ಹಾಸನ

ನ.16, 18ಕ್ಕೆ ಇಸಾನ್ ಧೂಮಕೇತು ಕುರಿತು ವಿಶೇಷ ಮಾಹಿತಿ ಶಿಬಿರ

Published On :

ಹಾಸನ: ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಇಸಾನ್ ಧೂಮಕೇತು ಗೋಚರಿಸಲಿದೆ. ಈ ಸಂಬಂಧ  ನವೆಂಬರ್ 16 ಮತ್ತು 18 ರಂದು ಹಾಸನ ನಗರದ ಉತ್ತರ ಬಡಾವಣೆಯಲ್ಲಿರುವ ಎಸ್.ಜಿ.ಆರ್. ಶಾಲೆ ಮತ್ತು ಸ್ಕಾಲರ್ ಶಾಲಾ ಆವರಣದಲ್ಲಿ 2 ದಿನಗಳ ಶಿಬಿರ ನಡೆಯಲಿದೆ.
ಪ್ರೌಢಶಾಲಾ ವಿಜ್ಞಾನ ಪಠ್ಯಕ್ಕೆ ಪೂರಕವಾಗಿ ಹಾಗೂ ಜನಸಾಮಾನ್ಯರ ಮೌಢ್ಯವನ್ನು ದೂರೀಕರಿಸುವ ಜೋತಿಷ್ಯ, ಖಗೋಳ ಹಾಗೂ ಧೂಮಕೇತು ಬಗ್ಗೆ ಶಿಬಿರ ನಡೆಯಲಿದೆ. ಜಿಲ್ಲಾ ಮಟ್ಟದ ಶಿಬಿರದಲ್ಲಿ 50 ಶಿಬಿರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಹಾಸನ ಜಿಲ್ಲೆಯ 18 ವರ್ಷ ದಾಟಿದ ಆಸಕ್ತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನ.10 ರೊಳಗಾಗಿ  ಢಿಢಿಢಿ.ಛ್ಜಿಢಡ್ಞಛ್ಠಟಿಛಡಿಛ್ಞಛ.್ಟ್ಠ್ಜ  ವೆಬ್ಗೆ ಆನ್ಲೈನ್ನಲ್ಲಿ  ನೋಂದಣಿ ಮಾಡಿಕೊಳ್ಳಬಹುದು.  ಅಥವಾ ನಿಗದಿತ ನಮೂನೆಯಲ್ಲಿ  ಸಂಚಾಲಕರು, ಶಿಕ್ಷಣ ಉಪವಿಭಾಗ ಭಾರತ ಜ್ಞಾನ ವಿಜ್ಞಾನ ಸಮಿತಿ, ಎಸ್.ಜಿ.ಆರ್. ಶಾಲೆ ಹೊಸಲೈನ್ ರಸ್ತೆ, ಉತ್ತರ ಬಡಾವಣೆ, ಹಾಸನ ಅಥವ ಸಾಫ್ಟೆಕ್ ಕಂಪ್ಯೂಟರ್ ಅಕಾಡಮಿ ಸೀತಾ-ರಾಮಾಂಜನೇಯ ದೇವಸ್ಥಾನದ ರಸ್ತೆ ಉತ್ತರ ಬಡಾವಣೆ, ಹಾಸನ ಇಲ್ಲಿಗೆ  ದಿ. 10 ನವೆಂಬರ್ 2013 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ. ಅಥವಾ ಛ್ಜಿಢಡ.ಡಟಿಣ್ಠಜಜ್ಝಜಿಜಿಟಛ್ಝಟ.್ಛ್ಟಟ, ಛ್ಜಿಢಝಡಟಿಣಣಝ್ಟ್ಟ.್ಛ್ಟ.್ಝಟಿ ಇಲ್ಲಿಗೆ ಈ ಮೇಲ್ ಮೂಲಕವೂ ಅರ್ಜಿ ನಮೂನೆಯನ್ನು ಅಪ್ಲೋಡ್ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.
ನಿಗದಿತ ಅರ್ಜಿ ನಮೂನೆಗಳು ಭಾರತ ಜ್ಞಾನ ವಿಜ್ಞಾನ ಸಮಿತಿ, ಎಸ್.ಜಿ.ಆರ್. ಶಾಲೆ, ಹೊಸಲೈನ್ ರಸ್ತೆ, ಉತ್ತರ ಬಡಾವಣೆ, ಹಾಸನ ಮತ್ತು ಸಾಫ್ಟೆಕ್ ಕಂಪ್ಯೂಟರ್ ಅಕಾಡಮಿ ಸೀತಾ-ರಾಮಾಂಜನೇಯ ದೇವಸ್ಥಾನದ ರಸ್ತೆ ಉತ್ತರ ಬಡಾವಣೆ ಉತ್ತರ ಬಡಾವಣೆ ಇಲ್ಲಿ ಉಚಿತವಾಗಿ ಪಡೆಯಬಹುದು ಅಥವಾ  ಡಿಡಿಠಣಣಣಡ್ಛ್ಝಜಟ್ಛಿಜಟಜಡಡಜಟ್ಜಿಜ್ಠ.ಛಿಟ್ಟ್ಜಡಠ್ಟಡಿ.್ಝಟಿ  ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ತರಬೇತಿಗೆ ಯಾವುದೇ ಶುಲ್ಕ ಇರುವುದಿಲ್ಲ. ಉಚಿತ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗುವುದು ಎಂದು  ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಎಚ್.ಎ.ಅಹಮ್ಮದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.