ಹಾಸನ

ಸ್ವಸಹಾಯ ಸಂಘಗಳು ಇರೋದು ಕೇವಲ ಸಾಲಕ್ಕಾಗಿ ಅಲ್ಲ: ಶ್ರೀಹರಿ

Published On :

ಕ.ಪ್ರ. ವಾರ್ತೆ, ಹಾಸನ, ಅ.27
ಸ್ವ ಸಹಾಯ ಸಂಘ ಇರುವುದು ಕೇವಲ ಸಾಲಕ್ಕಾಗಿ ಅಲ್ಲ,  ಸಮಸ್ಯೆಗಳಿಂದ ಹೊರ ಬರುವುದಕ್ಕಾಗಿ ಎಂದು ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಹೇಳಿದರು.
ನಗರದ ರಂಗೋಲಿ ಹಳ್ಳದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸಮಾಲೋಚನೆ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಸಮಸ್ಯೆಗಳಿಗೂ ಗಮನ ನೀಡುವ ಉದ್ದೇಶದಿಂದ ಸಮಾಜ ಮುಖಿ ಕಾರ್ಯಕ್ರಮ ಆರಂಭಿಸಲಾಗಿದೆ. ಜತೆಯಲ್ಲಿಯೇ ಗ್ರಾಮೀಣಾಭಿವೃದ್ಧಿ, ಸಣ್ಣ ಅತಿ ಸಣ್ಣ ಕೃಷಿಕರು, ಅಸಂಘಟಿತ ವಲಯದ ಬಡವರು ಹಾಗೂ ಎಲ್ಲರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ವಧರ್ಮವನ್ನು ಒಂದೇ ಭಾವನೆಯಲ್ಲಿ ನೋಡುವ ಗುರಿ ಹೊಂದಲಾಗಿದೆ. ಬಡತನ ಮತ್ತು ಸಮಸ್ಯೆ ಯಾರಿಗೆ ಇದೆ ಅವರ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಇತ್ತೀಚಿನ  ದಿನಗಳಲ್ಲಿ ಸ್ವ ಸಹಾಯ ಸಂಘಗಳ ಪರಿಕಲ್ಪನೆ ಅವರದ್ದೇ ಆದ ದಾರಿಯಲ್ಲಿ ಸಾಗುತ್ತಿದೆ. ಸಾಲಕ್ಕಾಗಿ ಒಂದೆ ಅಲ್ಲ ಸಮಸ್ಯೆಗಳಿಂದ ಹೊರ ಬರುವುದು ಮೂಲ ಕಲ್ಪನೆಯಾಗಿದೆ ಎಂದ ಅವರು, ಯಾರೂ ಕೂಡ ಸಾಲಕ್ಕಾಗಿ ಸಂಘ ಎಂದು ತಿಳಿದುಕೊಳ್ಳದಂತೆ ತಿಳಿಸಿದರು.
ಸಮಾಜ ಸೇವಕ ಮಹಂತೇಶ್, ಕಸಾಪ ಸಂಘಟನಾ ಕಾರ್ಯದರ್ಶಿ ವಿಜಯ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಮ್ಮ, ನೇಕಾರ ಕುರುಹಿನ ಶೆಟ್ಟಿ ಸಮುದಾಯ ಭವನದ ಅಧ್ಯಕ್ಷ  ಪುಟ್ಟಸ್ವಾಮಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣಜಿತ್‌ಹಾನ್, ಸರೋಜಮ್ಮ, ಯೋಜನಾಧಿಕಾರಿ ಲೀಲಾವತಿ, ಸೇವಾಪ್ರತಿನಿಧಿ ಹೇಮಲತ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.