ಹಾಸನ

ಗ್ಯಾಸ್ ವಿತರಕರಿಗೆ ಇಲಾಖೆ ಉಪ ನಿರ್ದೇಶಕರಿಂದ ಕಟ್ಟುನಿಟ್ಟಿನ ಸೂಚನೆ

Published On :

ಕ.ಪ್ರ.ವಾರ್ತೆ ,  ಹಾಸನ ,  ಅ.18
ಗ್ರಾಹಕರಿಂದ ಹೆಚ್ಚಿನ ಬೆಲೆ ಪಡೆಯುವುದು ಮತ್ತು ನಿಗದಿತ ಸಮಯದಲ್ಲಿ ಸರಬರಾಜು ಮಾಡದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಗ್ಯಾಸ್ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ತಿಳಿಸಿದ್ದಾರೆ.
ಕಡ್ಡಾಯವಾಗಿ ಡೋರ್ ಡೆಲಿವರಿ ಮಾಡಬೇಕು. ಸಿಲಿಂಡರ್ ದರ 416.50. 0 ರಿಂದ 5 ಕಿ.ಮೀ ವರೆಗೆ ಉಚಿತ ಡೋರ್ ಡೆಲಿವರಿ ಮಾಡುವಂತೆ, 5 ಕಿ.ಮೀ ನಂತರ 1 ಕಿ.ಮೀ.ಗೆ 1.60 ಪೈಸೆ ಪಡೆಯುವಂತೆ ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಸೂಚಿಸಲಾಯಿತು.
ರೀಫಿಲ್ ಸಿಲಿಂಡರ್‌ಗಳನ್ನು ಕಡ್ಡಾಯವಾಗಿ Unic  ನಂಬರನ್ನು ನಮೂದಿಸಿ ನೀಡಬೇಕು ಮತ್ತು ಗ್ರಾಹಕರಿಂದ ಅದೇ Unic  ನಂಬರಿನ ಸಿಲಿಂಡರ್‌ಗಳನ್ನು ವಾಪಸ್ಸು ಪಡೆಯುವಂತೆ ಸೂಚಿಸಲಾಯಿತು.
ಹೊಸ ಸಂಪರ್ಕ ಕೂಡಲೇ ನೀಡುವ ವ್ಯವಸ್ಥೆ ಮಾಡಬೇಕು. ಒಂದು ಸಿಲಿಂಡರ್ ಇರುವವರಿಗೆ ಡಬ್ಬಲ್ ಸಿಲಿಂಡರ್ ನೀಡಲು ಕ್ರಮ ವಹಿಸಬೇಕು. ರೀಫಿಲ್ ಸಾಗಾಣಿಕೆ ಮಾಡುವ ಟ್ರಕ್, ಲಾರಿಯಲ್ಲಿ ಬಿಲ್ಲು ಮತ್ತು ಇತರೆ ದಾಖಲಾತಿಗಳನ್ನು ಹೊಂದಿರಬೇಕು.
Explosive Licence ಹೊಂದಿರುವ ಸ್ಥಳಗಳಲ್ಲದೇ ಇತರೆ ಸ್ಥಳಗಳಲ್ಲಿ ದಾಸ್ತಾನು ಮಾಡುವುದು ಕಾನೂನು ಪ್ರಕಾರ ಅಪರಾಧ. ಗ್ಯಾಸ್ ಏಜೆನ್ಸಿ ಕಚೇರಿ ಮುಂದೆ ದರ ಮತ್ತು ದಾಸ್ತಾನು ಫಲಕ ಗ್ರಾಹಕರಿಗೆ ಗೋಚರಿಸುವಂತೆ ಪ್ರದರ್ಶಿಸಬೇಕು. ಗ್ರಾಹಕರೊಡನೆ ಸೌಜನ್ಯದಿಂದ ವರ್ತಿಸಬೇಕು. ಗ್ಯಾಸ್ ಏಜೆನ್ಸಿಯಲ್ಲಿ Customer CarezService Helpline ತೆರೆಯಬೇಕು ಮತ್ತು ಪತ್ರಿಕೆಗಳನ್ನು ಪ್ರಚುರಪಡಿಸಬೇಕು.
ಹೋಟೆಲ್ ಹಾಗೂ ಇತರೆ ಉದ್ಧೇಶಗಳಿಗೆ ಕಡ್ಡಾಯವಾಗಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ಮತ್ತು ಅವರು ಬಳಸುವ ಬಗ್ಗೆ ನಿಗಾ ವಹಿಸಬೇಕು.ಪ್ರತಿ ಪಾಕ್ಷಿಕ ಗ್ಯಾಸ್ ಏಜೆನ್ಸಿಗಳ ಕನ್ಸೂಮರ್ ಗ್ರಾಹಕ ಮಾಹಿತಿ ಆಹಾರ ಇಲಾಖೆಗೆ foodhsn@gmail.comಗೆ ಸಲ್ಲಿಸಬೇಕು. ಗ್ರಾಹಕರಿಂದ ದೂರ ಬಾರದ ರೀತ್ಯಾ ಕೆಲಸ ನಿರ್ವಹಿಸಲು ಹಾಗೂ ದೂರು ಬಂದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಉಪ ನಿರ್ದೇಶಕ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.