ದಿಡಗ ಗ್ರಾಪಂ ಅಧ್ಯಕ್ಷೆಯಾಗಿ ಪುಷ್ಪ, ಉಪಾಧ್ಯಕ್ಷರಾಗಿ ಶಂಕರೇಗೌಡ ಆಯ್ಕೆ
ದಿಡಗ (ಚನ್ನರಾಯಪಟ್ಟಣ ತಾಲೂಕು): ದಿಡಗ ಗ್ರಾಮಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಡೆದು, ಜೆಡಿಎಸ್ನ ಪುಷ್ಪರವಿಕುಮಾರ್ ಅಧ್ಯಕ್ಷೆಯಾಗಿ ಹಾಗೂ ಶಂಕರೇಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ದಿಡಗ ಗ್ರಾಮ ಪಂಚಾಯ್ತಿ ಒಟ್ಟು 21 ಸದಸ್ಯರನ್ನು ಹೊಂದಿದ್ದು, ಇವರಲ್ಲಿ ಜೆಡಿಎಸ್ 15 ಸದಸ್ಯ ಬಲಹೊಂದಿದ್ದು ಕಾಂಗ್ರೆಸ್ 6 ಸದಸ್ಯ ಬಲ ಹೊಂದಿದೆ. ಆದರೆ ಯಾವೊಬ್ಬ ಕಾಂಗ್ರೆಸ್ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಹಾಜರಾಗಿರಲಿಲ್ಲ. ನಾಲ್ಕನೇ ಅವಧಿ ಅಧಿಕಾರ ಹಿಡಿಯುವ ಅವಕಾಶ ಜೆಡಿಎಸ್ಗೆ ಒದಗಿತು. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನರಿಹಳ್ಳಿ ಪುಷ್ಪ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾದರೆ, ಬಿಸಿಎಂ ಎ. ಪುರುಷ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾಗನಹಳ್ಳಿ ಶಂಕರೇಗೌಡ ಉರುಫ್ ದೇವರಾಜ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೃತ್ಯುಂಜಯ ಕಾರ್ಯನಿರ್ವಹಿಸಿದರು. ಗ್ರಾಮಪಂಚಾಯ್ತಿ ಪಿಡಿಓ ಬಿ.ಆರ್. ಹರೀಶ, ಕಾರ್ಯದರ್ಶಿ ಹನುಮೇಗೌಡ ಇದ್ದರು. ನಿಕಟಪೂರ್ವ ಅಧ್ಯಕ್ಷೆ ಅನುಸೂಯ ನೂತನ ಅಧ್ಯಕ್ಷರಿಗೆ ಹಾರ ಹಾಕಿ ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

