿಗ್ಗೆ ಹಾಗೂ ಸಂಜೆ ಹೋಬಳಿಯ 8 ಗ್ರಾಮಗಳ ಸುತ್ತಮುತ್ತ 400 ಲೀಟರ್ ಹಾಲನ್ನು ರೈತರು ಡೈರಿಗೆ ಹಾಕುತ್ತಿದ್ದಾರೆ. ಸಾಲಸೋಲ ಮಾಡಿ ಕಷ್ಟಪಟ್ಟು ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಕಳೆದ 4 ತಿಂಗಳಿಂದ ಹಾಲಿನ ಹಣ ನೀಡದೆ ಹಾಲು ಉತ್ಪಾದಕರ ಸಂಘ ಸತಾಯಿಸುತ್ತಿದೆ.
ಉಡಾಫೆ ಉತ್ತರ ಒಳ್ಳೆಯದಲ್ಲ: ಈ ಬಗ್ಗೆ ಸಂಘದ ಕಾರ್ಯದರ್ಶಿಯನ್ನು ಕೇಳಿದರೆ ಉಡಾಫೆ ಉತ್ತರವನ್ನು ನೀಡುವುದಲ್ಲದೆ ಬೇಕಾದರೆ ನೀವು ಹಾಲು ಒಕ್ಕೂಟಕ್ಕೆ ದೂರು ನೀಡಿ ಎನ್ನುತ್ತಾರೆ ಎಂದು ದೂರಿದರು. ಅಲ್ಲದೆ ಹಾಲು ಉತ್ಪಾದಕ ಸಂಘದಲ್ಲಿ ದಿನನಿತ್ಯ 40 ರಿಂದ 50 ಲೀಟರ್ಹಾಲನ್ನು ಚಿಲ್ಲರೆ ಮಾರಾಟ ಮಾಡುತ್ತಿದ್ದು ಗ್ರಾಹಕರಿಗೆ ಯಾವುದೇ ಬಿಲಲ್ನೀಡುತ್ತಿಲ್ಲ, ಈ ವ್ಯವಹಾರ ಕಳೆದ ಐದಾರು ವರ್ಷದಿಂದ ನಡೆದಿಕೊಂಡು ಬರುತ್ತಿದ್ದು ಕೂಡಲೆ ತನಿಖೆಯನ್ನು ನಡೆಸಿ ಸೂಪರರ್ಸೀಡ್ಮಾಡಬೇಕು ಎಂದು ಒತ್ತಾಯಿಸಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ತಾವು ದಲಿತ ವರ್ಗಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಕಾರ್ಯದರ್ಶಿ ಶೇಷೇಗೌಡ ಪಿತೂರಿಯನ್ನು ನಡೆಸುತ್ತಿದ್ದಾರೆ. ಅವಿರೋಧವಾಗಿ ತಾವು ಬಿಕ್ಕೋಡು ಹಾಲು ಉತ್ಪಾದಕ ಸಂಘಕ್ಕೆ ಆಯ್ಕೆಯಾಗಿದ್ದರೂ ರಾತ್ರೋರಾತ್ರಿ ಸಭೆ ನಡೆಸಿ ಮಹೇಶ್ ಸೇರಿದಂತೆ ಕೆಲವು ಸದಸ್ಯರನ್ನು ಒಳಗೆ ಹಾಕಿಕೊಂಡು ಅಧಿಕಾರದಿಂದ ಕೆಳಗಿಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಮೋಹನ್, ರೇಣುಕಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಬೆಳಗ್ಗೆ ಹಾಗೂ ಸಂಜೆ ಹೋಬಳಿಯ 8 ಗ್ರಾಮಗಳ ಸುತ್ತಮುತ್ತ 400 ಲೀಟರ್ ಹಾಲನ್ನು ರೈತರು ಡೈರಿಗೆ ಹಾಕುತ್ತಿದ್ದಾರೆ. ಸಾಲಸೋಲ ಮಾಡಿ ಕಷ್ಟಪಟ್ಟು ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಕಳೆದ 4 ತಿಂಗಳಿಂದ ಹಾಲಿನ ಹಣ ನೀಡದೆ ಹಾಲು ಉತ್ಪಾದಕರ ಸಂಘ ಸತಾಯಿಸುತ್ತಿದೆ.
ಟಿ ಚಂದ್ರಶೇಖರ್ , ಮಾಜಿ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

